ಕಳೆದೊಂದು ವರ್ಷದಿಂದ ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ, ಯುದ್ಧವಿಮಾನ, ರೆಡಾರ್ ಸೇರಿದಂತೆ ಹಲವು ಯುದ್ದೋಪಕರಣಗಳು ಸೇರ್ಪಡೆಯಾಗಿದೆ. ಫ್ರಾನ್ಸ್‌ನಿಂದ ರಾಫೆಲ್ ಫೈಟರ್ ಜೆಟ್ ಭಾರಿ ಸದ್ದು ಮಾಡಿದೆ. ಇದೀಗ ಅಮೆರಿಕದಿಂದ ಖರೀದಿಸಿರುವ ಪೊಸೈಡಾನ್ 8I ಏರ್‌ಕ್ರಾಫ್ಟ್ ಭಾರತೀಯ ನಕೌಪಡೆಗೆ ಸೇರಿಕೊಂಡಿದೆ.
ನವದೆಹಲಿ(ನ.19): ಭಾರತೀಯ ನಾಕೌಪಡೆ ಮೊತ್ತ ಮೊದಲ ಪೊಸೈಡಾನ್ 8I ಆ್ಯಂಟಿ ಸಬ್‌ಮರೈನ್ ಏರ್‌ಕ್ರಾಫ್ಟ್ ಸೇರ್ಪಡೆಗೊಂಡಿದೆ. ಅತ್ಯಾಧುನಿಕ ಸೆನ್ಸಾರ್, ಕಡಲಲ್ಲಿ ವಿರೋಧಿಗಳ ಮೇಲೆ ಹದ್ದಿನ ಕಣ್ಣಿಡಬಲ್ಲ ಹಾಗೂ ಜಲಂತರ್ಗಾಮಿ ವಿರೋಧಿ ಏರ್‌ಕ್ರಾಫ್ಟ್ ಇದಾಗಿದ್ದು, ಅಮೆರಿಕದಿಂದ ಖರೀದಿಸಲಾಗಿದೆ.
ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ: ರುದ್ರಂ ಆ್ಯಂಟಿ ರೇಡಿಯೇಶನ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
undefined
ಬರೋಬ್ಬರಿ 1.1 ಬೀಲಿಯನ್ ಅಮೆರಿಕನ್ ಡಾಲರ್(81,61,73,05,000 ರೂಪಾಯಿ) ನೀಡಿ ಭಾರತ 4 ಪೊಸೈಡಾನ್ 8I ಆ್ಯಂಟಿ ಸಬ್‌ಮರೈನ್ ಏರ್‌ಕ್ರಾಫ್ಟ್ ಖರೀದಿಸಿದೆ. ಇದರಲ್ಲಿ ಮೊದಲ ಏರ್‌ಕ್ರಾಫ್ಟ್ ಇದೀಗ ಭಾರತೀಯ ನೌಕಾಪಡೆ ಸೇರಿಕೊಂಡಿದೆ. ಭಾರತೀಯ ನೌಕಾಪಡೆ P-8I ಏರ್‌ಕ್ರಾಫ್ಟ್ ಹೊಂದಿದೆ. ಈ ಏರ್‌ಕ್ರಾಫ್ಟ್‌ಗಳನ್ನು ಹಿಂದೂ ಮಹಾಸಾಗರದಲ್ಲಿ ಚೀನಾ ಯುದ್ದನೌಕೆ, ಸಬ್ ಮರಿನ್ ಮೇಲೆ ಹದ್ದಿನ ಕಣ್ಮಿಡಲು ನಿಯೋಜಿಸಲಾಗಿದೆ.
ಇಸ್ರೇಲ್ ನಿರ್ಮಿತ ಫಾಲ್ಕನ್ ಖರೀದಿಗೆ ಭಾರತ ಒಪ್ಪಂದ: ಚೀನಾ, ಪಾಕ್‌ಗೆ ಶುರುವಾಯ್ತು ನಡುಕ!...
ನೂತನ ಪೊಸೈಡಾನ್ 8I ಏರ್‌ಕ್ರಾಫ್ಟ್ ಗೋವಾದ ನೇವಲ್ ಬೇಸ್‌ನಲ್ಲಿರುವ INS ಹನ್ಸಾ ಮೇಲೆ ಬಂದಿಳಿದಿದೆ. 2016ರಲ್ಲಿ ರಕ್ಷಣಾ ಸಚಿವರು ಅಮೆರಿಕ ಜೊತೆ 1.1 ಬೀಲಿಯನ್ ಡಾಲರ್ ಒಪ್ಪಂದ ಮೂಲಕ ಪೊಸೈಡಾನ್ 8I ಏರ್‌ಕ್ರಾಫ್ಟ್ ಖರೀದಿಸಿದ್ದರು. 4 ವರ್ಷಗಳ ಬಳಿಕ ಪೊಸೈಡಾನ್ 8I ಏರ್‌ಕ್ರಾಫ್ಟ್ ಭಾರತದ ನೌಕಾಪಡೆ ಸೇರಿಕೊಂಡಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ P-8I ಖರೀದಿ ಒಪ್ಪಂದವನ್ನು ಕ್ಲೀಯರ್ ಮಾಡಿದೆ. ಕೆಲ ತಿಂಗಳುಗಳ ಹಿಂದೆ P-8I ಏರ್‌ಕ್ರಾಫ್ಟ್‌ಗಳನ್ನು ಪೂ್ರ್ವ ಲಡಾಖ್‌ನಲ್ಲಿ ಚೀನಾ ಸೈನ್ಯದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು P-8I ಏರ್‌ಕ್ರಾಫ್ಟ್ ನಿಯೋಜಿಸಲಾಗಿದೆ.