ಇವೆಲ್ಲಾ ಸಂಸತ್ತಿನ ಹೊರಗಿಟ್ಟುಕೊಳ್ಳಿ, ಸೋನಿಯಾ ಗಾಂಧಿಗೆ ಸ್ಪೀಕರ್ ವಾರ್ನಿಂಗ್!

By Suvarna NewsFirst Published Dec 15, 2022, 5:30 PM IST
Highlights

ಲೋಕಸಭಾ ಸ್ವೀಕರ್ ಓಮ್ ಬಿರ್ಲಾ ಶಿಸ್ತಿಗೆ ಮೊದಲ ಆದ್ಯತೆ ನೀಡುತ್ತಾರೆ. ಸದನದಲ್ಲಿ ನಿಯಮ ಉಲ್ಲಂಘಿಸಿದರೆ ಕಡಕ್ ಎಚ್ಚರಿಕೆಯನ್ನು ನೀಡುತ್ತಾರೆ. ಹೀಗೆ ಸದನದಲ್ಲಿ ನಿಯಮ ಮೀರಿ ವರ್ತಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಸ್ಪೀಕರ್ ಖಡಕ್ ವಾರ್ನಿಂಗ್ ನೀಡಿದ ಘಟನೆ ನಡೆದಿದೆ. 
 

ನವದೆಹಲಿ(ಡಿ.15):  ಚಳಿಗಾಲದ ಅಧಿವೇಶನ ಕಾವೇರುತ್ತಿದೆ. ಸದ್ಯ ಪ್ರತಿಪಕ್ಷಗಳಿಗೆ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾ ನಡೆಸಿದ ಕಿರಿಕ್ ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಂತೆ ಕಾಂಗ್ರೆಸ್ ತನ್ನ ಪ್ಲಾನ್ ಬದಲಿಸಿದೆ. ಸದನದಲ್ಲೇ ಪ್ಲಾನ್ ಬದಲಿಸಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇತರರ ನಾಯಕರ ಜೊತೆ ಚರ್ಚಿಸಿದ್ದಾರೆ. ಇದನ್ನು ಗಮನಿಸಿದ ಲೋಕಸಭಾ ಸ್ವೀಕರ್ ಒಮ್ ಬಿರ್ಲಾ, ಸೋನಿಯಾ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಿಮಗೆ ನಿಮ್ಮ ನಾಯಕರ ಜೊತೆ ಸಭೆ ಹಾಗೂ ಚರ್ಚೆ ಮಾಡಲು ಹಕ್ಕಿದೆ. ಆದರೆ ಈ ಸದನದೊಳಗೆ ಅಲ್ಲ. ಸಂಸತ್ತಿನ ಹೊರಗೆ ನೀವು ಮಾತುಕತೆ ನಡೆಸಿ ಎಂದು ಓಮ್ ಬಿರ್ಲಾ ಸೂಚಿಸಿದ್ದಾರೆ. 

ತವಾಂಗ್ ಗಡಿಯಲ್ಲಿ ಚೀನಾ ಜೊತೆಗಿನ ಕಿರಿಕ್ ಕುರಿತು ಕೇಂದ್ರ ಸರ್ಕಾರ ಸದನಕ್ಕೆ ಉತ್ತರ ನೀಡುತ್ತಿದ್ದ ವೇಳೆ, ಕಾಂಗ್ರೆಸ್ ತನ್ನ ಪ್ಲಾನ್ ಬದಲಿಸಲು ಮುಂದಾಗಿದೆ. ಹೀಗಾಗಿ ಸೋನಿಯಾ ಗಾಂಧಿ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್ ಜೊತೆ ಚರ್ಚಿಸಿದ್ದಾರೆ. ಇದನ್ನು ಗಮನಿಸಿದ ಓಮ್ ಬಿರ್ಲಾ, ನೀವು ಮೀಟಿಂಗ್ ಮಾಡಿ, ಆದರೆ ಈ ಸದನೊಳಗೆ ಸಾಧ್ಯವಿಲ್ಲ. ನೀವು ಸದನದ ನಿಯಮ ಮೀರುತ್ತಿದ್ದೀರಿ. ಇದಕ್ಕೆ ಅವಕಾಶವಿಲ್ಲ ಎಂದು ಒಮ್ ಬಿರ್ವಾ ಹೇಳಿದ್ದಾರೆ.

 

ಇಂದು ಅಗ್ನಿ-5 ಕ್ಷಿಪಣಿ ಪರೀಕ್ಷೆ ಮಾಡಲಿರುವ ಭಾರತ? ತವಾಂಗ್‌ ಚಕಮಕಿ ನಡುವೆ ರಕ್ಷಣಾ ಪಡೆಗಳಿಗೆ ಮತ್ತಷ್ಟು ಬಲ!

