Russia Ukraine war ಭಾರತದಲ್ಲಿ ಪತ್ರಿಕೆ ಮುದ್ರಣಕ್ಕೆ ಕಾಗದ ಕೊರತೆ!

By Suvarna NewsFirst Published Mar 21, 2022, 5:14 AM IST
Highlights

- ಶೇ.40% ಕಾಗದ ರಷ್ಯಾದಿಂದ ಆಮದು
- ಆಮದು ಕಾಗದದ ದರವೂ ಹೆಚ್ಚಳ
- ದಿನಪತ್ರಿಕೆಗಳಿಗೆ ಮತ್ತೊಂದು ಸಂಕಷ್ಟ

ನವದೆಹಲಿ(ಮಾ.21): ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ನ್ಯೂಸ್‌ ಪ್ರಿಂಟ್‌ (ಕಾಗದ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಭಾರತೀಯ ದಿನಪತ್ರಿಕೆಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ ಎಂದು ವರದಿಯಾಗಿದೆ.

ಭಾರತ ಪತ್ರಿಕೆಗಳ ಮುದ್ರಣಕ್ಕೆ ಅಗತ್ಯವಿರುವ ಶೇ.40ರಷ್ಟುಕಾಗದವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಉಕ್ರೇನ್‌-ರಷ್ಯಾ ಬಿಕ್ಕಟ್ಟು ಕಾರಣದಿಂದ ಹಲವಾರು ಜಾಗತಿಕ ಸರಕು ಸಾಗಣೆ ಕಂಪನಿಗಳು ರಷ್ಯಾ ಬಂದರಿನಿಂದ ಬುಕ್ಕಿಂಗ್‌ ನಿಲ್ಲಿಸಿವೆ. ಇದು ನ್ಯೂಸ್‌ಪ್ರಿಂಟ್‌ ಕಂಟೈನರ್‌ಗಳ ಸಂಗ್ರಹಕ್ಕೆ ಕಾರಣವಾಗಿದೆ. ಅಲ್ಲದೆ ಹಣ ದುಬ್ಬರ, ಜಾಗತಿಕ ನೈಸರ್ಗಿಕ ಇಂಧನ ದರ ಹೆಚ್ಚಳ ಪರಿಣಾಮ ಕಾಗದ ದರ ಶೇ.30ರಷ್ಟುಹೆಚ್ಚಾಗಿದೆ.

2019ರಲ್ಲಿ ಪ್ರತಿ ಟನ್‌ ಆಮದು ಕಾಗದದ ಬೆಲೆ 450 ಡಾಲರ್‌ಗಳಿಂದ 950 ಡಾಲರ್‌ಗೆ ಏರಿಕೆಯಾಗಿದೆ. ದಿನಪತ್ರಿಕೆಯ ಒಟ್ಟು ವೆಚ್ಚದ ಶೇ.40-50ರಷ್ಟುಕಾಗದಕ್ಕೇ ಹೋಗುತ್ತಿದೆ. ಇನ್ನು ಶಾಯಿ, ಅಲ್ಯೂಮಿನಿಯಂ ಪ್ಲೇಟ್‌ಗಳು, ಮುದ್ರಣ ಮತ್ತು ಸಾರಿಗೆ ವೆಚ್ಚ ಸಹ ಹೆಚ್ಚು ದುಬಾರಿಯಾಗುತ್ತಿದೆ. ಇದು ಈಗಾಗಲೇ ನಷ್ಟದಲ್ಲಿರುವ ದಿನಪತ್ರಿಕೆಗಳ ಮೇಲೆ ಮತ್ತಷ್ಟುಒತ್ತಡ ಹೇರಿದೆ.

ವಿಶ್ದದ ದೊಡ್ಡಣ್ಣನಿಗೆ ರಷ್ಯಾದ ಮೇಲೆ ಯಾಕಿಷ್ಟು ಕೋಪ? ವಾರ್ ಕ್ರಿಮಿನಲ್ ಎಂದಿದ್ದೇಕೆ ಬೈಡೆನ್?

ಇ-ಕಾಮರ್ಸ್‌ ಕ್ಷೇತ್ರದಲ್ಲಿನ ಅಗಾಧ ಬೆಳವಣಿಗೆಯಿಂದಾಗಿ ಅನೇಕ ದೇಶೀಯ ನ್ಯೂಸ್‌ಪ್ರಿಂಟ್‌ ತಯಾರಕರು ತಮ್ಮ ಗಿರಣಿಗಳನ್ನು ಪ್ಯಾಕೇಜಿಂಗ್‌ ವಸ್ತುಗಳನ್ನು ಉತ್ಪಾದಿಸಲು ಗಿರಣಿಗಳಾಗಿ ಪರಿವರ್ತಿಸುತ್ತಿದ್ದಾರೆ. ಭಾರತದಲ್ಲಿ ಕೆಲವೇ ಕೆಲವು ಗಿರಣಿಗಳು ದಿನಪತ್ರಿಕೆ ಕಾಗದವನ್ನು ಉತ್ಪಾದಿಸುತ್ತಿವೆ. ಕೊರೋನಾ ಕಾರಣದಿಂದ ಈ ಉದ್ಯಮವೂ ನೆಲಕಚ್ಚಿದೆ.

