
ರಾಜ್‌ಕೋಟ್: ಭಾರತವು ಶೀಘ್ರದಲ್ಲೇ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನಾ ಕ್ಷೇತ್ರದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಲಿದ್ದು, ಈ ನಿಟ್ಟಿನಲ್ಲಿ ಯುವಕರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಹೇಳಿದ್ದಾರೆ.
2 ದಿನದ ರಾಜ್‌ಕೋಟ್ (Rajkot) ಹಾಗೂ ಸುರೇಂದ್ರ ನಗರ (Surendranagar) ಭೇಟಿಯಲ್ಲಿರುವ ಸಚಿವರು ಇಲ್ಲಿನ ಸೌರಾಷ್ಟ್ರ (Saurashtra) ಹಾಗೂ ಆತ್ಮೀಯ ವಿಶ್ವವಿದ್ಯಾಲಯದ (Atmiya University) ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ‘ಪ್ರಧಾನಿ ನರೇಂದ್ರ ಮೋದಿಯವರ (Narendra Modi)‘ಭಾರತದ ಟೆಕೇಡ್’ ದೃಷ್ಟಿಕೋನವನ್ನು ಯುವಕರು ತಮ್ಮ ಕಠಿಣ ಪರಿಶ್ರಮ, ದೃಢತೆ ಹಾಗೂ ಉದ್ಯಮಶೀಲತೆಯಿಂದ ಸಾಕಾರಗೊಳಿಸಬಹುದು. ಇದಕ್ಕಾಗಿ ಸರ್ಕಾರ ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮೊದಲಾದ ಉಪಕ್ರಮಗಳನ್ನು ಜಾರಿಗೆ ತಂದಿದೆ’ ಎಂದರು.
ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ಗೆ ಕೇಂದ್ರ ಸಚಿವರ ಭೇಟಿ, ರಾಜೀವ್ ಚಂದ್ರಶೇಖರ್‌ಗೆ ಗರಿಮೆ!
ಈ ನಿಟ್ಟಿನಲ್ಲಿ ಗುಜರಾತ್ ಈಗಾಗಲೇ ತನ್ನ ಸೆಮಿಕಾನ್ ನೀತಿಯನ್ನು ಘೋಷಿಸಿದ್ದು, ಧೋಲೆರಾವನ್ನು ಏಷ್ಯಾದ ಅತಿದೊಡ್ಡ ಎಲೆಕ್ಟ್ರಾನಿಕ್ ಹಬ್ ಆಗಿ ಸ್ಥಾಪಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಧೋಲೆರಾ ರಾಜ್ಯದಲ್ಲಿ ಉದ್ಯಮಿಗಳಿಗೆ ಸಾಕಷ್ಟುಅವಕಾಶಗಳನ್ನು ಸೃಷ್ಟಿಸಿದೆ’ ಎಂದರು. ಇದೇ ವೇಳೆಯಲ್ಲಿ ಸರ್ಕಾರ ಸೆಮಿ ಕಂಡಕ್ಟರ್ ಡಿಸೈನ್ಸ್‌ಗಾಗಿ 100 ಕೋಟಿ ರು. ಅನುದಾನವನ್ನು ನೀಡಲು ಸಜ್ಜಾಗಿದೆ ಎಂದು ಘೋಷಿಸಿದರು. ದೇಶದಲ್ಲಿ ಆಮದಿನ ಪ್ರಮಾಣವನ್ನು ತಗ್ಗಿಸಿ ರಫ್ತು ಹೆಚ್ಚಿಸುವ ಉದ್ದೇಶದೊಂದಿಗೆ ಉದ್ಯಮಿಗಳನ್ನು ಪ್ರೋತ್ಸಾಹಿಸಲು ದೇಶದ ವಿವಿಧ ಭಾಗಗಳಲ್ಲಿ ರೋಡ್‌ಶೋಗಳನ್ನು ಶೀಘ್ರವೇ ಹಮ್ಮಿಕೊಳ್ಳುವುದಾಗಿ ಘೋಷಿಸಿದರು. ಬಳಿಕ ಮಾರ್ವಾಡಿ ವಿಶ್ವವಿದ್ಯಾಲಯದಲ್ಲಿ ಹೊಸ ಸ್ಟಾರ್ಟ್ಅಪ್ ಹಾಗೂ ಯುವ ಉದ್ಯಮಿಗಳನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು.
ಮೋದಿ@20 ಪುಸ್ತಕ ಬಿಡುಗಡೆ, ಮೋದಿ ಸಾಧನೆ ಬಗ್ಗೆ ಸಂವಾದ ಕಾರ್ಯಕ್ರಮ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