ಚೀನಾದಿಂದ ಬರುವ ವಿದ್ಯುತ್‌ ಉಪಕರಣಗಳಲ್ಲಿ ವೈರಸ್‌?

By Kannadaprabha News  |  First Published Jun 29, 2020, 7:50 AM IST

ಚೀನಾದಿಂದ ಬರುವ ವಿದ್ಯುತ್‌ ಉಪಕರಣಗಳಲ್ಲಿ ವೈರಸ್‌?| ತೀವ್ರ ತಪಾಸಣೆಗೆ ಕೇಂದ್ರ ಸರ್ಕಾರ ನಿರ್ಧಾರ


ನವದೆಹಲಿ(ಜೂ.29): ಗಡಿಯಲ್ಲಿ ಉದ್ಧಟತನ ತೋರುತ್ತಿರುವ ಹಾಗೂ ದೇಶದ ಮೇಲೆ ಪದೇಪದೇ ಸೈಬರ್‌ ದಾಳಿಗೆ ಯತ್ನಿಸುತ್ತಿರುವ ಚೀನಾಕ್ಕೆ ಭಾರತ ಇನ್ನೊಂದು ಶಾಕ್‌ ನೀಡಲು ಮುಂದಾಗಿದೆ. ಇನ್ನುಮುಂದೆ ಚೀನಾದಿಂದ ಆಮದಾಗುವ ಎಲ್ಲ ವಿದ್ಯುತ್‌ ಉಪಕರಣಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಲು ಕೇಂದ್ರ ಇಂಧನ ಇಲಾಖೆ ನಿರ್ಧರಿಸಿದ್ದು, ಎಲ್ಲ ಉಪಕರಣಗಳಲ್ಲಿ ಮಾಲ್ವೇರ್‌ ಮತ್ತು ಟ್ರೋಜನ್‌ ಹಾರ್ಸ್‌ಗಳಿಗಾಗಿ ಹುಡುಕಾಟ ನಡೆಸಲಿದೆ.

ಚೀನಾಕ್ಕೆ ಭರ್ಜರಿ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?

Latest Videos

undefined

ಈ ಮಾಲ್ವೇರ್‌ಗಳನ್ನು ಮೊದಲೇ ವಿದ್ಯುತ್‌ ಉಪಕರಣಗಳಲ್ಲಿ ಅಳವಡಿಸಿ ಭಾರತಕ್ಕೆ ಕಳಿಸಿ, ನಂತರ ಚೀನಾದವರು ಸುಲಭವಾಗಿ ಹ್ಯಾಕ್‌ ಮಾಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌ ಈ ಮಾಹಿತಿ ನೀಡಿದ್ದು, ‘ದೇಶದ ಎಲ್ಲಾ ಉದ್ದಿಮೆಗಳು, ಸಂಪರ್ಕ ವ್ಯವಸ್ಥೆಗಳು, ದತ್ತಾಂಶ ಸಂಗ್ರಹಣೆ ವ್ಯವಸ್ಥೆಗಳು ಹಾಗೂ ಇನ್ನಿತರ ವ್ಯೂಹಾತ್ಮಕ ವ್ಯವಸ್ಥೆಗಳು ವಿದ್ಯುತ್ತಿನಿಂದಲೇ ನಡೆಯುತ್ತವೆ. ಚೀನಾದಿಂದ ಆಮದಾಗುವ ವಿದ್ಯುತ್‌ ಉಪಕರಣಗಳು ಎಲ್ಲೆಡೆ ಬಳಕೆಯಾಗುತ್ತಿವೆ. ಹೀಗಾಗಿ ಈ ಉಪಕರಣಗಳಲ್ಲಿ ಮೊದಲೇ ಮಾಲ್ವೇರ್‌ ಅಥವಾ ಟ್ರೋಜನ್‌ಗಳಿದ್ದರೆ ಚೀನಾದ ಹ್ಯಾಕರ್‌ಗಳು ಸುಲಭವಾಗಿ ವಿದ್ಯುತ್‌ ವ್ಯವಸ್ಥೆಯನ್ನು ಹಾಳುಗಡೆವಬಹುದು.

ಚೀನಾದಂತೆ ಭಾರತ ಜಾಗತಿಕ ಉತ್ಪಾದನಾ ಕೇಂದ್ರ ಆಗೋದು ಹೇಗೆ?

ಹೀಗಾಗಿ ನಾವು ಚೀನಾ, ಪಾಕಿಸ್ತಾನದಂತಹ ದೇಶದಿಂದ ಆಮದು ಮಾಡಿಕೊಳ್ಳುವ ವಿದ್ಯುತ್‌ ಉತ್ಪನ್ನಗಳನ್ನು ವ್ಯಾಪಕವಾಗಿ ಪರೀಕ್ಷೆ ನಡೆಸಿದ ನಂತರವೇ ದೇಶದೊಳಕ್ಕೆ ಬಿಟ್ಟುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

click me!