ಒಂದಕ್ಕಿಂತ ಹೆಚ್ಚು ಸ್ಥಾನಕ್ಕೆ ಸ್ಪರ್ಧಿಸುವ ನಾಯಕರ ನಿಷೇಧಿಸಿ, ಕೇಂದ್ರಕ್ಕೆ ಚುನಾವಣಾ ಆಯೋಗ ಪತ್ರ!

By Suvarna NewsFirst Published Jun 17, 2022, 5:08 PM IST
Highlights
  • ಚುನಾವಣಾ ನಿಮಯದಲ್ಲಿ ಬದಲಾವಣಗೆ ಮುಂದಾಗ ಆಯೋಗ
  • ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದವರಿಗೆ ಶಾಕ್ ನೀಡಲು ರೆಡಿ
  • ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆಗೆ ಅವಕಾಶ

ನವದೆಹಲಿ(ಜೂ. 17): ಚುನಾವಣೆಯಲ್ಲಿ  ರಾಜಕೀಯ ನಾಯಕರು ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸುವುದು ಎಷ್ಟು ಸರಿ? ಈ ಪ್ರಶ್ನೆ ಹಲವು ಬಾರಿ ಸದ್ದು ಮಾಡಿದೆ. ಮತದಾರನಿಗೆ ಒಂದೇ ಮತ, ನಾಯಕನಿಗೆ ಯಾಕೆ ಎರಡು ಕ್ಷೇತ್ರ ಅನ್ನೋ ಚರ್ಚೆಗೆ ಇದೀಗ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣುತ್ತಿದೆ. ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸುವ ನಾಯಕರನ್ನು ನಿಷೇಧಿಸುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಒಬ್ಬರಿಗೆ ಒಂದು ಕ್ಷೇತ್ರ ಮಾತ್ರ, ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸುವಂತಿಲ್ಲ. ಚುನಾವಣಾ ಆಯೋಗ ಮಾಡಿರುವ ತಿದ್ದುಪಡಿ ಪ್ರಕಾರ ಹಾಲಿ ಶಾಸಕ, ಅಥವಾ ಮಂತ್ರಿ ಉಪ ಚುನಾವಣೆಯಲ್ಲಿ ಮತ್ತೊಂದು ಕ್ಷೇತ್ರದಿಂದಲೂ ಸ್ಪರ್ಧಿಸಲು ಅವಕಾಶವಿಲ್ಲ. ಈ ಕುರಿತು ಆಯೋಗ ಹಲವು ಬದಲಾವಣೆಗಳನ್ನು ಮಾಡಿ ಕೇಂದ್ರಕ್ಕೆ ಪತ್ರ ಬರೆದಿದೆ.

ಡಿಕೆಶಿಗೆ ತೋರಿಸಿ ಎಚ್‌.ಡಿ.ರೇವಣ್ಣ ಹಾಕಿದ ಮತ ಸಿಂಧು: ಆಯೋಗ

ಕಳೆದ ಹಲವು ಬಾರಿ ಚುನಾವಣಾ ಆಯೋಗ ಈ ಪ್ರಸ್ತಾವನೆಯನ್ನು ಆಯಾ ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಆದೆ ಯಾವ ಸರ್ಕಾರಗಳು ಬದಲಾವಣೆ ತರಲು ಮುಂದಾಗಿಲ್ಲ. ಇದೀಗ ಮೋದಿ ಸರ್ಕಾರ ಆಯೋಗದ ಪತ್ರ ಪರಿಶೀಲಿಸುವುದಾಗಿ ಹೇಳಿದೆ. 

