MP Ram Navami Clash: ಹಿಂಸಾಚಾರಕ್ಕೂ ಮೊದಲೇ ಜೈಲಿನಲ್ಲಿದ್ದವರ ವಿರುದ್ಧ ಕೇಸ್, ಈಗ ಮನೆಯೂ ಧ್ವಂಸ!

By Suvarna News  |  First Published Apr 15, 2022, 12:18 PM IST

* ಮಧ್ಯಪ್ರದೇಶದಲ್ಲಿ ರಾಮನವಮಿಯಂದು ಹಿಂಸಾಚಾರ

* ಹಿಂಸಾಚಾರ ಆರೋಪಿಗಳು ಪ್ರಕರಣ ನಡೆಯುವ ಮೊದಲೇ ಜೈಲಿನಲ್ಲಿ ಬಂಧಿಯಾಗಿದ್ರು

* ಈಗ ಆರೋಪಿಗಳ ಮನೆಯೂ ಧ್ವಂಸ


ಭೋಪಾಲ್(ಏ.15): ಮಧ್ಯಪ್ರದೇಶದ ಬರ್ವಾನಿಯಲ್ಲಿ, ಏಪ್ರಿಲ್ 10 ರಂದು ನಗರದಲ್ಲಿ ನಡೆದ ಕೋಮು ಘರ್ಷಣೆಯ ಸಂದರ್ಭದಲ್ಲಿ ಗಲಭೆ ಮತ್ತು ಬೆಂಕಿ ಹಚ್ಚಿದ ಆರೋಪದ ಮೇಲೆ ಮಾರ್ಚ್ 11 ರಿಂದ ಜೈಲಿನಲ್ಲಿರುವ ಮೂವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನಗರದಲ್ಲಿ ಕೋಮು ಗಲಭೆಯ ನಂತರ ಏಪ್ರಿಲ್ 10 ರಂದು ಎರಡು ಮೋಟಾರ್ ಸೈಕಲ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಶಹಬಾಜ್, ಫಕ್ರೂ ಮತ್ತು ರೌಫ್ ಎಂದು ಗುರುತಿಸಲಾಗಿದೆ. ಐಪಿಸಿಯ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದಲ್ಲಿ ಮೂವರು ಮಾರ್ಚ್ 5 ರಿಂದ ಜೈಲಿನಲ್ಲಿದ್ದಾರೆ.

ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಮತ್ತು ಹಿಂಸಾಚಾರದ ನಂತರ ಬರ್ವಾನಿ ಪೊಲೀಸರು ಸುಮಾರು 1 ಡಜನ್ ಎಫ್‌ಐಆರ್‌ಗಳನ್ನು ದಾಖಲಿಸಿ, ಪ್ರಕರಣ ದಾಖಲಿಸಲಾಗಿದೆ. ಹೀಗಿರುವಾಗ ಮಾರ್ಚ್ 11 ರಂದು ಸಿಕಂದರ್ ಅಲಿ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ಶಹಬಾಜ್, ಫಕ್ರೂ ಮತ್ತು ರೌಫ್ ಅವರನ್ನು ಸೆಕ್ಷನ್ 307 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಬರ್ವಾನಿ ಜಿಲ್ಲೆಯ ಎಸ್ಪಿ ಮಾರ್ಚ್ 11 ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದಿನಿಂದ ಮೂವರೂ ಜೈಲಿನಲ್ಲಿದ್ದಾರೆ.

