ಸೇನೆಗೆ ಪುಂಡರ ಅಗತ್ಯವಿಲ್ಲ, ರೈಲನ್ನು ಸುಡುವ ವ್ಯಕ್ತಿಗಳು ಆರ್ಮಿಗೆ ಸೂಕ್ತರಲ್ಲ ಎಂದ ಮಾಜಿ ಸೇನಾಧಿಕಾರಿ!

By Santosh NaikFirst Published Jun 17, 2022, 4:10 PM IST
Highlights

ಭಾರತೀಯ ಸೇನೆ ಅನ್ನೋದು ಸ್ವಯಂಸೇವಕರ ಪಡೆ, ಯಾವುದೇ ಕಲ್ಯಾಣ ಕಾರ್ಯಕ್ರಮದ ಸಂಘಟನೆಯಲ್ಲ ಎನ್ನುವುದನ್ನು ಒತ್ತಿ ಹೇಳಿರುವ ಮಾಜಿ ಜನರಲ್ ವಿಪಿ ಮಲೀಕ್, ದೇಶದ ರಕ್ಷಣೆಯ ವಿಚಾರಕ್ಕೆ ಬದ್ಧರಾಗಿರುವ, ಅತ್ಯುತ್ತಮ ಎನಿಸಿಕೊಳ್ಳುವ ವ್ಯಕ್ತಿಗಳನ್ನು ಮಾತ್ರವೇ ಸೇನೆ ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
 

ನವದೆಹಲಿ(ಜೂನ್ 17): ಗೂಂಡಾಗಿರಿ (goondaism) ಮಾಡುವವರು, ರಾಜಕೀಯ ಚಳವಳಿಗಳಲ್ಲಿ ನಿರತರಾಗಿರುವವರು, ರೈಲು, ಬಸ್ಸುಗಳನ್ನು ಸುಡುವವರು, ಹಿಂಸಾಚಾರಕ್ಕೆ ಕಾರಣವಾದ ವ್ಯಕ್ತಿಗಳು ಸೇನೆಗೆ ಸೂಕ್ತರಲ್ಲ. ಅಂಥ ವ್ಯಕ್ತಿಗಳನ್ನು  ಯಾವುದೇ ಕಾರಣಕ್ಕೂ ಸೇನೆಗೆ ಸೇರಿಸಿಕೊಳ್ಳಬಾರದು ಎಂದು 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇನಾ ಮುಖ್ಯಸ್ಥರಾಗಿದ್ದ (Army chief ) ಜನರಲ್ ವಿಪಿ ಮಲೀಕ್ (General VP Malik) ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅಗ್ನಿಪಥ್‌ ಕುರಿತಾಗಿ ದೇಶವ್ಯಾಪಿ ನಡೆಯುತ್ತಿರುವ ಹಿಂಸಾಚಾರದ ಬೆನ್ನಲ್ಲಿಯೇ ಮಹತ್ವದ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಭಾರತೀಯ ಸೇನೆ ಅನ್ನೋದು ಸ್ವಯಂ ಸೇವಕರ ಪಡೆ (volunteer force). ದೇಶವನ್ನು ರಕ್ಷಿಸಬೇಕು ಎನ್ನುವ ಏಕಮೇವ ಉದ್ದೇಶ ಹೊಂದಿರುವ ವ್ಯಕ್ತಿಗಳು ಇದರಲ್ಲಿ ಇರುತ್ತಾರೆ. ಇದು ಯಾವುದೇ ಕಲ್ಯಾಣ ಕಾರ್ಯಕ್ರಮದ ಸಂಘಟನೆಯಲ್ಲ (welfare organisation) ಎಂದು ಹೇಳಿರುವ ವಿಪಿ ಮಲೀಕ್, ದೇಶದ ರಕ್ಷಣೆ ವಿಚಾರದಲ್ಲಿ ಬದ್ಧರಾಗಿರುವ ಶ್ರೇಷ್ಠರೆನಿಸಿಕೊಂಡ ವ್ಯಕ್ತಿಗಳನ್ನು ಮಾತ್ರವೇ ಸೇನೆ ಸೇರಿಸಿಕೊಳ್ಳುತ್ತದೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ.

