ಲಡಾಖ್ ಗಡಿ ಸಂಘರ್ಷ; 6 ವಲಯ ಪ್ರದೇಶ ವಶಪಡಿಸಿಕೊಂಡ ಭಾರತೀಯ ಸೇನೆ!

By Suvarna News  |  First Published Sep 20, 2020, 5:55 PM IST

ಭಾರತ ಹಾಗೂ ಚೀನಾ ಗಡಿ ಸಮಸ್ಯೆ ಅಂತ್ಯಗೊಳಿಸಲು ಭಾರತೀಯ ಸೇನೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಯಾವುದೂ ಕೂಡ ಪ್ರಯೋಜನವಾಗಿಲ್ಲ. ಇದೀಗ ಚೀನಾಗೆ ಅವರದ್ದೇ ಭಾಷೆಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಪೂರ್ವ ಲಡಾಖ್‌ನಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾ ಸೇನೆಯನ್ನು ಭಾರತ ಹಿಮ್ಮೆಟ್ಟಿಸಿ 6 ಗಡಿ ವಲಯಗಳನ್ನು ವಶಪಡಿಸಿಕೊಂಡಿದೆ.


ನವದೆಹಲಿ(ಸೆ.20):  ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ಸೇನೆ ಜೊತೆಗಿನ ಕಾದಾಟ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಗಲ್ವಾಣ್ ಕಣಿವೆ ಸಂಘರ್ಷದ ಬಳಿಕ ಪರಿಸ್ಥಿತಿ ಬಿಗಡಾಯಿಸಿದೆ. ಪ್ಯಾಂಗಾಂಗ್ ಸರೋವರ ಸೇರಿದಂತೆ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ಸೇನೆ ಅತಿಕ್ರಮ ಪ್ರವೇಶಕ್ಕೆ ಮುಂದಾಗಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕಮಾಂಡರ್, ಉನ್ನತ ಮಟ್ಟದ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಭಾರತ ಪ್ರಯತ್ನಿಸಿತ್ತು. ಆದರೆ ಚೀನಾ ತನ್ನ ಮೊಂಡುವಾದ ಬಿಟ್ಟಿಲ್ಲ. ಇದರ ನಡುವೆ ಗಡಿ ವಾಸ್ತವ ರೇಖೆ ಬದಲಿಸಲು ಯತ್ನಿಸಿದ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆ ಕಳೆದ ಮೂರು ವಾರದಲ್ಲಿ 6 ಗಡಿ ವಲಯ ಪ್ರದೇಶಗಳನ್ನು ವಶಪಡಿಸಿಕೊಂಡಿದೆ.

ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

Latest Videos

undefined

ಆಗಸ್ಟ್ 29 ರಿಂದ ಸೆಪ್ಟೆಂಬರ್ ಎರಡನೇ ವಾರದೊಳಗೆ ಭಾರತೀಯ ಸೇನೆ ಪೂರ್ವ ಲಡಾಖ್ ಗಡಿ ವಲಯದಲ್ಲಿ ಚೀನಾ ಸೇನಾ ನಿಯಂತ್ರಣ ಫಿಂಗರ್ 4 ಸನಿಹದಲ್ಲಿದ್ದ ವಲಯಗಳನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ. ಮಗರ್ ಹಿಲ್, ಗುರಂಗ್ ಹಿಲ್, ರೆಸೆಹೆನ್ ಲಾ, ರೆಝಂಗ್ ಲಾ,  ಮೊಖಪರಿ ಹಾಗೂ ಚೀನಾ ಸೇನಾ ಪೊಸ್ಟ್ ಫಿಂಗರ್ 4 ಸನಿಹದ ಅತೀ ಎತ್ತರ ವಲಯವನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ.

