ಕೋಲ್ಕತ್ತಾ(ಏ. 15) ಮನೆ ಬಾಗಿಲಿಗೆ ಮದ್ಯ. ಹೌದು ಮದ್ಯ ಪ್ರಿಯರ ಕನಸು ನನಸಾಗಿದೆ. ಕೋಲ್ಕತ್ತಾದಲ್ಲಿ ಮುಂದಿನ ವಾರದಿಂದ ಮನೆ ಬಾಗಿಲಿಗೆ ಮದ್ಯ ಡಿಲೇವರಿ ಮಾಡಲಾಗುತ್ತಿದೆ.
ಪೋನ್ ಮೂಲಕ ಆರ್ಡರ್ ಮಾಡುವ ಅವಕಾಶ ಕಲ್ಪಿಸಿಲಾಗುವುದು. ಆರ್ಡರ್ ಪಡೆದುಕೊಂಡ ರಿಟೈಲ್ ಮಾಲೀಕರು ಮದ್ಯದ ಬಾಟಲ್ ಮನೆ ಬಾಗಿಲಿಗೆ ಸರಬರಾಜು ಮಾಡುವ ಕೆಲಸ ಮಾಡಲಾಗುತ್ತದೆ.
ಒಟ್ಟು 1800 ಅಂಗಡಿಗಳ ಪೈಕಿ ಶೇ. 60 ಅಂಗಡಿಗಳು ಹೋಂ ಡಿಲೆವರಿಗೆ ಒಪ್ಪಿಕೊಂಡಿವೆ. ಲಾಕ್ ಡೌನ್ ಕಾರಣಕ್ಕೆ ಕಳೆದ ಮೂರು ವಾರಗಳಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಅಬಕಾರಿ ಕಾನೂನಿನಲ್ಲಿ ಹೋಂ ಡಿಲೆವರಿ ಆಯ್ಕೆ ಇಲ್ಲ ಆದರೆ ಹೋಂ ಡಿಲೆವರಿಗೆ ನಿರ್ಬಂಧ ಎಂದು ಹೇಳಲಾಗಿಲ್ಲ.
ಮನೆ ಕೊಳಾಯಿ ತಿರುಗಿಸಿದ್ರೆ 3 ಗಂಟೆ ಕಾಲ ನೀರಿನ ಬದಲು ಎಣ್ಣೆ! ನನಸಾದ ಕನಸು
ಕರ್ನಾಟಕದಲ್ಲಿಯೂ ಮದ್ಯ ಮಾರಾಟಕ್ಕೆ ಒತ್ತಾಯ ಕೇಳಿಬಂದಿತ್ತು. ನಿರ್ದಿಷ್ಟ ಅವಧಿಯಲ್ಲಿ ಮದ್ಯ ಮಾರಾಟಕ್ಕರೆ ಅವಕಾಶ ಕಲ್ಪಿಸಿಕೊಡಬೇಕು. ಎಂಎಸ್‌ಐಎಲ್ ಮೂಲಕ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.