ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಭವ್ಯ ರಾಮ ಮಂದಿರದ ನಕ್ಷೆಗೆ ಗ್ರೀನ್ ಸಿಗ್ನಲ್| ಎಲ್ಲಕ್ಕಿಂತ ಮೊದಲು ಮಂದಿರ ನಿರ್ಮಿಸಲು ಅಡಿಪಾಯ ಹಾಕಲು ಭೂಮಿ ಅಗೆಯಲು ಆರಂಭ| ಈ ಎಲ್ಲಾ ಯಂತ್ರಗಳು ಖಾನ್ಪುರದಿಂದ ಬಂದಿವೆ
ಅಯೋಧ್ಯೆ(ಸೆ.06): ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಭವ್ಯ ರಾಮ ಮಂದಿರದ ನಕ್ಷೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಶ್ರೀರಾಮನ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಿದೆ. ಎಲ್ಲಕ್ಕಿಂತ ಮೊದಲು ಮಂದಿರ ನಿರ್ಮಿಸಲು ಅಡಿಪಾಯ ಹಾಕಲು ಭೂಮಿ ಅಗೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಮನೂರಿಗೆ ದೊಡ್ಡ ದೊಡ್ಡ ಯಂತ್ರಗಳು ಎಂಟ್ರಿ ಕೊಟ್ಟಿವೆ.
ಈ ಎಲ್ಲಾ ಯಂತ್ರಗಳು ಖಾನ್ಪುರದಿಂದ ಬಂದಿವೆ ಎನ್ನಲಾಗಿವೆ. ಈ ನಕ್ಷೆಯಲ್ಲಿ ಮಂದಿರ ನಿರ್ಮಿಸುವ ಐದು ಎಕರೆ ಕ್ಷೇತ್ರದೊಂದಿಗೆ ಎಪ್ಪತ್ತು ಎಕರೆ ವಿಸ್ತೀರ್ಣದ ಲೇಔಟ್ ಇದೆ.
undefined
200 ಅಡಿ ಆಳವಿರಲಿದೆ ರಾಮ ಮಂದಿರದ ಅಡಿಪಾಯ
ಮಷೀನ್ ಇಂಜಿನಿಯರ್ ಎ. ಕೆ. ಯಾದವ್ ಅನ್ವಯ ಇದರಿಂದ ಮಂದಿರದ ಅಡಿಪಾಯ ಅಗೆಯಲಾಗುತ್ತದೆ. 1200 ಸ್ಥಾನಗಳಲ್ಲಿ ಸ್ತಂಭ ನಿರ್ಮಿಸುವ ನಿಟ್ಟಿನಲ್ಲಿ ಆಳವಾಗಿ ಅಗೆಯಲಾಗುತ್ತದೆ. ಈ ಮಷೀನ್ ಅಡಿಪಾಯ ತಯಾರಿಸಲು ಬಳಸಲಾಗುತ್ತದೆ.
ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹಾಮಂತ್ರಿ ಚಂಪತ್ ರಾಯ್ ಅನ್ವಯ ಅಡಿಪಾಯಕ್ಕೆ ಬಲಿಷ್ಟವಾದ ಕಾಂಕ್ರೀಟ್ ಮೆಟಿರಿಯಲ್ ಬಳಸಲಾಗುತ್ತದೆ. ಈ ಅಡಿಪಾಯದಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತದೆ. ಇದಕ್ಕಾಗಿ ದೊಡ್ಡ ದೊಡ್ಡ ಯಂತ್ರಗಳು ಬರಲಾರಂಭಿಸಿವೆ. ಇವೆಲ್ಲವನ್ನೂ ರಾಮ ಜನ್ಮ ಭೂಮಿಯ ಗೇಟ್ ನಂಬರ್ 3ರಿಂದ ಎಂಟ್ರಿ ನೀಡಲಿವೆ.