“ಸಶಸ್ತ್ರ ಪಡೆಗಳು ಸ್ವಯಂಸೇವಕ ಪಡೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದೊಂದು ಕ್ಷೇಮಾಭಿವೃದ್ಧಿ ಸಂಘಟನೆಯಲ್ಲ ಮತ್ತು ದೇಶಕ್ಕಾಗಿ ಹೋರಾಡುವ, ದೇಶವನ್ನು ರಕ್ಷಿಸುವ ಅತ್ಯುತ್ತಮ ವ್ಯಕ್ತಿಗಳು ಮಾತ್ರವೇ ಇದರಲ್ಲಿ ಇರುತ್ತಾರೆ. ಗೂಂಡಾವಾದದಲ್ಲಿ ತೊಡಗಿರುವವರು, ರೈಲುಗಳು ಮತ್ತು ಬಸ್ಸುಗಳನ್ನು ಸುಡುವವರು, ನಾವು ಸಶಸ್ತ್ರ ಪಡೆಗಳಲ್ಲಿ ಇರಲು ಸೂಕ್ತರಾದ ವ್ಯಕ್ತಿಗಳಲ್ಲ' ಎಂದು ಮಾಜಿ ಸೇನಾ ಮುಖ್ಯಸ್ಥ ಖಾಸಗಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಭಾರತೀಯ ಯುವಕರಿಗೆ ಕೇಂದ್ರದ ಅಗ್ನಿಪಥ್ ನೇಮಕಾತಿ ಯೋಜನೆಯು (agnipath scheme)  ಐತಿಹಾಸಿಕ ಮತ್ತು ಪರಿವರ್ತಕ ಕ್ರಮ ಎಂದು ಕರೆಯಲಾಗಿದ್ದು, ಇದು ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಆಂದೋಲನಗಳು ಮತ್ತು ಪ್ರತಿಭಟನೆಗಳನ್ನು ಎದುರಿಸಿದೆ.

ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ ಹಾಗೂ ಇತರ ರಾಜ್ಯಗಳಲ್ಲಿ ನೇಮಕಾತಿ ಪ್ರಕ್ರಿಯೆಯ ಕುರಿತಾಗಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಬಹುತೇಕ ಯುವಕರು ಈ ಯೋಜನೆಯಲ್ಲಿ ಇಲ್ಲದೇ ಇರುವ ಕೆಲಸದ ಭ್ರದತೆ ಹಾಗೂ ಇತರ ವಿಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.  ಹಾಗಿದ್ದರೂ, ಅನೇಕ ರಾಜ್ಯಗಳು ಯೋಜನೆಗಳನ್ನು ಘೋಷಿಸಿವೆ, ಅಂತಹ 'ಅಗ್ನಿವೀರ್‌ಗಳು', ಈ ಕ್ರಮದ ಫಲಾನುಭವಿಗಳು ಎಂದು ಕರೆಯಲ್ಪಟ್ಟರೆ, ಪ್ರಯೋಜನವನ್ನು ಪಡೆಯಬಹುದು.

ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷ ಸೇನಾ ನೇಮಕಾತಿ ಪ್ರಕ್ರಿಯೆಗಳು ನಡೆದಿರಲಿಲ್ಲ. ಈಗ ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಾಗ ಹೆಚ್ಚಿನವರು ಈ ವಯೋಮಿತಿಯ ಗಡಿಯನ್ನು ದಾಟಿದವರಾಗಿದ್ದಾರೆ.  ಅಂಥ ವ್ಯಕ್ತಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ವಿಪಿ ಮಲೀಕ್, "ಕೆಲವರಿಗೆ ಈಗ ವಯೋಮಿತಿಯಲ್ಲಿ ಅರ್ಹರಾಗಲು ಸಾಧ್ಯವಿಲ್ಲ. ಅವರು ಅಗ್ನಿಪಥ್ ಯೋಜನೆಗೆ ಅರ್ಹರಾಗಿರುವುದಿಲ್ಲ. ಆದ್ದರಿಂದ ಅವರ ಆತಂಕ ಮತ್ತು ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ' ಎಂದಿದ್ದಾರೆ. ಇದರ ನಡುವೆ ಕೇಂದ್ರ ಸರ್ಕಾರ ಕೂಡ ಕಳೆದ ಎರಡು ವರ್ಷಗಳ ಸೇನಾ ನೇಮಕಾತಿ ಆಗದೇ ಇರುವ ಹಿನ್ನಲೆಯಲ್ಲಿ 2022ರ ಅಗ್ನಿಪಥ್ ನೇಮಕಾತಿಯ ವಯೋಮಿತಿಯನ್ನು 21ರ ಬದಲಾಗಿ 23 ವರ್ಷಕ್ಕೆ ಏರಿಸಿದೆ.

ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ? ಅಗ್ನಿಪಥ ಯೋಜನೆಗೆ ಸಿದ್ದು ಗುದ್ದು

ಅದಲ್ಲದೆ, ಸೇನೆಯಲ್ಲಿ ನಾಲ್ಕು ವರ್ಷದ ಬಳಿಕ ನಿರುದ್ಯೋಗ ಕಾಡುತ್ತದೆ ಎನ್ನುವ ಭಯವೂ ಅನಗತ್ಯವಾಗಿದೆ. ಅಗ್ನಿವೀರರನ್ನು ಸರ್ಕಾರವು ಪೋಲಿಸ್ ಮತ್ತು ಅರೆಸೇನಾಪಡೆಗೆ ಲ್ಯಾಟರಲ್ ಪ್ರವೇಶವನ್ನು ಭರವಸೆ ನೀಡಿದೆ. "ಹೆಚ್ಚಿನ ಸಂಖ್ಯೆಯವರು ಪೊಲೀಸ್ ಪಡೆ ಮತ್ತು ಖಾಸಗಿ ವಲಯಕ್ಕೆ ಸೇರ್ಪಡೆಯಾಗುತ್ತಾರೆ, ಆದರೆ ಅದರ ಗ್ಯಾರಂಟಿಯನ್ನು ಈಗ ನೀಡಲಾಗುವುದಿಲ್ಲ" ಎಂದು ಅವರು ಹೇಳಿದರು.

ಅಗ್ನಿಪಥ್ ಕುರಿತು ಭಾರತೀಯ ಸೇನೆಯಿಂದ ಮಹತ್ವದ ಮಾಹಿತಿ, ಶುಕ್ರವಾರದಿಂದ ನೇಮಕಾತಿ ಪ್ರಕ್ರಿಯೆ ಆರಂಭ

ಕಾರ್ಗಿಲ್ ಯುದ್ಧದ ವೇಳೆ ಹುತಾತ್ಮರಾದ ಹನೀಫ್ ಉದ್ದೀನ್ ( Captain Haneef Uddin) ಹಾಗೂ ವೈಜಯಂತ್ ಥಾಪರ್ (Vijayant Thapar), ಪದಾತಿ ದಳ (ಇನ್ ಫ್ರಾಂಟ್ರಿ ಬೆಟಾಲಿಯನ್- ಯುದ್ಧದಲ್ಲಿ ನೇರವಾಗಿ ಭಾಗಿಯಾಗುವ ಸೈನಿಕರು) ಭಾಗವಾಗಿರಲಿಲ್ಲ. ಆದರೆ, ಯುದ್ಧ ಅಂತಾ ಎದುರಾದಾಗ ಅವರು ತಮ್ಮ ಬೆಟಾಲಿಯನ್ ಬಿಟ್ಟು ನೇರ ಯುದ್ಧದಲ್ಲಿ ಭಾಗಿಯಾಗಿದ್ದರು. "ಸೇನೆಯಲ್ಲಿ ಕೇವಲ ನಾಲ್ಕು ವರ್ಷ ಕಡಿಮೆ ಎಂದು ನಾನು ಹೇಳುವುದಿಲ್ಲ. ಟೆಕ್ನಿಕಲ್‌ನಲ್ಲಿರುವ ವ್ಯಕ್ತಿಗಳಿಗೆ ವಿಸ್ತರಣೆ ಬೇಕಾಗುತ್ತದೆ. ಆದರೆ, ಒಮ್ಮೆ ಇದು ಸೇನೆಯಲ್ಲಿ ಸೂಕ್ತವಾಗಿ ಈ ಯೋಜನೆ ಜಾರಿಯಾದಲ್ಲಿ ಸರಿ ಮಾಡಿಕೊಳ್ಳುವ ಅವಕಾಶ ಇರುತ್ತದೆ' ಎಂದಿದ್ದಾರೆ.

click me!