ಲೇಹ್‌(ಸೆ.18): ಲಡಾಖ್‌ ಗಡಿ​ಯಲ್ಲಿ ಭಾರ​ತದ ವಿರುದ್ಧ ಕಾಲು ಕೆದರಿ ಜಗಳ ತೆಗೆ​ಯು​ತ್ತಿ​ರುವ ಚೀನಾ, ಈಗ ಭಾರ​ತೀಯ ಸೈನಿ​ಕರ ಗಮ​ನ​ವನ್ನು ಬೇರೆಡೆ ಸೆಳೆ​ಯುವ ‘ವಿ​ಶಿಷ್ಟಕುತಂತ್ರ’ ಮಾಡಿದೆ. ಗಡಿ​ಯಲ್ಲಿ ಲೌಡ್‌​ಸ್ಪೀ​ಕರ್‌ ಅಳ​ವ​ಡಿ​ಸಿ​ರುವ ಚೀನಾ ಸೇನೆಯು, ಪಂಜಾಬಿ ಭಾಂಗ್ಡಾ ಗೀತೆ​ಗ​ಳನ್ನು ಹಾಕು​ತ್ತಿದೆ ಹಾಗೂ ಹಿಂದಿ​ಯಲ್ಲಿ ಎಚ್ಚ​ರಿ​ಕೆಯ ಸಂದೇಶ ನೀಡ​ತೊ​ಡ​ಗಿದೆ.

ಪೂರ್ವ ಲಡಾ​ಖ್‌ನ ಪಾಂಗಾಂಗ್‌ ಸರೋ​ವರ ಹಾಗೂ ಚುಶೂಲ್‌ ಪ್ರದೇ​ಶ​ದಲ್ಲಿ ಈ ತಂತ್ರ​ವನ್ನು ಚೀನಾ ಅನು​ಸ​ರಿ​ಸು​ತ್ತಿದೆ ಎಂದು ತಿಳಿ​ದು​ಬಂದಿದೆ. ಇದು ಭಾರ​ತದ ಸೈನಿ​ಕರ ಗಮನ ಬೇರೆಡೆ ಸೆಳೆ​ಯುವ ‘ಮಾ​ನ​ಸಿಕ ಯುದ್ಧ​’​ವಾ​ಗಿದೆ ಎಂದು ವಿಶ್ಲೇ​ಷಿ​ಸ​ಲಾ​ಗಿ​ದೆ.

ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಭಾರ​ತೀಯ ಸೇನಾ​ಧಿ​ಕಾ​ರಿ​ಯೊ​ಬ್ಬರು, ‘ಚೀನಾ ಹಾಕಿದ ಹಾಡು​ಗ​ಳನ್ನು ನಾವು ಆಸ್ವಾ​ದಿ​ಸು​ತ್ತೇ​ವೆ’ ಎಂದು ಚಟಾಕಿ ಹಾರಿ​ಸಿ​ದ್ದಾರೆ. ಅಲ್ಲದೆ, ‘ಈ ಮಾನ​ಸಿಕ ಯುದ್ಧದ ತಂತ್ರದಿಂದ ವಿಚ​ಲಿ​ತ​ರಾ​ಗು​ವ​ವರು ನಾವ​ಲ್ಲ’ ಎಂದು ಅವ​ರು ಗುಡು​ಗಿ​ದ್ದಾ​ರೆ.

ಇದೇ ಮೊದ​ಲ​ಲ್ಲ:

ಈ ಹಿಂದೆಯೂ ಚೀನಾ ಈ ಕುಟಿಲ ನೀತಿ​ಯನ್ನು ಅನು​ಸ​ರಿ​ಸಿದ ಉದಾ​ಹ​ರ​ಣೆ​ಗ​ಳಿವೆ. 1962ನೇ ಇಸ​ವಿ​ಯಲ್ಲಿ ನಡೆದ ಯುದ್ಧದ ವೇಳೆ ಬಾಲಿ​ವು​ಡ್‌ ಹಿಂದಿ ಗೀತೆ​ಗ​ಳನ್ನು ಅದು ಲೌಡ್‌​ಸ್ಪೀ​ಕ​ರ್‌​ನಲ್ಲಿ ಗಡಿ​ಯಲ್ಲಿ ಪ್ರಸಾರ ಮಾಡಿ​ತ್ತು. ತಮಗೆ ಹಿಂದಿ ಬರು​ತ್ತದೆ. ಭಾರ​ತದ ನಡೆ​ಗಳ ಬಗ್ಗೆ ತಮಗೆ ತಿಳಿ​ಯು​ತ್ತಿ​ದೆ ಎಂಬ ಸಂದೇ​ಶ​ವನ್ನು ಭಾರ​ತೀಯ ಸೈನಿ​ಕ​ರಿಗೆ ರವಾ​ನಿ​ಸಲು ಅದು ಈ ತಂತ್ರ​ವನ್ನು ಅನು​ಸ​ರಿ​ಸಿ​ತ್ತು.

ಯಾರಿಗೂ ನಾವು ತಲೆಬಾಗಲ್ಲ: ಚೀನಾಕ್ಕೆ ಭಾರತ ಖಡಕ್ ಎಚ್ಚರಿಕೆ

ಚೀನಾ ಗಡಿ​ಯಲ್ಲಿ ನಿಯೋ​ಜನೆ ಆಗಿ​ರುವ ಭಾರ​ತೀಯ ಬಹು​ತೇಕ ಸೈನಿ​ಕ​ರಿ​ಗೆ ಪಂಜಾಬಿ ಹಾಗೂ ಹಿಂದಿ ಗೊತ್ತು. ಆ ಭಾಷೆ​ಯಲ್ಲೇ ಅವರು ಮಾತ​ನಾ​ಡು​ತ್ತಿರುತ್ತಾರೆ. ಇದನ್ನು ಗಮ​ನಿ​ಸಿ​ರುವ ಚೀನಾ, ಈಗ ಪಂಜಾಬಿ ಗೀತೆ ಹಾಕಿ ಹಿಂದಿಯಲ್ಲಿ ಎಚ್ಚ​ರಿಕೆ ಸಂದೇಶ ನೀಡು​ತ್ತಿ​ರು​ವು​ದನ್ನು ಗಮ​ನಿ​ಸಿ​ದರೆ, ತಾನು ಭಾರ​ತದ ತಿರು​ಗೇ​ಟಿ​ನಿಂದ ಹೆದ​ರಿ​ಲ್ಲ ಎಂದು ತೋರ್ಪ​ಡಿ​ಸಿ​ಕೊ​ಳ್ಳು​ತ್ತಿದೆ ಎಂದೂ ವಿಶ್ಲೇ​ಷಿ​ಸ​ಲಾ​ಗು​ತ್ತಿ​ದೆ.