ಭಾರತದ ಆರ್ಥಿಕತೆ ಮತ್ತೆ ಪುಟಿದೇಳಲಿದೆ; ಗೌತಮ್ ಅದಾನಿ

Suvarna News   | Asianet News
Published : Apr 15, 2020, 09:13 PM IST
ಭಾರತದ ಆರ್ಥಿಕತೆ ಮತ್ತೆ ಪುಟಿದೇಳಲಿದೆ; ಗೌತಮ್ ಅದಾನಿ

ಸಾರಾಂಶ

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬಹತೇಕ ಎಲ್ಲಾ ರಾಷ್ಟ್ರದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಒಟ್ಟು 40 ದಿನದ ಲಾಕ್‌ಡೌನ್‌ನಿಂದ ಭಾರತ 17 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ. ಇದೀಗ ವೈರಸ್ ಹತೋಟಿ ಹಾಗೂ ಆರ್ಥಿಕ ಚೇತರಿಕೆ ಹೇಗೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಉದ್ಯಮಿ ಗೌತಮ್ ಅದಾನಿ ಆಶಾದಾಯಕ ಹೇಳಿಕೆ ನೀಡಿದ್ದಾರೆ.

ನವದೆಹಲಿ(ಏ.15): ಕೊರೋನಾ ವೈರಸ್ ಲಾಕ್‌ಡೌನ್ ಭಾರತದಲ್ಲಿ ವಿಸ್ತರಣೆಯಾಗಿದೆ. ಮೊದಲ ಹಂತದ ಲಾಕ್‌ಡೌನ್‌ನಿಂದಲೇ ಭಾರತದ ಆರ್ಥಿಕತೆ ಕುಸಿತ ಕಂಡಿದೆ. ಇದೀಗ ಎರಡನೇ ಹಂತದ ಲಾಕ್‌ಡೌನ್ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯಲಿದೆ. ಹಾಗಂತ ಚಿಂತೆಪಡಬೇಕಿಲ್ಲ ಎಂದು ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಹೇಳಿದ್ದಾರೆ. ಭಾರತದ ಆರ್ಥಿಕತೆ ನಿಧಾನವಾಗಿ ಪುಟಿದೇಳಲಿದೆ ಎಂದಿದ್ದಾರೆ.

80 ಸಾವಿರ ಭಾರತೀಯ ನೌಕರರಿಗ ಸ್ಯಾಲರಿ ಹೈಕ್ ಮಾಡಿದ ಫ್ರೆಂಚ್ ಕಂಪನಿ!

ಆರ್ಥಿಕತೆ ಮತ್ತೆ ಸಹಜ ಸ್ಥಿತಿಗೆ ಮರಳು ಸಮಯ ತೆಗೆದುಕೊಳ್ಳಬಹುದು. ಆದರೆ ಖಚಿತವಾಗಿ ಮತ್ತೆ ರಾರಾಜಿಸಲಿದೆ ಎಂದು ಅದಾನಿ ಹೇಳಿದ್ದಾರೆ. ಕೊರೋನಾ ವೈರಸ್‌ನ್ನು ಭಾರತ ಸಮರ್ಥವಾಗಿ ಎದುರಿಸಲಿದೆ. ಇಷ್ಟೇ ಅಲ್ಲ ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಎದುರಾಗುವ ಆರ್ಥಿಕತ ಸವಾಲನ್ನು ಭಾರತ ಅಷ್ಟೇ ನಾಜೂಕಾಗಿ ಎದುರಿಸುತ್ತಿದೆ ಎಂದಿದ್ದಾರೆ.

ಸದ್ಯ ನೆಲಕಚ್ಚಿರುವ ಭಾರತದ ಆರ್ಥಿಕತೆ 2020-21ರಲ್ಲಿ 1.9 % ಏರಿಕೆಯಾಗಲಿದೆ ಎಂದು IMF(ಇಂಟರ್‌ನ್ಯಾಶಲ್ ಮೊನಿಟೆರಿ ಫಂಡ್) ಹೇಳಿದೆ. ವಿಶ್ವಬ್ಯಾಂಕ್ ಭಾರತದ ಆರ್ಥಿಕತೆಯನ್ನು1.5 ಯಿಂದ 2.8  %  ರಷ್ಟಿರಲಿದೆ ಎಂದಿದೆ. ಇನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಕ್ ಭಾರತದ ಆರ್ಥಿಕತೆಯನ್ನು 4 % ರಷ್ಟಿರಲಿದೆ ಎಂದು ವಿಶ್ಲೇಷಿಸಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?