ಅಗ್ನಿಪಥ್ ಹಿಂಸಾಚಾರದ ನಡುವೆ ಮೂರೂ ಸೇನಾಪಡೆಗಳ ನೇಮಕಾತಿ ಘೋಷಣೆ!

By Santosh NaikFirst Published Jun 17, 2022, 5:12 PM IST
Highlights

ದಿನಗಳು ಉರುಳಿದಂತೆ ಅಗ್ನಿಪಥ್ ಯೋಜನೆಯ ಕುರಿತಾಗಿ ಯುವಜನತೆಯ ಆಕ್ರೋಶ ಇನ್ನಷ್ಟು ಹೆಚ್ಚಾಗುತ್ತಿದೆ. ಇದರ ನಡುವೆ ರಾಜಕೀಯ ಧ್ವನಿಗಳೂ ಸೇರಿಕೊಂಡ ಕಾರಣದಿಂದಾಗ ದೇಶವ್ಯಾಪಿ ಮುಷ್ಕರ, ಪ್ರತಿಭಟನೆ ಹಾಗೂ ಹಿಂಸಾಚಾರಗಳು ನಡೆಯುತ್ತಿವೆ. ಈ ಎಲ್ಲದರ ನಡುವೆ ದೇಶದ ಮೂರು ಸೇನಾಪಡೆಗಳಾದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ನೇಮಕಾತಿ ಘೋಷಣೆಯನ್ನು ಮಾಡಿವೆ.
 

ನವದೆಹಲಿ (ಜೂನ್ 17): ದೇಶವ್ಯಾಪಿ ಅಗ್ನಿಪಥ್ ಯೋಜನೆಯ (Agnipath Scheme) ಕುರಿತಾಗಿ ಯುವ ಜನತೆಯ ಆಕ್ರೋಶದ ಬೆನ್ನಲ್ಲಿಯೇ ದೇಶದ ಮೂರೂ ಸೇನಾಪಡೆಗಳು ಯೋಜನೆಯಲ್ಲಿ ಮುಂದುವರಿಯಲು ನಿರ್ಧಾರ ಮಾಡಿದೆ. ಅದರಂತೆ ಭಾರತೀಯ ವಾಯುಸೇನೆ ಮುಂದಿನ ವಾರದಿಂದ ನೇಮಕಾತಿ ಆರಂಭ ಮಾಡಲಿದ್ದರೆ, ಭೂಸೇನೆ ಹಾಗೂ ನೌಕಾಸೇನೆ ಕೂಡ ನೇಮಕಾತಿಯ ಘೋಷಣೆ ಮಾಡಿದೆ.

ಭಾರತೀಯ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಮುಖ್ಯಸ್ಥರು ಈಗಾಗಲೇ ಈ ಯೋಜನೆಯ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯ ವಾಯುಸೇನೆಯು ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ (Air Chief Marshal VR Chaudhari), 'ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಸರ್ಕಾರ ಅಗ್ನಿಪಥ್ ಯೋಜನೆಯ ಮೊದಲ ಅಗ್ನಿವೀರ್‌ಗಳ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಿದ್ದರಿಂದ ಖುಷಿಯಾಗಿದೆ' ಎಂದು ಹೇಳಿದ್ದಾರೆ. 

ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಜೂನ್ 24 ರಿಂದ ವಾಯುಸೇನೆಯು ನೇಮಕಾತಿ ಪ್ರಕ್ರಿಯೆಯನ್ನೂ ಆರಂಭಿಸಲಿದೆ ಎಂದು ವಿಆರ್ ಚೌಧರಿ ಹೇಳಿದ್ದಾರೆ. ಅದರೊಂದಿಗೆ ಶುಕ್ರವಾರ ದೇಶದ ಆರು ಫಾರ್ವರ್ಡ್ ಬೇಸ್‌ಗಳಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು 'ಅಗ್ನಿಪಥ್' ಪ್ರವೇಶ ಯೋಜನೆಯ ವಿವರಗಳ ಬಗ್ಗೆ ಸೈನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. "ಸೇನಾಪಡೆಯ ಕೊನೆಯ ವ್ಯಕ್ತಿಗೆ ಕೂಡ ಯೋಜನೆಯ ವಿವರಗಳನ್ನು ತಿಳಿದಿರಬೇಕು ಎನ್ನುವುದು ಗುರಿಯಾಗಿದೆ" ಎಂದು ಐಎಎಫ್ ಮುಖ್ಯಸ್ಥ ಮಾರ್ಷಲ್ ಚೌಧರಿ ಹೇಳಿದರು.

| Army Chief General Manoj Pande says, "Recruitment process is going to begin soon. Within the next 2 days, notification will be issued on https://t.co/gxdeGkkSeT. After that our Army recruitment organisations will declare a detailed schedule of registration and rally..." pic.twitter.com/g9zawcgrjz

— ANI (@ANI)


ಮುಂದಿನ ಎರಡು ದಿನಗಳಲ್ಲಿ ನೋಟಿಫಿಕೇಷನ್: ಭೂಸೇನೆಯು ಇನ್ನು ಎರಡು ದಿನಗಳಲ್ಲಿ ನೋಟಿಫಿಕೇಶನ್ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ (Indian Army chief General Manoj Pande) ತಿಳಿಸಿದ್ದಾರೆ.  ವಲಯ ನೇಮಕಾತಿ ಕಚೇರಿಗಳು ಮತ್ತು ಎಆರ್‌ಓಗಳು ಖಾಲಿ ಹುದ್ದೆಗಳನ್ನು ಪಡೆಯುತ್ತವೆ ಎಂದು ತಿಳಿಸಿದ್ದಾರೆ  "ಅಗ್ನಿವೀರ್‌ಗಳು ನೇಮಕಾತಿ ತರಬೇತಿ ಕೇಂದ್ರಗಳಿಗೆ ಹೋಗುವ ಪ್ರಶ್ನೆಗೆ ಸಂಬಂಧಿಸಿದಂತೆ, ಮೊದಲ ಅಗ್ನಿವೀರ್‌ಗಳ ತರಬೇತಿಯು ಈ ಡಿಸೆಂಬರ್‌ನಲ್ಲಿ (2022 ರಲ್ಲಿ) ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ" ಎಂದು ಅವರು ಹೇಳಿದರು.