ಈ ನಿಯಮ ಮೀರಿ ಚುನಾವಣೆಗೆ ಸ್ಪರ್ಧಿಸಿದರೆ ದಂಡ ವಿಧಿಸಲು ಆಯೋಗ ಮನವಿ ಮಾಡಿದೆ. ವಿಧಾನಸಭಾ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನದಲ್ಲಿ ಸ್ಪರ್ಧಿಸಿದರೆ 5 ಲಕ್ಷ ರೂಪಾಯಿ ದಂಡ ವಿಧಿಸಬೇಕು ಎಂದರೆ, ಲೋಕಸಭಾ ಚುನಾವಣೆಯಲ್ಲಿ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂಪಾಯಿ ದಂಡ ವಿಧಿಸಬೇಕು ಎಂದು ಪತ್ರದಲ್ಲಿ ಹೇಳಿದೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡಲ್ಲೂ ಗೆದ್ದರೆ, ಒಂದು ಕ್ಷೇತ್ರವನ್ನು ತ್ಯಜಿಸಬೇಕಾಗುತ್ತದೆ. ಇದರಿಂದ ಮತ್ತೆ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವ ಅನಿವಾರ್ಯತೆ ಎದುರಾಗಲಿದೆ. ಇದರಿಂದ ಆರ್ಥಿಕ ಹೊರೆಯ ಜೊತೆಗೆ ಸರ್ಕಾರದ ಎಲ್ಲಾ ಕೆಲಸಗಳಿಗೆ ಬ್ರೇಕ್ ಬೀಳಲಿದೆ ಎಂದು ಆಯೋಗ ಹೇಳಿದೆ.

BBMP Election 2022: ಬಿಬಿಎಂಪಿಗೆ 9 ವಾರದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಿ: ಸುಪ್ರೀಂಕೋರ್ಟ್‌

ಚು.ಆಯೋಗಕ್ಕೆ ಸುಪ್ರೀಂ ನೋಟಿಸ್‌
ಆನೇಕಲ್‌ ಪುರಸಭೆಯ ಮೂವರು ಸದಸ್ಯರನ್ನು ಅನರ್ಹಗೊಳಿಸಿದ ಪ್ರಕರಣ ಸಂಬಂಧ, ಕರ್ನಾಟಕ ರಾಜ್ಯ ಚುನಾವಣಾ ಮತ್ತು ಇತರರಿಗೆ ಸುಪ್ರೀಂಕೋರ್ಚ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ. ಅನರ್ಹಗೊಂಡಿದ್ದ ಮೂವರು ಸದಸ್ಯರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾ. ಎಂ.ಆರ್‌.ಶಾ ಮತ್ತು ನ್ಯಾ.ಅನಿರುದ್ಧ ಬೋಸ್‌ ಅವರನ್ನೊಳಗೊಂಡ ನ್ಯಾಯಪೀಠ, ಮೇಲ್ಮನವಿ ಕುರಿತು ಅಭಿಪ್ರಾಯ ಕೋರಿ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಜೂ.15ಕ್ಕೆ ಮುಂದೂಡಿದೆ.

ಏನಿದು ಪ್ರಕರಣ?:
ನಿಗದಿತ ಅವಧಿಯಲ್ಲಿ ಚುನಾವಣಾ ಖರ್ಚು ವೆಚ್ಚದ ವಿವರ ಸಲ್ಲಿಸದ ಆರೋಪದಡಿ ಅನೇಕಲ್‌ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಕೆ.ಶ್ರೀನಿವಾಸ್‌, ಎಸ್‌.ಲಲಿತಾ ಮತ್ತು ಸಿ.ಕೆ.ಹೇಮಲತಾ ಅವರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿತ್ತು. ಈ ಆದೇಶವನ್ನು ನಂತರದಲ್ಲಿ ಕರ್ನಾಟಕ ಹೈಕೋರ್ಚ್‌ನ ಏಕಸದಸ್ಯ ಪೀಠ ಎತ್ತಿಹಿಡಿದಿತ್ತು. ಈ ತೀರ್ಪುನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ ವೇಳೆ, ‘ನಿಯಮದಂತೆ ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ 30 ದಿನಗಳಲ್ಲಿ ಖರ್ಚು ವೆಚ್ಚದ ವಿವರವನ್ನು ಮೇಲ್ಮನವಿದಾರರು ಸಲ್ಲಿಸಿರಲಿಲ್ಲ. ಜತೆಗೆ, ವಿವರ ಸಲ್ಲಿಸದಿರುವುದಕ್ಕೆ ಸಮಂಜಸವಾದ ಕಾರಣ ನೀಡುವಲ್ಲಿಯೂ ವಿಫಲರಾಗಿದ್ದಾರೆ. ಹಾಗಾಗಿ, ಅವರನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗದ ಆದೇಶ ಸೂಕ್ತವಾಗಿದೆ’ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ವಜಾಗೊಂಡಿದ್ದ ಮೂವರೂ ಸದಸ್ಯರು ಇದೀಗ ಸುಪ್ರೀಂಕೋರ್ಚ್‌ ಮೆಟ್ಟಿಲೇರಿದ್ದಾರೆ.

click me!