ಇರಾನ್‌ ಹಿಜಾಬ್‌ ವಿರೋಧಿ ಹೋರಾಟ ಮತ್ತಷ್ಟು ತೀವ್ರ: ಬೀದಿಗಿಳಿದ ವಿದ್ಯಾರ್ಥಿನಿಯರು, ಅಸ್ಕರ್‌ ಪುರಸ್ಕೃತರು

By Kannadaprabha News  |  First Published Oct 6, 2022, 8:07 AM IST

ಮಹ್ಸಾ ಅಮಿನಿ ಪೊಲೀಸ್‌ ದೌರ್ಜನ್ಯಕ್ಕೆ ಬಲಿಯಾದ ಬಳಿಕ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಪ್ರತಿಭಟನೆ ಮತ್ತಷ್ಟುತೀವ್ರತೆ ಪಡೆದುಕೊಂಡಿದೆ. ಈ ಹೋರಾಟಕ್ಕೆ ಇದೀಗ ಕಾಲೇಜು ವಿದ್ಯಾರ್ಥಿನಿಯರು ಮತ್ತು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ನಟಿಯರು ಕೂಡಾ ಕೈಜೋಡಿಸಿದ್ದು, ಪ್ರತಿಭಟನೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.


ತೆಹ್ರಾನ್‌: ಮಹ್ಸಾ ಅಮಿನಿ ಪೊಲೀಸ್‌ ದೌರ್ಜನ್ಯಕ್ಕೆ ಬಲಿಯಾದ ಬಳಿಕ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಪ್ರತಿಭಟನೆ ಮತ್ತಷ್ಟುತೀವ್ರತೆ ಪಡೆದುಕೊಂಡಿದೆ. ಈ ಹೋರಾಟಕ್ಕೆ ಇದೀಗ ಕಾಲೇಜು ವಿದ್ಯಾರ್ಥಿನಿಯರು ಮತ್ತು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ನಟಿಯರು ಕೂಡಾ ಕೈಜೋಡಿಸಿದ್ದು, ಪ್ರತಿಭಟನೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.

ಮಂಗಳವಾರ ತೆಹ್ರಾನ (Tehran) ತರ್ಬೀಯತ್‌ ವಿವಿ (Tarbiyat University), ಖಯ್ಯಾಮ್‌ ವಿವಿ (Khayyam University), ಶರೀಫ್‌ ವಿವಿ (Sharif University) ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಸಾವಿರಾರು ವಿದ್ಯಾರ್ಥಿನಿಯರು (female students) ಬೀದಿಗಿಳಿದು ಹಿಜಾಬ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ಬಂಧಿಸಲ್ಪಟ್ಟ ವಿದ್ಯಾರ್ಥಿನಿಯರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಪ್ರತಿಭಟನಾನಿರತ ವಿದ್ಯಾರ್ಥಿನಿಯರ ಮೇಲೆ ಹಲವು ಸ್ಥಳಗಳಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ ಬಗ್ಗೆಯೂ ಹಲವು ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Tap to resize

Latest Videos

ಮತ್ತೊಂದೆಡೆ ಆಸ್ಕರ್‌ ಪ್ರಶಸ್ತಿ ಪುರಸ್ಕೃತರಾದ ಫ್ರಾನ್ಸ್‌ನ ಮರಿಯೋನ್‌ ಕಾಟಿಲಾರ್ಡ್‌ (Marion Cotillard) ಮತ್ತು ಜೂಲಿಯೆಟ್‌ ಬಿನೋಚೆ (Juliette Binoche)ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವ ವಿಡಿಯೋವನ್ನು ಬುಧವಾರ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ.

click me!