ಯೋಜನೆಯ ಬಗ್ಗೆ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಿದ ಜನರಲ್ ಪಾಂಡೆ, "ಯುವಕರಿಗೆ ಅಗ್ನಿಪಥ ಯೋಜನೆಯ ಬಗ್ಗೆ ಎಲ್ಲಾ ಸರಿಯಾದ ಮಾಹಿತಿ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಒಮ್ಮೆ ಅವರು ಯೋಜನೆಯ ಬಗ್ಗೆ ತಿಳಿದುಕೊಂಡರೆ, ಈ ಯೋಜನೆ ಬಗ್ಗೆ ನಂಬಿಕೆ ಬರುತ್ತದೆ. ಇದು ಯುವಕರಿಗೆ ಮಾತ್ರವಲ್ಲ ಎಲ್ಲರಿಗೂ ಪ್ರಯೋಜನಕಾರಿ ಎಂದಿದ್ದಾರೆ.

ಅಗ್ನಿಪಥ್ ಕುರಿತು ಭಾರತೀಯ ಸೇನೆಯಿಂದ ಮಹತ್ವದ ಮಾಹಿತಿ, ಶುಕ್ರವಾರದಿಂದ ನೇಮಕಾತಿ ಪ್ರಕ್ರಿಯೆ ಆರಂಭ

ಶೀಘ್ರದಲ್ಲಿಯೇ ನೌಕಾಸೇನೆಗೆ ನೇಮಕ: ಸಶಸ್ತ್ರ ಪಡೆಗಳಲ್ಲಿ ಅಗ್ನಿವೀರ್‌ಗಳ ನೇಮಕಾತಿಯ ಗರಿಷ್ಠ ವಯಸ್ಸಿನ ಮಿತಿಯನ್ನು2022ನೇ ವರ್ಷಕ್ಕೆ 23 ವರ್ಷಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿದೆ.  ಭಾರತೀಯ ನೌಕಾಪಡೆಯು ನಮ್ಮ ಸೇವೆಯಲ್ಲಿರುವ ಅಗ್ನಿವೀರ್‌ಗಳ ಮೊದಲ ಬ್ಯಾಚ್ ಅನ್ನು ಸ್ವಾಗತಿಸಲು ಸಿದ್ಧವಾಗಿದೆ, ಇದಕ್ಕಾಗಿ ನೇಮಕಾತಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭ ಮಾಡಲಿದ್ದೇವೆ, ನಮ್ಮ ದೇಶದ ಎಲ್ಲಾ ಯುವಕ-ಯುವತಿಯರು ಭಾರತೀಯ ನೌಕಾಪಡೆಗೆ ಅಗ್ನಿವೀರರಾಗಿ ಸೇರಲು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನಾವು ಕರೆ ನೀಡುತ್ತೇವೆ ಎಂದು ಭಾರತೀಯ ನೌಕಾಸೇನೆಯ ಮುಖ್ಯಸ್ಥ ಆಡ್ಮಿರಲ್ ಆರ್.ಹರಿಕುಮಾರ್ (Chief of Naval Staff Admiral R Hari Kumar)  ಹೇಳಿದ್ದಾರೆ.

ಸೇನೆಗೆ ಪುಂಡರ ಅಗತ್ಯವಿಲ್ಲ, ರೈಲನ್ನು ಸುಡುವ ವ್ಯಕ್ತಿಗಳು ಆರ್ಮಿಗೆ ಸೂಕ್ತರಲ್ಲ ಎಂದ ಮಾಜಿ ಸೇನಾಧಿಕಾರಿ!

ಈ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವ್ಯಕ್ತಿಗಳಿಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದಿಲ್ಲ.  ಈ ಯೋಜನೆಯಡಿಯಲ್ಲಿ, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಬಯಸುವ ಹೆಚ್ಚಿನ ಯುವಕರಿಗೆ ನಾವು 4 ಪಟ್ಟು ಹೆಚ್ಚು ಅವಕಾಶಗಳನ್ನು ತೆರೆಯುತ್ತಿದ್ದೇವೆ. ನಾವು ಮೊದಲು 5000 ಜನರನ್ನು ಆಯ್ಕೆ ಮಾಡಿತ್ತಿದ್ದೆವು. ಆದರೆ, ಈ ಬಾರಿ ಈ ಸಂಖ್ಯೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗುತ್ತದೆ. ಅಗ್ನಿವೀರ್ ಆಗಿ ಸೇರುವ ವ್ಯಕ್ತಿ 22 ವಾರಗಳ ಕಾಲ ತರಬೇತಿ ಪಡೆಯುತ್ತಾನೆ. ಅದಾದ ಬಳಿಕ ಮತ್ತೆ ನಾಲ್ಕು ತಿಂಗಳು ವೃತ್ತಿಪರ ತರಬೇತಿ ಪಡೆಯಲಿದ್ದು, ಬಳಿಕ ಸೇನೆಗೆ ಸೇವೆ ಆರಂಭಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

 

click me!