
ಹೈದರಾಬಾದ್ ( ಅ. 20) ಹೊಸ ಹೊಸ ಸಾಧನೆಗಳು ಅನಾವರಣವಾಗುತ್ತಲೆ ಇರುತ್ತವೆ. ಭಾರತದ ಮೊದಲ ಮೈಕ್ರೊ ಆರ್ಟಿಸ್ಟ್ ಭಗವದ್ಗೀತೆಯನ್ನು 4,042 ಅಕ್ಕಿ ಕಾಳುಗಳ ಮೇಲೆ ಸೆರೆಹಿಡಿದಿದ್ದಾರೆ. ಈ ಮಹಾನ್ ಕಾರ್ಯ ಮುಗಿಸಲು ಅವರು 150 ಗಂಟೆಗಳನ್ನು ತೆಗೆದುಕೊಂಡಿದ್ದಾರೆ.
ಕಾನೂನು ವಿದ್ಯಾರ್ಥಿ ಆಗಿರುವ ಹೈದರಾಬಾದ್‌ನ ರಾಮಗಿರಿ ಸ್ವರಿಕಾ, ಭೂತಗನ್ನಡಿಯನ್ನು ಬಳಸದೆ ವಿವಿಧ ರೀತಿಯ ಮೈಕೋ-ಕಲಾಕೃತಿ ರಚಿಸುತ್ತಾರೆ. ಅನೇಕ ಪ್ರಶ್ತಸ್ತಿಗಳು ಅವರಿಗೆ ಸಂದಿದ್ದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಸ್ವರಿಕಾರ ಕಲಾಕೆಲಸವನ್ನು ನೋಡಿಕೊಂಡು ಬನ್ನಿ
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸ್ವರಿಕಾ, ಭಗವದ್ಗೀತೆಯನ್ನು ಕಲಾಕೃತಿ ಒಳಗೆ ತರಬೇಕು ಎನ್ನುವ ನನ್ನ ಆಸೆ ಪೂರೈಸಿದೆ ಎಂದಿದ್ದಾರೆ. ಎರಡು ಸಾವಿರಕ್ಕೂ ಅಧಿಕ ವಿವಿಧ ಕಲಾಕೃತಿಯನ್ನು ಸ್ವರಿಕಾ ನಿರ್ಮಾಣ ಮಾಡಿದ್ದಾರೆ. ಮಿಲ್ಕ್ ಆರ್ಟ್, ಪೇಪರ್ ಆರ್ಟ್ ನಲ್ಲಿಯೂ ಸ್ವರಿಕಾ ಸಿದ್ಧಹಸ್ತೆ. ಎಳ್ಳು ಮತ್ತು ಕೂದಲಿನ ಮೇಲೆಯೂ ಮೈಕ್ರೋ ಆರ್ಟ್ ನಿರ್ಮಾಣದ ಗುರಿ ಹೊಂದಿದ್ದೇನೆ ಎಂದು ತಿಳಿಸುತ್ತಾರೆ.
ಸಂವಿಧಾನದ ಪೀಠೀಕೆಯನ್ನು ಮೈಕ್ರೋ ಆರ್ಟ್ ನಲ್ಲಿ ಹೊರತಂದ ಸಾಧನೆಗೆ ತೆಲಂಗಾಣದ ರಾಜ್ಯಪಾಲರಿಂದ ಗೌರವ ಪಡೆದುಕೊಂಡಿದ್ದಾರೆ. ನನಗೆ ಮೊದಲಿನಿಂದಲೂ ಸಂಗೀತ ಮತ್ತು ಕಲೆಯಲ್ಲಿ ವಿಶೇಷ ಆಸಕ್ತಿ. ಕಳೆದ ನಾಲ್ಕು ವರ್ಷದಿಂದ ಮೈಕ್ರೋ ಆರ್ಟ್ ಆರಂಭಿಸಿದ್ದು ಒಂದೊಂದೆ ಹೆಜ್ಜೆ ಮುಂದೆ ಇಡುತ್ತಿದ್ದೇನೆ ಎನ್ನುತ್ತಾರೆ.
ಸ್ವರಿಕಾ ದೇಶದ ಮೊಟ್ಟ ಮೊದಲ ಮೈಕ್ರೋ ಆರ್ಟಿಸ್ಟ್ ಎಂದು ಹೆಸರು ಮಾಡಿದ್ದು ಕಳೆದ ವರ್ಷ ದೆಹಲಿಯ ಕಲ್ಚರಲ್ ಅಕಾಡೆಮಿ ಪುರಸ್ಕಾರ ನೀಡಿ ಗೌರವಿಸಿದೆ. 2017 ರಲ್ಲಿ ಇಂಟರ್ ನ್ಯಾಶನಲ್ ಆರ್ಡರ್ ಬುಕ್ ಆಫ್ ರೆಕಾರ್ಡ್ ನಲ್ಲಿಯೂ ಹೆಸರು ಸ್ಥಾಪನೆ ಮಾಡಿದ್ದಾರೆ. ನ್ಯಾಯಾಧೀಶೆಯಾಗುವ ಕನಸು ಹೊತ್ತಿರುವ ಸ್ವರಿಕಾಗೆ ನಮ್ಮ ಕಡೆಯಿಂದಲೂ ಗುಡ್ ಲಕ್..
.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