Israel PM Visit ಬಾಂಧ್ಯವದ 30ನೇ ವರ್ಷಾಚರಣೆ, ಏ.2ಕ್ಕೆ ಇಸ್ರೇಲ್‌ ಪ್ರಧಾನಿ ಭಾರತಕ್ಕೆ!

By Kannadaprabha News  |  First Published Mar 21, 2022, 4:35 AM IST
  •  ಏಪ್ರಿಲ್‌ ಮೊದಲ ವಾರದಲ್ಲಿ ಭಾರತಕ್ಕೆ ಇಸ್ರೇಲ್ ಪ್ರಧಾನಿ ಭೇಟಿ 
  • ಬೆನೆಟ್‌ ಅವರ ಮೊದಲ ಭಾರತ ಭೇಟಿಗೆ ತಯಾರಿ
  • ಉಭಯ ದೇಶಗಳ ನಡುವಿನ ಸಹಕಾರವನ್ನು ವಿಸ್ತರಿಸುವ ಗುರಿ

ಜೆರುಸಲೇಂ(ಮಾ.21): ಭಾರತ ಮತ್ತು ಇಸ್ರೇಲ್‌ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 30 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಸಂಭ್ರಮನ್ನು ಆಚರಿಸಿಕೊಳ್ಳಲು ಏಪ್ರಿಲ್‌ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ತಿಳಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ ಏ.2ರಿಂದ 5ರವರೆಗೆ ಭೇಟಿ ನಡೆಯಲಿದೆ.

ಇದು ಬೆನೆಟ್‌ ಅವರ ಮೊದಲ ಭಾರತ ಭೇಟಿಯಾಗಿದ್ದು ಈ ಭೇಟಿಯ ವೇಳೆ, ಉಭಯ ದೇಶಗಳ ನಡುವಿನ ತಂತ್ರಜ್ಞಾನ, ಭದ್ರತೆ ಮತ್ತು ಸೈಬರ್‌, ಕೃಷಿ ಮತ್ತು ಹವಮಾನ ಉಭಯ ದೇಶಗಳ ನಡುವಿನ ಸಹಕಾರವನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.

Tap to resize

Latest Videos

‘ನನ್ನ ಸ್ನೇಹಿತನ (ಮೋದಿ) ಆಹ್ವಾನದ ಮೆರೆಗೆ ಮೊದಲ ಭಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಈ ಭೇಟಿಯಿಂದ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟುಗಟ್ಟಿಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.

8 ಸಾವಿರ ವರ್ಷ ಇಸ್ರೇಲ್ ದೇಶವನ್ನು ತೊರೆಯುವಂತಿಲ್ಲ ಎಂದ ಕೋರ್ಟ್!

ಭಾರತೀಯ ಸಂಸ್ಕೃತಿ ಮತ್ತು ಯಹೂದಿ ಸಂಸ್ಕೃತಿ ವಿಭಿನ್ನವಾಗಿದ್ದು ನಾವು ಭಾರತೀಯರಿಂದ ಕಲಿಯುವುದು ಸಾಕಷ್ಟಿದೆ ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್‌ ರಾಜಕೀಯಕ್ಕೆ ಬನ್ನಿ: ಮೋದಿಗೆ ಇಸ್ರೇಲ್‌ ಪ್ರಧಾನಿ ಆಹ್ವಾನ!
 ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್‌ನ ನೂತನ ಪ್ರಧಾನಿ ನಫ್ತಾಲಿ ಬೆನ್ನೆಟ್ಟೆಅವರು ತಮ್ಮ ಪಕ್ಷಕ್ಕೆ ಆಹ್ವಾನಿಸಿದ ಹಾಸ್ಯ ಪ್ರಸಂಗವೊಂದಕ್ಕೆ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ‘ಕಾಪ್‌ 26’ ಶೃಂಗಸಭೆ ಸಾಕ್ಷಿಯಾಯಿತು.

