ಆಜ್‌ ಪ್ರಳಯ್‌ ಆಯೇಗಿ ಎಂದಿದ್ದ ಭೋಲೆಬಾಬಾ: ಇದಾಗಿ ಕೆಲವೇ ಕ್ಷಣದಲ್ಲಿ ಕಾಲ್ತುಳಿತ ದುರಂತ ನಡಿತು ಎಂದ ಭಕ್ತ

Published : Jul 06, 2024, 10:08 AM IST
ಆಜ್‌ ಪ್ರಳಯ್‌ ಆಯೇಗಿ ಎಂದಿದ್ದ ಭೋಲೆಬಾಬಾ: ಇದಾಗಿ ಕೆಲವೇ ಕ್ಷಣದಲ್ಲಿ ಕಾಲ್ತುಳಿತ ದುರಂತ ನಡಿತು ಎಂದ ಭಕ್ತ

ಸಾರಾಂಶ

ಕಾಲ್ತುಳಿತ ಘಟನೆಯ ಕೆಲವೇ ನಿಮಿಷ ಮುನ್ನ ಭೋಲೆ ಬಾಬಾ ‘ಆಜ್‌ ಪ್ರಳಯ್‌ ಆಯೇಗಿ’ (ಇಂದು ಪ್ರಳಯ ಸಂಭವಿಸುತ್ತೆ’ ಎಂದಿದ್ದರು. ಅವರ ಮಾತಿನಂತೆಯೇ ಕಾಲ್ತುಳಿತ ಸಂಭವಿಸಿತು ಎಂದು ಗಾಯಾಳು ಭಕ್ತನೊಬ್ಬ ಹೇಳಿದ್ದಾನೆ.

ಹಾಥ್ರಸ್‌: ಕಾಲ್ತುಳಿತ ಘಟನೆಯ ಕೆಲವೇ ನಿಮಿಷ ಮುನ್ನ ಭೋಲೆ ಬಾಬಾ ‘ಆಜ್‌ ಪ್ರಳಯ್‌ ಆಯೇಗಿ’ (ಇಂದು ಪ್ರಳಯ ಸಂಭವಿಸುತ್ತೆ’ ಎಂದಿದ್ದರು. ಅವರ ಮಾತಿನಂತೆಯೇ ಕಾಲ್ತುಳಿತ ಸಂಭವಿಸಿತು ಎಂದು ಗಾಯಾಳು ಭಕ್ತನೊಬ್ಬ ಹೇಳಿದ್ದಾನೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಬಾರ 15 ವರ್ಷದ ಅನುಯಾಯಿ ಕಮಲೇಶ್‌ ಮಾತನಾಡಿ, ‘ವೇದಿಕೆಯಿಂದ ಹೊರಡುವ ಮುನ್ನ, ಅವರು ಮತ್ತೆ ಮೈಕ್ ಹಿಡಿದು ‘ಅಬ್ ಮೈ ಜಾ ರಹಾ ಹೂಂ, ಆಜ್ ಪ್ರಳಯ್ ಆಯೇಗಿ‘ (ನಾನು ಈಗ ಹೊರಡುತ್ತಿದ್ದೇನೆ, ಪ್ರಳಯ ಆಗಲಿದೆ) ಎಂದು ಹೇಳಿದರು. ಅವರು ಹೋಗುವವರೆಗೂ ಏನೂ ಆಗಿರಲಿಲ್ಲ. ಹೋದ ನಂತರ ಕಾಲ್ತುಳಿತ ನಡೆಯಿತು. ಬಾಬಾ ಅವರ ಮಾತಿನ ನಿಖರತಯನ್ನು ನೀವೇ ಊಹಿಸಿ. ಅವರಿಗೆ ಏನಾಗುತ್ತದೆ ಎಂಬುದು ನಿಖರವಾಗಿ ತಿಳಿದಿತ್ತು’ ಎಂದು ಹೇಳಿದೆ.

Hathras Stampede : 121 ಮಂದಿ ಸತ್ತು, ಐಸಿಯುವಿನಲ್ಲಿ‌ ಪತ್ನಿ ಇದ್ದರೂ ಸತ್ಸಂಗ ತಪ್ಪಿಸೋಲ್ವಂತೆ ಈ ಪತಿರಾಯ!

ಹಾಥ್ರಸ್‌ ಕಾಲ್ತುಳಿತದ ಮುಖ್ಯ ಆರೋಪಿ ಮಧುಕರ್‌ ಬಂಧನ

ಹಾಥ್ರಸ್‌: 121 ಜನರ ಬಲಿಪಡೆದ ಉತ್ತರ ಪ್ರದೇಶದ ಹಾಥ್ರಸ್‌ ಕಾಲ್ತುಳಿತ ದುರಂತದ ಪ್ರಮುಖ ಆರೋಪಿ, ಕಾರ್ಯಕ್ರಮದ ಸಂಘಟಕ ಮತ್ತು ಮುಖ್ಯ ಸೇವಾದಾರ ದೇವಪ್ರಕಾಶ್‌ ಮಧುಕರ್‌ನನ್ನು ಶುಕ್ರವಾರ ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೇರಿದೆ.

ಮಧುಕರ್‌ ಸುಳಿವು ಕೊಟ್ಟವರಿಗೆ ಪೊಲೀಸರು 1 ಲಕ್ಷ ರು. ಬಹುಮಾನ ಘೋಷಿಸಿದ್ದರು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಹಾಗೂ ಪಕ್ಕದ ರಾಜ್ಯಗಳಲ್ಲಿ ಶೋಧ ಆರಂಭಿಸಿದ್ದರು. ಶುಕ್ರವಾರ ರಾತ್ರಿ ಆತನನ್ನು ಬಂಧಿಸಲಾಗಿದೆ. ಇದೇ ವೇಳೆ, ಈ ಕಾರ‍್ಯಕ್ರಮ ನಡೆಸಿಕೊಟ್ಟಿದ್ದ ವಿವಾದಾತ್ಮಕ ಧರ್ಮಗುರು ಸೂರಜ್‌ ಪಾಲ್‌ ಅಲಿಯಾಸ್‌ ನಾರಾಯಣ ಸಾಕಾರ ಹರಿ ಅಲಿಯಾಸ್‌ ಭೋಲೆ ಬಾಬಾನಿಗೂ ಶೋಧ ನಡೆದಿದ್ದು, ಆತನನ್ನು ವಿಚಾರಣೆ ಮಾಡುವ ಉದ್ದೇಶವಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಹಾಥ್ರಸ್‌ ಕಾಲ್ತುಳಿತ, 6 ಜನರ ಬಂಧನ: ಸಂಘಟಕನ ಪತ್ತೆಗೆ 1 ಲಕ್ಷ ಬಹುಮಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