ಭಾರ​ತದ ಸೈನಿ​ಕರ ಗಮನ ಬೇರೆಡೆ ಸೆಳೆ​ಯಲು ಪಂಜಾಬಿ, ಹಿಂದಿ ಹಾಡು ಹಾಕಿ ಚೀನಾ ಟಾಂಗ್‌

ಕಡಿದಾದ ಹಾಗೂ ದುರ್ಗಮ ಬೆಟ್ಟ ಪ್ರದೇಶಗಳಲ್ಲಿ ಮುನ್ನಗ್ಗಿದ ಭಾರತೀಯ ಸೇನೆ, ಚೀನಾ ಸೈನ್ಯವನ್ನು ಹಿಮ್ಮೆಟ್ಟಿಸಿ  ಆಕ್ರಮಿಸಿಕೊಂಡಿದೆ.  ಇದು ಎತ್ತರದ ಪ್ರದೇಶವಾಗಿದ್ದು, ಇಲ್ಲಿಂದ ಎದುರಾಳಿಯ ಚಲನವಲಗಳನ್ನು ಗಮನಿಸಲು ಸಹಕಾರಿಯಾಗಿದೆ ಎಂದು ಮೂಲಗಳು ಹೇಳಿವೆ. 

ಗಡಿಯಲ್ಲಿ ಯುದ್ಧದ ಕಾರ್ಮೋಡ, ಲಡಾಖ್‌ನಲ್ಲಿ ಒಂದು ಲಕ್ಷ ಯೋಧರು!.

ಪ್ಯಾಂಗಾಂಗ್ ಸರೋವರದ ಬಳಿ ಎತ್ತರದ ವಲಯ ವಶಪಡಿಸಿಕೊಳ್ಳಲು ಚೀನಾ ಸೇನೆ ಗಾಳಿಯಲ್ಲಿ ಗುಂಡು ಹಾರಿಸಿ ಭಾರತೀಯ ಸೇನೆಯನ್ನು ಬೆದರಿಸುವ ತಂತ್ರ ಮಾಡಿತ್ತು. ಆದರೆ ಚೀನಾ ಬೆದರಿಕೆಗೆ ಜಗ್ಗದ ಭಾರತ ತನ್ನ ಬಲ ಪ್ರದರ್ಶಿಸಿದೆ. ಬ್ಲಾಕ್ ಟಾಪ್ ಹಾಗೂ ಹೆಲ್ಮೆಟ್ ಟಾಪ್ ವಲಯ ಚೀನಾ ಸೇನೆಯ ವಶದಲ್ಲಿತ್ತು. ಇದೀಗ ಭಾರತೀಯ ಸೇನೆಯ ಕೈವಶವಾಗಿದೆ.

ರೆಝಾಂಗ್ ಲಾ, ರೆಸಹೆನ್ ಲಾ ಸೇರಿದಂತೆ ಅತೀ ಎತ್ತರ ಪ್ರದೇಶಗಳನ್ನು ವಶಪಡಿಸಿದ ಭಾರತೀಯ ಸೇನೆ ಹೆಚ್ಚುವರಿಯಾಗಿ 3,000 ಯೋಧರನ್ನು ನಿಯೋಜಿಸಿದೆ. ಅತ್ತ ಚೀನಾ ಸೇನೆ ಕೂಡ ಹೆಚ್ಚುವರಿ ಸೇನೆ ನಿಯೋಜಿಸಿದ್ದು, ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

ಗಡಿಯಲ್ಲಿ ಚೀನಾ ವಾಸ್ತವ ರೇಖೆ ಬದಲಿಸಲು ಯತ್ನಿಸಿದ ಕಾರಣ ಇದೀಗ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಸೇನಾ ಮುಖ್ಯಸ್ಥ ಎಂ.ಎಂ ನರ್ವಾನೆ, ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್ ಸೇರಿದಂತೆ ಸೇನಾಧಿಕಾರಿಗಳು ಲಡಾಖ್ ಗಡಿ ಸಂಘರ್ಷವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. 

ಇದನ್ನೂ ನೋಡಿ | ಬೇಹುಗಾರಿಕೆಗೆ ಪ್ರಾಣಿಗಳನ್ನು ಛೂ ಬಿಟ್ಟ ಡ್ರ್ಯಾಗನ್, ಚೀನಾ ರಹಸ್ಯ ಬಯಲು!

"

click me!