ಪಿಟಿಐ ನವದೆಹಲಿ: ದೇಶದ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ನೀತಿಗೆ ಉತ್ತೇಜನ ನೀಡಿದ ಬಳಿಕ ಉಂಟಾಗುತ್ತಿರುವ ಭಾರೀ ಬದಲಾವಣೆ 2023ನೇ ಸಾಲಿನಲ್ಲಿ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದ್ದು, ವಾರ್ಷಿಕ ರಕ್ಷಣಾ ಉತ್ಪಾದನೆ 1.27 ಲಕ್ಷ ಕೋಟಿ ರು. ಮೌಲ್ಯವನ್ನು ತಲುಪಿದೆ. ಇದು ದೇಸೀ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
2022ನೇ ಸಾಲಿನಲ್ಲಿ ದೇಶದಲ್ಲಿ ಉತ್ಪಾದನೆಯಾದ ರಕ್ಷಣಾ ಸಲಕರಣೆಗಳ ಮೌಲ್ಯ 1,08,684 ಕೋಟಿ ರು.ಗಳಾಗಿದ್ದರೆ, 2023-24ನೇ ಸಾಲಿನಲ್ಲಿ ಅದು 1,26,887 ಕೋಟಿ ರು. ಆಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಹರ್ಷ ವ್ಯಕ್ತಪಡಿಸಿದ್ದು, ‘ಭಾರತವನ್ನು ರಕ್ಷಣಾ ಉತ್ಪಾದನೆಯ ಜಾಗತಿಕ ಕೇಂದ್ರವಾಗಿಸುವ ನಿಟ್ಟಿನಲ್ಲಿ ಇದು ಇನ್ನೊಂದು ಪ್ರಗತಿದಾಯಕ ಹೆಜ್ಜೆ’ ಎಂದು ಹೇಳಿದ್ದಾರೆ.
ಮೀನು ತಿನ್ನೋದಾದ್ರೆ ತಿನ್ನಿ, ವಿಡಿಯೋ ಏಕೆ?: ತೇಜಸ್ವಿಗೆ ರಾಜನಾಥ್ ಟಾಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಬಿಡುಗಡೆ ಮಾಡಿ, ‘ಭಾರತದಲ್ಲಿ ರಕ್ಷಣಾ ಉತ್ಪಾದನೆ 2023-24ನೇ ಸಾಲಿನಲ್ಲಿ 1.27 ಲಕ್ಷ ಕೋಟಿ ರು. ತಲುಪಿ ದಾಖಲೆ ಬರೆದಿದೆ. ನರೇಂದ್ರ ಮೋದಿ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಿಂದ ಇದು ಸಾಕಾರವಾಗಿದೆ. ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕಂಪನಿಗಳು ಒಟ್ಟಾಗಿ ಈ ಸಾಧನೆ ಮಾಡಿವೆ. ರಕ್ಷಣಾ ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲು ಶೇ.79.2ರಷ್ಟಿದ್ದರೆ, ಖಾಸಗಿ ಕಂಪನಿಗಳ ಶೇ.20.8ರಷ್ಟಿದೆ. ಕಳೆದ ಸಾಲಿಗಿಂತ ರಕ್ಷಣಾ ಉತ್ಪಾದನೆ ಈ ಸಾಲಿನಲ್ಲಿ ಶೇ.16.8ರಷ್ಟು ಅಧಿಕವಾಗಿದೆ. ಇದೇ ವೇಳೆ, 2023-24ನೇ ಸಾಲಿನಲ್ಲಿ ಭಾರತ 21,083 ಕೋಟಿ ರು.ಗಳಷ್ಟು ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಗೆ ರಫ್ತು ಮಾಡಿದ್ದು, ಇದೂ ಕೂಡ ದಾಖಲೆಯಾಗಿದೆ’ ಎಂದು ಹೇಳಿದ್ದಾರೆ.
ಧೋನಿ ರೀತಿ ರಾಹುಲ್ ಗಾಂಧಿ ಬೆಸ್ಟ್ ‘ಫಿನಿಶರ್’: ರಾಜನಾಥ ಸಿಂಗ್ ವ್ಯಂಗ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