ಸೋನಿಯಾ ಗಾಂಧಿ ಮಾತ್ರವಲ್ಲ, ಎನ್‌ಸಿಪಿ ಹಿರಿಯ ನಾಯಕ ಸಂಸದ ಶ್ರೀನಿವಾಸ್ ಪಾಟಿಲ್‌ಗೆ ಖಡಕ್ ವಾರ್ನಿಂಗ್ ನೀಡಿದ್ದರು. ಪ್ರಶ್ನೋತ್ತರ ವೇಳೆಯಲ್ಲಿ ಶ್ರೀನಿವಾಸ್ ಪಾಟಿಲ್ ಸರಿಯಾಗಿ ಕುಳಿತುಕೊಳ್ಳದೇ ಪ್ರಶ್ನೆ ಕೇಳಿದ್ದಾರೆ. ಸದನದ ಹಿರಿಯ ಸದಸ್ಯರಾಗಿ ಸರಿಯಾಗಿ ಕೂತು ಪ್ರಶ್ನೆ ಕೇಳಲು ಸಾಧ್ಯವಿಲ್ಲವೇ ಎಂದು ಬಿರ್ಲಾ ಸೂಚಿಸಿದ್ದರು.

ಮೋದಿ ಸರ್ಕಾರ ಸತ್ಯ ಮುಚ್ಚಿಡುತ್ತಿದೆ: ಕಾಂಗ್ರೆಸ್‌ ಆರೋಪ
ಸಂಸತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಭಾರತ ಹಾಗೂ ಚೀನಾ ಯೋಧರ ನಡುವೆ ತವಾಂಗ್‌ನಲ್ಲಿ ನಡೆದ ಬಿಕ್ಕಟ್ಟಿನ ಬಗ್ಗೆ ನೀಡಿದ ಮಾಹಿತಿ ಅಪೂರ್ಣವಾಗಿದೆ. ಸಂಪೂರ್ಣ ಸತ್ಯವನ್ನು ಸರ್ಕಾರ ದೇಶದಿಂದ ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ‘ಡಿ.9ರಂದು ನಡೆದ ಘಟನೆಯ ಬಗ್ಗೆ ರಾಜನಾಥ ಸಿಂಗ್‌ ಅವರು ಏಕೆ ತಡವಾಗಿ ಮಾಹಿತಿ ನೀಡಿದ್ದಾರೆ? ಇದನ್ನು ಮೊದಲೇ ಏಕೆ ತಿಳಿಸಿಲ್ಲ? ನಮ್ಮಿಂದ ಏನನ್ನು ಮುಚ್ಚಿಡಲಾಗುತ್ತಿದೆ? ಈ ಸರ್ಕಾರ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಆ ಸತ್ಯ ಇಡೀ ದೇಶಕ್ಕೆ ತಿಳಿಯಲಿ ಎಂಬುದೇ ನಮ್ಮ ಆಗ್ರಹವಾಗಿದೆ’ ಎಂದು ಕಾಂಗ್ರೆಸ್‌ ವಕ್ತಾರ ಗೌರವ್‌ ಗೋಗೊಯ್‌ ಹೇಳಿದ್ದಾರೆ.

ಚೀನಾ ಕಿರಿಕ್ ಬೆನ್ನಲ್ಲೇ ತವಾಂಗ್ ಗಡಿಯಲ್ಲಿ ಭಾರತೀಯ ವಾಯುಪಡೆಯ ಹದ್ದಿನ ಕಣ್ಣು!

‘ಸರ್ಕಾರವು ಸತ್ಯವನ್ನು ಹೇಳಬೇಕೇ ಹೊರತು ರಾಜೀವ್‌ ಗಾಂಧಿ ಸಂಸ್ಥೆಯ ಎಫ್‌ಸಿಆರ್‌ಎ ನೋಂದಣಿ ರದ್ದುಗೊಳಿಸಿದ್ದು ಸೇರಿ ಇನ್ನಿತರೆ ವಿಚಾರಗಳನ್ನು ಪ್ರಸ್ತಾಪಿಸಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಬಾರದು’ ಎಂದು ಗೋಗೊಯ್‌ ಹೇಳಿದ್ದಾರೆ.

‘ಚೀನಾ ಯೋಧರು ಅರುಣಾಚಲ ಪ್ರದೇಶದ ಗಡಿ ಪ್ರದೇಶವಾದ ತವಾಂಗ್‌ನ ಯಾಂಗ್‌ಟ್ಸೆ ಪ್ರದೇಶದಲ್ಲಿ ಯಥಾಸ್ಥಿತಿ ಬದಲಿಸಿ ಮುನ್ನುಗ್ಗಲು ಯತ್ನಿಸಿದರು. ಇದೇ ಭಾರತ ಹಾಗೂ ಚೀನಾ ಯೋಧರ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಸಕಾಲಕ್ಕೆ ಭಾರತದ ವೀರ ಪಡೆಗಳು, ಚೀನಾ ಪಡೆಗಳನ್ನು ಹಿಮ್ಮೆಟ್ಟಿಸಿವೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ.

click me!