
ನವದೆಹಲಿ(ಸೆ.07): ಚೀನಾ ಜತೆಗೆ ಗಡಿ ಸಂಘರ್ಷ ಮುಂದುವರಿದಿರುವಾಗಲೇ, ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ರಸ್ತೆಯೊಂದನ್ನು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಸದ್ದಿಲ್ಲದೆ ಬಹುತೇಕ ಪೂರ್ಣಗೊಳಿಸಿದೆ. ತುರ್ತು ಸಂದರ್ಭಗಳಲ್ಲಿ ಸೇನಾ ಪಡೆಗಳನ್ನು ಅತ್ಯಂತ ತ್ವರಿತವಾಗಿ ಗಡಿಗೆ ರವಾನಿಸಲು ಈ ರಸ್ತೆ ಸಹಕಾರಿಯಾಗಲಿದೆ.
ಮನಾಲಿಯಿಂದ ಲೇಹ್‌ಗೆ ತಲುಪಲು ಹಾಲಿ 12ರಿಂದ 14 ತಾಸುಗಳಷ್ಟುಸುದೀರ್ಘ ಸಮಯ ಹಿಡಿಯುತ್ತಿದೆ. 258 ಕಿ.ಮೀ. ಉದ್ದವಿರುವ ನಿಮ್ಮು- ಪದಂ- ದಾರ್ಚಾ ರಸ್ತೆಯ ಮೂಲಕ ಹೋದರೆ 6ರಿಂದ 7 ತಾಸುಗಳಲ್ಲಿ ಗಮ್ಯ ತಲುಪಬಹುದು. ಸದ್ಯ ಶ್ರೀನಗರ- ಕಾರ್ಗಿಲ್- ಲೇಹ್ ಹಾಗೂ ಮನಾಲಿ ಸರ್ಚು- ಲೇಹ್ ರಸ್ತೆಗಳನ್ನು ಯೋಧರು ಬಳಸುತ್ತಿದ್ದಾರೆ. ಆದರೆ ಈ ರಸ್ತೆಗಳು ಅಂತಾರಾಷ್ಟ್ರೀಯ ಗಡಿಗೆ ಸನಿಹದಲ್ಲಿರುವುದರಿಂದ ಶತ್ರುಪಡೆಗಳು ಸುಲಭವಾಗಿ ಕಣ್ಣಿಡಬಹುದಾಗಿದೆ. ಆದರೆ ಹೊಸ ರಸ್ತೆ ಶತ್ರುಪಡೆಗಳ ಕಣ್ಣಿಗೆ ಕಾಣಿಸುವುದಿಲ್ಲ.
ಉಳಿದ ಎರಡು ರಸ್ತೆಗಳನ್ನು ಪ್ರತಿ ವರ್ಷ ನವೆಂಬರ್‌ನಿಂದ 6-7 ತಿಂಗಳ ಕಾಲ ಹಿಮಪಾತದ ಕಾರಣ ಮುಚ್ಚಲಾಗುತ್ತದೆ. ಆದರೆ ಹೊಸ ರಸ್ತೆಯನ್ನು ವರ್ಷವಿಡೀ ಬಳಸಬಹುದು. 30 ಕಿ.ಮೀ. ಕೆಲಸ ಮಾತ್ರ ಬಾಕಿ ಇದ್ದು, ರಸ್ತೆಯನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