76 ಮಕ್ಕಳ ರಕ್ಷಿಸಿದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್‌ಗೆ ಭರ್ಜರಿ ಗಿಫ್ಟ್!

By Suvarna NewsFirst Published Nov 19, 2020, 5:59 PM IST
Highlights

ಒಂದಲ್ಲ, ಎರಡಲ್ಲ,  ಬರೋಬ್ಬರಿ 76 ಮಕ್ಕಳ ರಕ್ಷಿಣೆ. ಕಠಿಣ ಪರಿಸ್ಥಿತಿಯಲ್ಲೂ ಮಕ್ಕಳ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಮಹಿಳಾ ಪೊಲೀಸ್ ಪೇದೆಗೆ ಇದೀಗ ಇಲಾಖೆ ಭರ್ಜರಿ ಗಿಫ್ಟ್ ನೀಡಿದೆ. ಈ ಮಹಿಳಾ ಪೊಲೀಸ್ ಪೇದೆಯ ಸಾಹಸಾಗಾಥೆ ವಿವರ ಇಲ್ಲಿದೆ.

ದೆಹಲಿ(ನ.19):  ಕಳೆದ 3 ತಿಂಗಳಲ್ಲಿ ದೆಹಲಿ ಸೇರಿದಂತೆ ವಿವದ ರಾಜ್ಯಗಳಲ್ಲಿ ಕಾಣೆಯಾಗಿದ್ದ ಸೇರಿದಂತೆ ಹಲವು ಪ್ರಕರಣಗಳಿಂದ ಪೋಷಕರಿಂದ ದೂರವಾಗಿದ್ದ ಮಕ್ಕಳನ್ನು ರಕ್ಷಿಸುವಲ್ಲಿ ಮಹಿಳಾ ಪೊಲೀಸ್ ಪೇದೆ ಸೀಮಾ ಧಾಕಾ ಅವಿರತ ಪ್ರಯತ್ನ ಪಟ್ಟಿದ್ದಾರೆ. ದೆಹಲಿಯ ಬಾದ್ಲಿ ಪೊಲೀಸ್ ಠಾಣೆಯ ಮಹಿಳಾ ಪೇದೆ ಸೀಮಾ ಧಾಕಾ ಇದೀಗ ಟರ್ನ್ ಅಟ್ ಪ್ರಮೋಶನ್ ಪಡೆದ ಮೊದಲ ಪೊಲೀಸ್ ಸಿಬ್ಬಂದಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಳ್ಳಂಬೆಳಗ್ಗೆ ಮಲ್ಪೆ ಬಂದರಲ್ಲಿ ದಾಳಿ : 17 ಮಕ್ಕಳ ರಕ್ಷಣೆ.

ದೆಹಲಿಯ ಉತ್ತರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೇದೆ ಸೀಮಾ ಧಾಕ ಕಳದ 3 ತಿಂಗಳಲ್ಲಿ 76ಕ್ಕೂ ಹೆಚ್ಚು ಮಕ್ಕಳನ್ನು ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಹರ್ಯಾಣ, ಪಂಜಾಬ್ ಸೇರಿದಂತೆ ಇತರ ಕೆಲ ರಾಜ್ಯಗಳಿಗೆ ತೆರಳಿ ಸೀಮಾ ಧಾಕಾ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ.

ಮೊಬೈಲ್‌ ಕಸಿದು ಮಕ್ಕಳಿಗೆ ಸಾಧಕರ ಜೀವನ ಪರಿಚಯ... ಮೋದಿಯ ಒಂದು ಗೊಂಬೆಯ ಕತೆ!.

ಸೀಮಾ ಧಾಕಾ ರಕ್ಷಿಸಿದ 76 ಮಕ್ಕಳ ಪೈಕಿ 56 ಮಕ್ಕಳು  7 ರಿಂದ 12 ವರ್ಷ ವಯಸ್ಸಿನವರಾಗಿದ್ದಾರೆ. ಸೀಮಾ ಧಾಕಾ ಪರಿಶ್ರಮ ಹಾಗೂ ಸಾಧನೆಗೆ ಪೊಲೀಲ್ ಇಲಾಖೆ ಬಡ್ತಿ ನೀಡಿದೆ. ದೆಹಲಿ ಪೊಲೀಸ್ ಕಮಿಷನ್ ಎಸ್.ಎನ್.ಶ್ರೀವತ್ಸವ ಮಹಿಳಾ ಪೊಲೀಸ್ ಪೇದೆ ಸೀಮಾ ಧಾಕಾ ಅವರನ್ನು ಗೌರವಿಸಿ ಬಡ್ತಿ ನೀಡಿದ್ದಾರೆ.

