'ಪ್ರೀತಿಯ ಅಜ್ಜಿಯ ನೆನಪು ಮಾಡಿಕೊಂಡ ರಾಹುಲ್' ಈ ದೇಶದ ನಿಜಮಗಳು

By Suvarna NewsFirst Published Nov 19, 2020, 6:08 PM IST
Highlights

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ/ ಅಜ್ಜಿಯನ್ನು ನೆನಪಿಸಿಕೊಂಡ ಮೊಮ್ಮಗ ರಾಹುಲ್ ಗಾಂಧಿ/ ನವದೆಹಲಿಯ ಸ್ಮಾರಕ ಸ್ಥಳಕ್ಕೆ ಆಗಮಿಸಿ ಇಂದಿರಾ  ಅವರಿಗೆ ನಮನ

ನವದೆಹಲಿ(ನ. 19) ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನದ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೊಮ್ಮಗ ಅಜ್ಜಿಗೆ ನಮನ ಸಲ್ಲಿಸಿದ್ದಾರೆ.

ಅಜ್ಜಿಯನ್ನು ಕೊಂಡಾಡಿರುವ ರಾಹುಲ್, ಪ್ರಭಾವಿ ಪ್ರಧಾನಿ, ಅಧಿಕಾರದ ನಿಜವಾದ ಹುಟ್ಟು ಎಂದು ಇಂದಿರಾ ಅವರನ್ನು ಬಣ್ಣಿಸಿದ್ದಾರೆ.

ಇಡೀ ದೇಶ ಇಂದಿರಾ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತದೆ.  ಪ್ರೀತಿ ಮಾಡುವ ಅಜ್ಜಿಯಾಗಿ ಸದಾ ನೆನಪಿನಲ್ಲಿ ಇರುತ್ತಾರೆ ಎಂದು ಹಳೆಯ ನೆನಪಿನ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನವದೆಹಲಿಯ ಸ್ಮಾರಕ ಸ್ಥಳಕ್ಕೆ ಆಗಮಿಸಿ ಇಂದಿರಾ  ಅವರಿಗೆ ನಮಿಸಿದರು. ಭಾರತದ ಪ್ರಧಾನಿಯಾಗಿ ಬಹುಕಾಲ ದೇಶವನ್ನು ಮುನ್ನೆಡೆಸಿದ್ದ ಇಂದಿರಾ ಗಾಂಧಿ  ಕಾಂಗ್ರೆಸ್ ನ ಪ್ರಶ್ನಾತೀತ ನಾಯಕಿಯಾಗಿದ್ದರು. 

ತುರ್ತುಪರಿಸ್ಥಿತಿ ಹೇರುವ ಸಲಹೆ ಇಂದಿರಾಗೆ ನೀಡಿದ್ದು ಯಾರು?

ಇಂದಿರಾ ಗಾಂಧಿಯವರ ಬಲಿಷ್ಠ ನಾಯಕತ್ವ ಇಂದಿಗೆ ಸಹ ಮಾದರಿ. 1917ರ ನವೆಂಬರ್ 19ರಂದು ಜನಿಸಿದ್ದ ಇಂದಿರಾ ಗಾಂಧಿ ಭಾರತದ ಪ್ರಧಾನ ಮಂತ್ರಿಯಾಗಿ 1966ರಿಂದ 1977ರವರೆಗೆ ಮೊದಲ ಬಾರಿ ನಂತರ 1980ರಿಂದ ಅವರ ಹತ್ಯೆಯಾಗುವವರೆಗೆ  ಅಂದರೆ 1984ರವರೆಗೆ  ಅಧಿಕಾರದಲ್ಲಿ ಇದ್ದರು ಎಂದು ಕಾಂಗ್ರೆಸ್  ಉಲ್ಲೇಖ ಮಾಡಿದೆ.

ನಾಯಕತ್ವ, ದೂರದೃಷ್ಟಿ, ನಿಜವಾದ ನಾಯಕತ್ವ ಮತ್ತು ಈ ದೇಶದ ನಿಜ ಮಗಳಾದ ಇಂದಿರಾ ಗಾಂಧಿ ನಮ್ಮ ದೇಶದ ನಾಗರಿಕರಿಗೆ ಪ್ರಧಾನ ಮಂತ್ರಿಗಿಂತ ಹೆಚ್ಚಿನ ಸ್ಥಾನವನ್ನು ದೇಶದ ಜನರ ಎದೆಯಲ್ಲಿ ಪಡೆದುಕೊಂಡಿದ್ದಾರೆ ಎಂದು ರಾಹುಲ್ ವ್ಯಾಖ್ಯಾನ ಮಾಡಿದ್ದಾರೆ. 

 

 

एक कार्यकुशल प्रधानमंत्री और शक्ति स्वरूप श्रीमती इंदिरा गांधी जी की जयंती पर श्रद्धांजलि।

पूरा देश उनके प्रभावशाली नेतृत्व की आज भी मिसाल देता है लेकिन मैं उन्हें हमेशा अपनी प्यारी दादी के रूप में याद करता हूँ। उनकी सिखायी हुई बातें मुझे निरंतर प्रेरित करती हैं। pic.twitter.com/9RHDnAClOJ

— Rahul Gandhi (@RahulGandhi)
click me!