ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನೆ!

By Suvarna News  |  First Published Oct 20, 2020, 8:09 PM IST

ಜಮ್ಮ ಮತ್ತು ಕಾಶ್ಮೀರದಲ್ಲಿ ಹೆಡೆ ಬಿಚ್ಚಲು ಪ್ರಯತ್ನಿಸಿದ ಉಗ್ರರಿಗೆ ಭಾರತೀಯ ಸೇನೆ ತಕ್ಕ ಶಾಸ್ತಿ ಮಾಡಿದೆ. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರಳಿಸಿದೆ.


ಶ್ರೀನಗರ(ಅ.20): ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಅವರಿತ ಪ್ರಯತ್ನಿಸುತ್ತಿರವ ಭಾರತೀಯ ಸೇನೆ ಶೋಪಿಯಾನ್ ಜಿಲ್ಲೆಯಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹೊಡೆದುರುಳಿಸಿದೆ. ಮೆಲ್ಹೊರ ವಲಯದಲ್ಲಿ ನಡೆದ ಉಗ್ರರ ಜೊತೆಗಿನ ಕಾಳಗಲ್ಲಿ ಭಾರತೀಯ ಸೇನೆ ಮೇಲುಗೈ ಸಾಧಿಸಿದೆ.

ನಿನಗೇನೂ ಆಗಲ್ಲ ಕಂದ: ಶರಣಾಗುವಂತೆ ಉಗ್ರನ ಮನವೊಲಿಸಿದ ಭಾರತೀಯ ಸೇನೆ ಯೋಧ!.

Tap to resize

Latest Videos

ಖಚಿತ ಮಾಹಿತಿ ಮೇರೆ ಕಾರ್ಯಚರಣೆ ನಡೆಸಿದ ಭಾರತೀಯ ಸೇನೆ ಒಟ್ಟು ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಇಷ್ಟೇ ಅಲ್ಲ ಎಕೆ ರೈಫಲ್ ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಹಿಜ್ಬ್ ಉಲ್ ಮುಜಾಹೀದ್ದೀನ್ ಸಂಘಟನೆಯ ತೌಸೀಫ್ ಅಹಮ್ಮದ್ ಖಾಂಡೆ ಹಾಗೂ ಉಮರ್ ತೊಕ್ರೆ ಎಂದು ಗುರುತಿಸಿಲಾಗಿದೆ. 

ಭಾರತದ ಗಡಿಯೊಳಕ್ಕೆ ನುಸುಳಲು ಉಗ್ರರಿಗೆ ಪಾಕ್ ನೆರವು; ಸಿಸಿಟಿವಿಯಲ್ಲಿ ಕುತಂತ್ರ ಬಯಲು!

ಉಗ್ರರು ಕುಲುಗಾಂ ಗ್ರಾಮದವರಾಗಿದ್ದು, ಇತ್ತೀಚೆಗೆ ಕುಲುಗಾಂ ಹಾಗೂ ಶೋಪಿಯಾನ್ ವಲಯದಲ್ಲಿ ನಡೆದ  ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಸೇನೆ ಕೂಬಿಂಗ್ ನಡೆಸಿತ್ತು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ ಇಬ್ಬರೂ ಉಗ್ರರನ್ನು ಹೊಡೆದುರುಳಿಸಿದೆ. ಕಾರ್ಯಚರಣೆ ಅಂತ್ಯಗೊಂಡಿರುವುದಾಗಿ ಗುರಿತು ಭಾರತೀಯ ಸೇನೆ ಹೇಳಿದೆ.

click me!