ನಾನೋರ್ವ ತಾಯಿ. ಯಾವುದೇ ಪೋಷಕರು ತಮ್ಮ ಮಕ್ಕಳ ಕೊರಗಲ್ಲಿ ದಿನ ದೂಡುವ ಸಂಕಷ್ಟ ಬರಬಾರದು. ಹೀಗಾಗಿ ನಾನು ಹಾಗೂ ಠಾಣೆ ಸಿಬ್ಬಂದಿಗಳು ಅವಿರತ ಶ್ರಮ ಹಾಕಿದ್ದೇವೆ. ಮಕ್ಕಳು ಕಾಣೆ ಎಂಬ ದೂರು ದಾಖಲಾದ ಬೆನ್ನಲ್ಲೇ ವಿವರ ಪಡೆದು ತ್ವರಿತಗತಿಯಲ್ಲಿ ಕಾರ್ಯಚರಣೆ ಮಾಡಿದ್ದೇವೆ. ಇದಕ್ಕೆ ಫಲ ಸಿಕ್ಕಿದೆ ಎಂದು ಸೀಮಾ ಧಾಕ ಹೇಳಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಭೀಕರ ಪ್ರವಾದ ನಡುವೆ ಬೋಟ್ ಮೂಲಕ 2 ನದಿ ದಾಟಿ ಮಗುವನ್ನು ರಕ್ಷಿಸಲು ನಮ್ಮ ತಂಡ ದಾವಿಸಿತ್ತು. ಇದು ನಮಗೆ ಎದುರಾದ ಅತೀ ದೊಡ್ಡ ಸವಾಲಾಗಿತ್ತು. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ್ದೇವು. ಆದರೆ ಮಹಿಳೆ ವಿಳಾಸ ಬದಲಾಗಿತ್ತು. ಫೋನ್ ಸಿಗುತ್ತಿರಲಿಲ್ಲ. ಹೀಗಾಗಿ ಕಠಿಣ ಸವಾಲು ಎದುರಾಗಿತ್ತು. ದೂರಿನಲ್ಲಿ ಉಲ್ಲೇಖಿಸಿದ ಪಶ್ಚಿಮ ಬಂಗಾಳದ ಗ್ರಾಮಕ್ಕೆ ತೆರಳಿ ತನಿಖೆ ನಡೆಸಿ ಮಗುವನ್ನು ರಕ್ಷಿಸಲಾಗಿತ್ತು ಎಂದು ಸೀಮಾ ಧಾಕಾ ಹೇಳಿದ್ದಾರೆ.

ಕಾಣೆಯಾದ ಬಹುತೇಕ ಮಕ್ಕಳ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆಗಳಲ್ಲಿ ಪತ್ತೆ ಹೆಚ್ಚಲು ಸಾಧ್ಯವಾಗಿದೆ. ಬಳಿಕ ಮಕ್ಕಳಿಂದ ಮಾಹಿತಿ ಸಂಗ್ರಹಿಸಿ ಪೋಷಕರ ಮಡಿಲು ಸೇರಿಸಿದ್ದೇವೆ. ಕಳೆದ ಜುಲೈ ತಿಂಗಳಲ್ಲಿ ತನಿಖೆ ನಡುವೆ ಕೊರೋನಾ ತಗುಲಿ 3 ವಾರ ಕ್ವಾರಂಟೈನ್ ಆಗಬೇಕಾದ ಪರಿಸ್ಥಿತಿಯೂ ಬಂದಿತ್ತು ಎಂದು ಸೀಮಾ ಧಾಕ ಹೇಳಿದ್ದಾರೆ.

click me!