ಲಾಕ್‌ಡೌನ್‌ನಿಂದ ಜನರಿಗೆ ಸಮಸ್ಯೆ, ಆದ್ರೆ ನಗುತ್ತಿದೆ ಪ್ರಕೃತಿ| ವಾಯು ಮಾಲಿನ್ಯ ಇಲ್ಲ, ನದಿ, ತೊರೆಗಳು ಫುಲ್ ಕ್ಲೀನ್ ಕ್ಲೀನ್| ಈಗ ಪ್ರತ್ಯಕ್ಷವಾಯ್ತು ಅಪರೂಪ್ದ ಪ್ರಾಣಿ
ನವದೆಹಲಿ(ಏ.15): ದೇಶದಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಜನಜೀವನವನ್ನು ನಿಧಾನವಾಗಿಸಿರಬಹುದು, ಸಮಸ್ಯೆಗಳನ್ನುಂಟು ಮಾಡಿರಬಹುದು, ಮತ್ತೊಂದೆಡೆ ಪ್ರಕೃತಿ ಮಾತೆ ನಸು ನಗುತ್ತಿದ್ದಾಳೆ. ಗಾಳಿ ಸ್ವಚ್ಛವಾಗಿದ್ದು, ನದಿ- ಕೆರೆಗಳು ಶುದ್ಧವಾಗಿವೆ, ಜಲಚರಗಳು ನೆಮ್ಮದಿಯಿಂದ ಹರಿದಾಡುತ್ತಿವೆ. ಪ್ರಾಣಿ ಪಕ್ಷಿಗಳು ಆರಾಮಾಗಿ ಓಡಾಡಿ ಹಾರಾಡುತ್ತಿವೆ. ಈ ಲಾಕ್‌ಡೌನ್ ಅವಧಿಯಲ್ಲಿ ಒಂದೆಡೆ ದೇಶದ ಅತ್ಯಂತ ಮಲಿನ ನದಿಗಳೆಂದು ಕುಖ್ಯಾತಿ ಪಡೆದಿದ್ದ ಪವಿತ್ರ ಗಂಗಾ- ಯಮುನಾ ಶುದ್ಧವಾಗಿವೆ. ವಾಯು ಮಾಲಿನ್ಯವೂ ಕಡಿಮೆಯಾಗಿ ಹಿಮಾಚಲದ ಗಿರಿ ಶಿಖರ 200 ಕಿ. ಮೀ ದೂರದ ಜಲಂಧರ್‌ಗೆ ಕಾಣಿಸುತ್ತಿವೆ. ಇವೆಲ್ಲದರ ಬೆನ್ನಲ್ಲೇ ಇದೀಗ ಅಪರೂಪವಾಗಿ ಕಾಣ ಸಿಗುವ ಹಿಮ ಚಿರತೆ ಕಂಡು ಬಂದಿದೆ.
ಹೌದು ಉತ್ತರಾಖಂಡ್‌ನ ನಂದಾದೇವಿ ನ್ಯಾಷನಲ್ ಪಾರ್ಕ್‌ನಲ್ಲಿ ಅಪರೂಪದ ಹಿಮ ಚಿರತೆ ಜೋಡಿ ಕಂಡು ಬಂದಿದೆ. IFS ಅಧಿಕಾರಿ ಆಕಾಶ್ ಕುಮಾರ್ ವರ್ಮಾ ನಂದಾದೇವಿ ನ್ಯಾಷನಲ್ ಪಾರ್ಕ್‌ನ ನಿರ್ದೇಶಕ ಸೆರೆ ಹಿಡಿದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ಇಂತಹ ದೃಶ್ಯ ಕಮಡು ಬಂದಾಗ ಬಹಳ ಖುಷಿಯಾಗುತ್ತದೆ ಎಂದಿದ್ದಾರೆ.
ತ್ಯಾಜ್ಯ ಹರಿಯುತ್ತಿಲ್ಲ, ಜನರೂ ಬರುತ್ತಿಲ್ಲ: ಗಂಗಾ, ಯಮುನಾ ಕ್ಲೀನ್ ಕ್ಲೀನ್! ಅಪರೂಪದ ಹಿಮ ಚಿರತೆಗಳಿಗಾಗೇ Global Snow Leopard and Ecosystem Protection ಸಂರಕ್ಷಣಾ ಕಾರ್ಯಕ್ರಮವೊಂದು ನಡೆಯುತ್ತದೆ. ಇದಕ್ಕೆ ಹಲವಾರು ರಾಷ್ಟ್ರಗಳು ಸದಸ್ಯರಾಗಿವೆ. ಅಲ್ಲದೇ ಅಂತರಾಷ್ಟ್ರೀಯ ಹಿಮ ಚಿರತೆ ದಿನ(ಅಕ್ಟೋಬರ್ 23) ಎಂದೂ ಆಚರಿಸಲಾಗುತ್ತದೆ. ಭಾರತವೂ ಕಳೆದ ವರ್ಷ ಈ ದಿಇನವನ್ನಾಚರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