Tap to resize

Latest Videos

ಆದರೆ ಈಗಾಗಲೇ ಜೈಲಿನಲ್ಲಿರುವ ಮೂವರು ಗಲಭೆ ನಡೆಸಿ ಬೆಂಕಿ ಹಚ್ಚುವುದು ಹೇಗೆ ಎಂಬುದಕ್ಕೆ ಬರ್ವಾನಿ ಪೊಲೀಸರ ಬಳಿ ಉತ್ತರವಿಲ್ಲ. ಈ ವಿಚಾರದಲ್ಲಿ ನಾವು ತನಿಖೆ ನಡೆಸುತ್ತೇವೆ ಮತ್ತು ತನಿಖೆಯಲ್ಲಿ ಜೈಲು ಅಧೀಕ್ಷಕರಿಂದ ಅವರ ಮಾಹಿತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಸೆಂಧ್ವಾ ಎಸ್‌ಡಿಒಪಿ ಮನೋಹರ್ ಸಿಂಗ್ ಈ ತಿಳಿಸಿದ್ದಾರೆ, ಈಗ ದಾಖಲಾಗಿರುವ ಪ್ರಕರಣವನ್ನು ದೂರುದಾರರ ಆರೋಪಗಳ ಆಧಾರದ ಮೇಲೆ ದಾಖಲಿಸಲಾಗಿದೆ.

ಕೋಮು ಘರ್ಷಣೆಯ ನಂತರ ತನ್ನ ಮನೆಯನ್ನು ಧ್ವಂಸಗೊಳಿಸಲಾಗಿದ್ದು, ತನಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಶೆಹಬಾಜ್ ತಾಯಿ ಸಕೀನಾ ಆರೋಪಿಸಿದ್ದಾರೆ. “ಪೊಲೀಸರು ಇಲ್ಲಿಗೆ ಬಂದರು, ನನ್ನ ಮಗ ಒಂದೂವರೆ ತಿಂಗಳಿನಿಂದ ಒಳಗೆ ಇದ್ದಾನೆ, ಮಾತಿನ ಚಕಮಕಿಯಿಂದ ನಡೆದ ಜಗಳದ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಇಲ್ಲಿ ಪೊಲೀಸರು ಬಂದು ನಮ್ಮನ್ನು ಹೊರಹಾಕಿ, ನಿಮ್ಮ ಮನೆ ಒಡೆಯಬೇಕು ಎಂದರು. ಮನೆಯಲ್ಲಿದ್ದ ವಸ್ತುಗಳನ್ನೂ ಚೆಲ್ಲಾಪಿಲ್ಲಿ ಮಾಡಿದರು. ಆದರೆ ಹಿಂಸಾಚಾರ ಪ್ರಕರಣಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಆತ ಇಲ್ಲಿರಲೇ ಇಲ್ಲ, ಜೈಲಿನಲ್ಲಿದ್ದ. ಅವನ ಮೇಲೆ ಎಫ್‌ಐಆರ್ ಏಕೆ ದಾಖಲಿಸಲಾಗಿದೆ ಎಂದು ಪೊಲೀಸರು ಉತ್ತರಿಸಬೇಕು ಎಂದಿದ್ದಾರೆ.

ನನ್ನ ಮಗ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಎಂದರೆ ಅವನನ್ನು ಹೊರಗೆ ಕಳುಹಿಸಿದವರು ಉಯಾರು ಎಂದು ಪೊಲೀಸರು ಉತ್ತರಿಸಬೇಕು. ಆದರೆ ಈ ಬಗ್ಗೆ ಯಾರೂ ನಮ್ಮ ಮಾತನ್ನು ಕೇಳಲು ಯಾರೂ ಸಿದ್ಧರಿಲ್ಲ. ನಾವು ಕೈ ಜೋಡಿಸಿ, ಕ್ಷಮೆಯಾಚಿಸಿದೆವು. ಕಿರಿಯ ಮಗನ ಹೆಸರು ಕೂಡಾ ಇರಲಿಲ್ಲ. ಆದರೂ ಅವನನ್ನು ಕರೆದುಕೊಂಡು ಹೋದನು. ಶಹಬಾಜ್ ನಿತ್ಯ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ಮಹಾರಾಷ್ಟ್ರದ ಅಕೋಲಾ ಮತ್ತು ಮಧ್ಯಪ್ರದೇಶದ ಸೆಂಧ್ವಾದಲ್ಲಿ 5ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ, ಫಕ್ರು ವಿರುದ್ಧ 2 ಮತ್ತು ರೌಫ್ ವಿರುದ್ಧ 4 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

click me!