ಇತ್ತೀಚೆಗಷ್ಟೇ ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾದ ನಫ್ತಾಲಿ ಅವರು ಮಂಗಳವಾರ ಇಲ್ಲಿ ಪ್ರಧಾನಿ ಮೋದಿ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಈ ವೇಳೆ ಮೋದಿ ಅವರ ಕುರಿತು ಹೊಗಳಿಕೆಯ ಸುರಿಮಳೆ ಸುರಿಸಿದ ನಫ್ತಾಲಿ, ‘ನೀವು ಇಸ್ರೇಲ್‌ನ ಅತ್ಯಂತ ಜನಪ್ರಿಯ ವ್ಯಕ್ತಿ. ಬನ್ನಿ ನೀವು ನಮ್ಮ ಪಕ್ಷ (ನ್ಯೂ ರೈಟ್‌ ಪಕ್ಷ) ಸೇರಿಕೊಳ್ಳಿ’ ಎಂದು ಲಘು ದಾಟಿಯಲ್ಲಿ ಆಹ್ವಾನಿಸಿದ ಘಟನೆ ನಡೆಯಿತು. ಈ ವೇಳೆ ಮೋದಿ ಅವರು ಜೋರಾಗಿ ನಗುತ್ತಾ ‘ಧನ್ಯವಾದ...ಧನ್ಯವಾದ’ ಎಂದು ನಫ್ತಾಲಿ ಅವರ ಕೈಕುಲುಕಿದರು.

ಇಸ್ರೇಲ್‌ನ ಕಸ್ಟಮೈಸಡ್ ಪ್ರಿಂಟೆಡ್‌ ಬರ್ಗರ್‌ 6 ನಿಮಿಷದಲ್ಲಿ ಸವಿಯಲು ಸಿದ್ಧ!

ಇದಕ್ಕೂ ಮೊದಲು ಮೋದಿಯನ್ನು ಭೇಟಿಯಾದ ವೇಳೆ, ‘ನಾನು ನಿಮಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಪರಸ್ಪರ ಆಳವಾದ ಸಂಬಂಧ ಹೊಂದಿರುವ ಎರಡು ವಿಶಿಷ್ಠ ನಾಗರಿಕತೆಗಳಾದ ಇಸ್ರೇಲ್‌ ಮತ್ತು ಭಾರತದ ನಡುವಣ ಸಂಬಂಧವನ್ನು ಮರು ಆರಂಭಿಸಿದ ವ್ಯಕ್ತಿ ನೀವು. ಇದು ನಿಮ್ಮ ಹೃದಯದಿಂದ ಬಂದಿದ್ದು ಎಂಬುದನ್ನು ನಾನು ಬಲ್ಲೆ. ಇದು ಕೇವಲ ಹಿತಾಸಕ್ತಿಯ ವಿಷಯವಲ್ಲ, ಇದು ನೀವು ಹೊಂದಿರುವ ಬದ್ಧತೆಯ ವಿಷಯ. ಅದನ್ನು ನಾವು ಅನುಭವಿಸಿದ್ದೇವೆ. ಉಭಯ ದೇಶಗಳ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯುವ ಮೂಲಕ ಇತಿಹಾಸದ ಪುಟಗಳಲ್ಲಿ ಸೇರಿದ ಈ ಹೊಸ ಬೆಳವಣಿಗೆಗೆ ಕಾರಣವಾದ ನಿಮ್ಮ ಈ ಅನುಸಂಧಾನ ಕುರಿತು ಇಸ್ರೇಲಿ ಜನರ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ’ ಎಂದು ಇಸ್ರೇಲ್‌ ಪ್ರಧಾನಿ ಅವರು ಮೋದಿ ಅವರನ್ನು ಪ್ರಶಂಸಿಸಿದರು.

ಇಸ್ರೇಲ್‌ ಜತೆ ಗಳಸ್ಯ ಕಂಠಸ್ಯ
2018ರಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದ ವೇಳೆ, ಭಾರತದೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನ, ಸೈಬರ್‌ ಭದ್ರತೆ, ತೈಲ ಹಾಗೂ ಅನಿಲ ಉತ್ಪನ್ನಗಳ ಒಪ್ಪಂದಗಳಿಗೆ ಸಹಿ ಹಾಕಿದರು.

ಯಾವುದೇ ವಿಷಯವಿರಲಿ, ಎಂಥದ್ದೇ ಪರಿಸ್ಥಿತಿ ಇರಲಿ ಇಂದು ಭಾರತದ ನಡೆ, ನಿಲುವು ಜಾಗತಿಕ ಮಟ್ಟದಲ್ಲಿ ಮಹತ್ವದ್ದೆನಿಸಲಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ವರ್ಷಗಳಲ್ಲಿ ಭಾರತಕ್ಕೆ ವಿಶ್ವಮಾನ್ಯತೆ ದೊರೆಯುವಂತೆ ವಿದೇಶಾಂಗ ನೀತಿಯನ್ನು ಚಾಣಾಕ್ಷತನದಿಂದ ರೂಪಿಸಿದ್ದು.

click me!