ಸಗಟು ಡೀಸೆಲ್‌ ಲೀ.ಗೆ 25 ರು. ಹೆಚ್ಚಳ
ಗಟು ಬಳಕೆದಾರರಿಗೆ ಪೂರೈಕೆ ಮಾಡುವ ಡೀಸೆಲ್‌ನ ಬೆಲೆಯನ್ನು ಪ್ರತಿ ಲೀಟರ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. ಇದು ಕೆಎಸ್‌ಆರ್‌ಟಿಸಿಯಂಥ ಸಗಟು ಖರೀದಿದಾರರಿಗೆ ಬಿಸಿ ಮುಟ್ಟಿಸಿದೆ. ಆದರೆ ಪೆಟ್ರೋಲ್‌-ಡೀಸೆಲ್‌ ಬಂಕ್‌ಗಳಲ್ಲಿ ಡೀಸೆಲ್‌ ಖರೀದಿ ಮಾಡುವ ಸಾಮಾನ್ಯ ಖರೀದಿದಾರರಿಗೆ ದರ ಹೆಚ್ಚಿಸದೇ ಸಾಮಾನ್ಯ ದರವನ್ನೇ ಮುಂದುವರಿಸಲಾಗಿದೆ.

ಶಬ್ದಕ್ಕಿಂತ ಹತ್ತು ಪಟ್ಟು ವೇಗ.. ಉಕ್ರೇನ್ ಮೇಲೆ ರಷ್ಯಾದ ಹೈಪರ್‌ಸಾನಿಕ್ ಕ್ಷಿಪಣಿ

2021ರ ನ.4ರ ನಂತರ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪರಿಷ್ಕರಣೆ ಆಗಿಲ್ಲ. ಆದರೆ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 40% ಹೆಚ್ಚಳವಾಗಿದ್ದು, 100 ಡಾಲರ್‌ ದಾಟಿದೆ. ಹೀಗಾಗಿ ತೈಲ ಕಂಪನಿಗಳು ಭಾರೀ ನಷ್ಟಅನುಭವಿಸತೊಡಗಿವೆ. ಇದನ್ನು ಸರಿದೂಗಿಸಲು ಸಗಟು ಡೀಸೆಲ್‌ ದರವನ್ನು ಲೀಟರ್‌ಗೆ 25 ರು.ನಷ್ಟುಸರ್ಕಾರ ಹೆಚ್ಚಿಸಿದೆ. ಇದರಿಂದಾಗಿ ಮುಂಬೈನಲ್ಲಿ ಸಾಮಾನ್ಯ ಪೆಟ್ರೋಲ್‌ ಪಂಪ್‌ಗಳಲ್ಲಿ ಡೀಸೆಲ್‌ ಬೆಲೆ 94.14 ರು. ಇದ್ದರೆ, ಸಗಟು ಡೀಸೆಲ್‌ ಬೆಲೆ 122.05 ರು.ಗೆ ಏರಿದೆ. ದೇಶದ ಇತರೆಡೆ ಕೂಡ ಇದೇ ರೀತಿ ದರ ಹೆಚ್ಚಿದೆ.

ಇದರ ಪರಿಣಾಮ, ಖಾಸಗಿ ತೈಲ ಮಾರಾಟ ಕಂಪನಿಗಳು, ಸಗಟಿನಲ್ಲಿ ತೈಲ ಖರೀದಿ ಮಾಡುವ ಸಾರಿಗೆ ಸಂಸ್ಥೆಗಳು, ಜನರೇಟರ್‌ಗೆ ಡೀಸೆಲ್‌ ಖರೀದಿಸುವ ಮಾಲ್‌ಗಳು, ಮುಂತಾದ ಸಗಟು ಡೀಸೆಲ್‌ ಬಳಕೆದಾರರ ಮೇಲಾಗಿದೆ. ಈ ಸಗಟು ಡೀಸೆಲ್‌ ಬಳಕೆದಾರರು ಸಗಟು ಡೀಸೆಲ್‌ ದರ 25 ರು. ಹೆಚ್ಚಾದ ಕಾರಣ ನೇರವಾಗಿ ತೈಲ ಕಂಪನಿಗಳಿಂದ ಟ್ಯಾಂಕರ್‌ನಲ್ಲಿ ಡೀಸೆಲ್‌ ತರಿಸಿಕೊಳ್ಳದೆ ಪೆಟ್ರೋಲ್‌ ಪಂಪ್‌ಗಳಿಗೇ ಹೋಗಿ ಡೀಸೆಲ್‌ ಖರೀದಿಸುತ್ತಿವೆ. ಇದರಿಂದ ಖಾಸಗಿ ಪೆಟ್ರೋಲ್‌ ಕಂಪನಿಗಳಿಗೆ ನಷ್ಟಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.

ಖಾಸಗಿ ಬಂಕ್‌ಗಳು ಮುಚ್ಚುವ ಭೀತಿ
ಸರ್ಕಾರ ಸಗಟು ಡೀಸೆಲ್‌ ಬೆಲೆಯನ್ನು 25 ರು. ಹೆಚ್ಚಿಸಿದ ಪರಿಣಾಮ ಪರಿಣಾಮ ಖಾಸಗಿ ಪೆಟ್ರೋಲ್‌ ಪಂಪ್‌ಗಳು ಮುಚ್ಚುವ ಭೀತಿ ಎದುರಿಸುವಂತಾಗಿದೆ. ನಾಯರಾ ಎನರ್ಜಿ, ಜಿಯೋ-ಬಿಪಿ, ಶೆಲ್‌ನಂತಹ ಖಾಸಗಿ ಚಿಲ್ಲರೆ ತೈಲ ಮಾರಾಟ ಸರಣಿ ಕಂಪನಿಗಳು ತೀವ್ರ ನಷ್ಟಕ್ಕೆ ಒಳಗಾಗಿವೆ.
 

click me!