ದೇಶದಲ್ಲಿ 5.41 ಲಕ್ಷ ಮಂದಿಗೆ ಸೋಂಕು: 3.2 ಲಕ್ಷ ಮಂದಿ ಗುಣಮುಖ!

By Kannadaprabha NewsFirst Published Jun 29, 2020, 7:14 AM IST
Highlights

ಹೊಸ ಸೋಂಕಿತರ ಪ್ರಮಾಣದಲ್ಲಿನ ಭಾರೀ ಏರಿಕೆ| ನಿನ್ನೆ ದಾಖಲೆಯ 21203 ಹೊಸ ಸೋಂಕಿತರು| ದೇಶದಲ್ಲಿ 5.41 ಲಕ್ಷ ಮಂದಿಗೆ ಸೋಂಕು: 3.2 ಲಕ್ಷ ಮಂದಿ ಗುಣಮುಖ!

ನವದೆಹಲಿ(ಜೂ.29): ಹೊಸ ಸೋಂಕಿತರ ಪ್ರಮಾಣದಲ್ಲಿನ ಭಾರೀ ಏರಿಕೆ ಮುಂದುವರೆದಿದ್ದು,ಭಾನುವಾರ ದೇಶಾದ್ಯಂತ 21203 ಜನರಲ್ಲಿ ಕೊರೋನಾ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 541040ಕ್ಕೆ ತಲುಪಿದೆ. ಇನ್ನು ನಿನ್ನೆ 390 ಜನರ ಸಾವಿನೊಂದಿಗೆ ಈವರೆಗೆ ವೈರಸ್‌ಗೆ ಬಲಿಯಾದವರ ಸಂಖ್ಯೆ 16478ಕ್ಕೆ ಮುಟ್ಟಿದೆ. ಇದರ ನಡುವೆಯೇ 320887 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಂದರೆ ಗುಣಮುಖರಾದವರ ಪ್ರಮಾಣ ಶೇ.59.30ಕ್ಕೆ ತಲುಪಿದೆ.

ಇನ್ನು ಕೊರೋನಾ ಹಾಟ್‌ಸ್ಪಾಟ್‌ ಕುಖ್ಯಾತಿಯ ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಮಾಣದ 5493 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,64,626 ಮಂದಿಗೆ ಸೋಂಕು ತಗುಲಿದಂತಾಗಿದೆ. ಅಲ್ಲದೆ, ಭಾನುವಾರ 156 ಮಂದಿ ಸೋಂಕಿಗೆ ಬಲಿಯಾಗುವುದರೊಂದಿಗೆ ಈ ಹೆಮ್ಮಾರಿಗೆ ಸಾವನ್ನಪ್ಪಿದವರ ಅಂಕಿ 7429ಕ್ಕೆ ಏರಿದೆ.

ಕೊರೋನಾ ರೋಗಿಗಳಿಗೆ ಅಗ್ಗದ ಸ್ಟೆರಾಯ್ಡ್‌ ನೀಡಲು ಒಪ್ಪಿಗೆ!

ಇನ್ನು ತಮಿಳುನಾಡಿನಲ್ಲಿ 3940, ದೆಹಲಿಯಲ್ಲಿ 2889, ಕರ್ನಾಟಕ 1267, ಆಂಧ್ರ ಪ್ರದೇಶ 813, ಗುಜರಾತ್‌ನಲ್ಲಿ 624, ಉತ್ತರ ಪ್ರದೇಶದಲ್ಲಿ 597 ಹಾಗೂ ಪಶ್ಚಿಮ ಬಂಗಾಳದಲ್ಲಿ 572 ಮಂದಿಗೆ ಈ ವ್ಯಾಧಿ ವಕ್ಕರಿಸಿಕೊಂಡಿದೆ. ಏತನ್ಮಧ್ಯೆ, ಭಾನುವಾರ ಈ ಸೋಂಕಿಗೆ ಮಹಾರಾಷ್ಟ್ರದಲ್ಲಿ 156, ದಿಲ್ಲಿ 65, ತಮಿಳುನಾಡು 54, ಕರ್ನಾಟಕ 16, ಆಂಧ್ರಪ್ರದೇಶ 12 ಮತ್ತು ಉತ್ತರ ಪ್ರದೇಶದಲ್ಲಿ 11 ಮಂದಿ ಬಲಿಯಾಗಿದ್ದಾರೆ.

ಗುಣಮುಖ ಪ್ರಮಾಣ ಶೇ.60ರ ಸಮೀಪಕ್ಕೆ

ಟಾಪ್‌ ಸೋಂಕು ಪತ್ತೆ

ಮಹಾರಾಷ್ಟ್ರ: 5493

ತಮಿಳುನಾಡು: 3940

ದೆಹಲಿ: 2889

'ಮೋದಿ ಸಾರಥ್ಯದಲ್ಲಿ ಚೀನಾ, ಕೊರೋನಾ ಎರಡೂ ಯುದ್ಧ ಗೆಲ್ಲುತ್ತೇವೆ'

ಟಾಪ್‌ ಸಾವು ದಾಖಲು

ಮಹಾರಾಷ್ಟ್ರ: 156

ದೆಹಲಿ: 65

ತಮಿಳುನಾಡು: 54

"

click me!