ಭಾರತದ SANT ಕ್ಷಿಪಣಿ ಪರೀಕ್ಷೆ ಯಶಸ್ವಿ; ಸೇನೆ ಸೇರಿದ 12ನೇ ಮಿಸೈಲ್

Published : Oct 20, 2020, 07:40 PM IST
ಭಾರತದ SANT ಕ್ಷಿಪಣಿ ಪರೀಕ್ಷೆ ಯಶಸ್ವಿ; ಸೇನೆ ಸೇರಿದ 12ನೇ ಮಿಸೈಲ್

ಸಾರಾಂಶ

DRDO ಅಭಿವೃದ್ಧಿ ಪಡಿಸಿದ 12ನೇ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಸ್ಟಾಂಡ್ ಆಫ್ ಆ್ಯಂಟಿ ಟಾಕ್ ಮಿಸೈಲ್ ಪರೀಕ್ಷೆ ಯಶಸ್ವಿಯಾಗಿದೆ. ಇದೀಗ ಭಾರತ ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕ್ಷಿಪಣಿ ಇದೀಗ ಭಾರತೀಯ ಸೇನೆಗೆ ಸೇರಿಕೊಳ್ಳುತ್ತಿದೆ.

ಒಡಿಶಾ(ಅ.20): ಭಾರತದ ಡಿಫೆನ್ಸ್ ರೀಸರ್ಚ್ ಅ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO) ಒಂದರ ಮೇಲೊಂದರಂತೆ ಕ್ಷಿಪಣಿ ಅಭಿವೃದ್ಧಿ ಪಡಿಸಿ ಪರೀಕ್ಷೆ ನಡೆಸುತ್ತಿದೆ. ಕಳೆದರಡು ತಿಂಗಳಲ್ಲಿ DRDO 12 ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ಸ್ಟಾಂಡ್ ಆಫ್ ಆ್ಯಂಟಿ ಟಾಕ್ ಮಿಸೈಲ್ SANT ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ.

ಶತ್ರು ರಾಷ್ಟ್ರದಲ್ಲಿ ನಡುಕ: 2 ತಿಂಗಳಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಕ್ಷಿಪಣಿ ಲಿಸ್ಟ್!

ಒಡಿಶಾ ಕರಾವಳಿ ತೀರದಲ್ಲಿ ಅತ್ಯಾಧುನಿಕ SANT ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ. ಈ ಕ್ಷಿಪಣಿ ಶೀಘ್ರದಲ್ಲೇ ಭಾರತೀಯ ವಾಯುಸೇನೆಯನ್ನು ಅಧೀಕೃತವಾಗಿ ಸೇರಿಕೊಳ್ಳಲಿದೆ. ಇತ್ತೀಚಗೆ ಭಾರತೀಯ ವಾಯುಸೇನೆ, ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಮಾಡಿದ DRDO ಶುಭಕೋರಿತ್ತು.

ಕಳೆದೆರಡು ತಿಂಗಳಲ್ಲಿ DRDO ಸ್ಟಾಂಡ್ ಆಫ್ ಆ್ಯಂಟಿ ಟಾಕ್ ಮಿಸೈಲ್(SANT)ಕ್ಷಿಪಣಿ ಸೇರಿದಂತೆ ಒಟ್ಟು 12 ಮಿಸೈಲ್ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.  

ಹೈಪರ್‌ಸಾನಿಕ್‌ ಟೆಕ್ನಾಲಜಿ ಡೆಮೊನ್‌ಸ್ಪ್ರೇಟರ್‌ ವೆಹಿಕಲ್‌, ಶರವೇಗದೊಂದಿಗೆ ವೈಮಾನಿಕ ದಾಳೀ ಮಾಡುವ ಅಭ್ಯಾಸ್,  ಟ್ಯಾಂಕ್‌ ಹೊಡೆದುರುಳಿಸುವ ಲೇಸರ್‌ ನಿರ್ದೇಶಿತ ಕ್ಷಿಪಣಿ,  ಪೃಥ್ವಿ-2 ಕ್ಷಿಪಣಿಯ ರಾತ್ರಿ ಪರೀಕ್ಷೆ,  ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ,  ಲೇಸರ್‌ ನಿರ್ದೇಶಿತ ಆ್ಯಂಟಿ ಟ್ಯಾಂಕ್‌ ಕ್ಷಿಪಣಿ,  ಶೌರ್ಯ ಸೂಪರ್‌ಸಾನಿಕ್‌ ಕ್ಷಿಪಣಿ,  ಕ್ಷಿಪಣಿ ಸಹಾಯದ ಟಾರ್ಪೆಡೋ ಹಾಗೂ ರಾಡಾರ್‌ ಧ್ವಂಸಗೊಳಿಸುವ ರುದ್ರಂ 1 ಸೇರಿದಂತೆ 12 ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: 14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!