ಈ ವಲಯದಲ್ಲಿ ಭಾರತ ನಂ.1 ಆಗಲಿದೆ: ದೇಶದ 3 ಸೆಮಿಕಂಡಕ್ಟರ್‌ ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ

By Kannadaprabha News  |  First Published Mar 14, 2024, 9:38 AM IST

ಭಾರತ ಸೆಮಿಕಂಡಕ್ಟರ್‌ ವಲಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಕೆಲವೇ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಧೋಲೇರಾ (ಗುಜರಾತ್‌): ಭಾರತ ಸೆಮಿಕಂಡಕ್ಟರ್‌ ವಲಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಕೆಲವೇ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನಲ್ಲಿ 2 ಹಾಗೂ ಅಸ್ಸಾಂನಲ್ಲಿ 1 ಸೆಮಿಕಂಡಕ್ಟರ್‌ ತಯಾರಿಕಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಸೆಮಿಕಂಡಕ್ಟರ್‌ ಅಗತ್ಯತೆಯನ್ನು ಭಾರತವು 1960ರಲ್ಲೇ ಮನಗಂಡಿತ್ತು. ಆದರೆ ಅಂದಿನ ಸರ್ಕಾರ ಬಡತನವನ್ನು ಮುಂದಿಟ್ಟು ಯೋಜನೆಯನ್ನು ಜಾರಿ ಮಾಡಲೇ ಇಲ್ಲ. ನಾವು ಎರಡು ವರ್ಷಗಳ ಮುಂಚೆ ಸೆಮಿಕಂಡಕ್ಟರ್‌ ಮಿಷನ್‌ ಯೋಜನೆ ಸಂಕಲ್ಪಿಸಿದ ಮೇಲೆ ಕೆಲಸಗಳನ್ನು ಆರಂಭಿಸಿ ಇಂದು 1.25 ಲಕ್ಷ ಕೋಟಿ ಮೌಲ್ಯದ ತಯಾರಿಕಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಈ ಮೂಲಕ ನಮ್ಮ ಸರ್ಕಾರ ಅಭಿವೃದ್ಧಿಯ ಸಂಕಲ್ಪ ತೊಟ್ಟಿದ್ದನ್ನು ಮಾಡಿ ತೋರಿಸಿದೆ. ಇನ್ನು ಮುಂದೆ ಸೆಮಿಕಂಡಕ್ಟರ್‌ ವಲಯದಲ್ಲಿ ಭಾರತ ಸ್ವಾವಲಂಬನೆಯನ್ನು ಸಾಧಿಸಲಿದ್ದು, ಜಾಗತಿಕವಾಗಿ ಕೆಲವೇ ವರ್ಷಗಳಲ್ಲಿ ಉನ್ನತ ಸ್ಥಾನಕ್ಕೇರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tap to resize

Latest Videos

Watch: ಸರ್ಕಾರ ರೂಪಿಸುತ್ತಿರುವ ಸೆಮಿಕಂಡಕ್ಟರ್‌ ವ್ಯವಸ್ಥೆ ಬಗ್ಗೆ ಪತ್ರಕರ್ತರಿಗೆ ಪಾಠ ಮಾಡಿ ವಿವರಿಸಿದ ಸಚಿವ ಅಶ್ವಿನಿ ವೈಷ್ಣವ್‌!

ಯುವಜನತೆಗೆ ಲಾಭ:

ಸೆಮಿಕಂಡಕ್ಟರ್‌ ಕಾರ್ಖಾನೆಯಿಂದ ಯುವಜನೆಗೆ ಗರಿಷ್ಠ ಲಾಭವಾಗುವ ಕುರಿತು ಪ್ರಸ್ತಾಪಿಸುತ್ತಾ, ‘ಯುವಜನರಿಗೆ ಅಗಾಧ ಪ್ರಮಾಣದ ಉದ್ಯೋಗವನ್ನು ಈ ವಲಯ ಸೃಷ್ಟಿಸಲಿದೆ. ಭಾರತ ಈಗಾಗಲೇ ಮೊಬೈಲ್‌ ಫೋನ್‌ ತಯಾರಿಕೆ ಮತ್ತು ಸ್ಟಾರ್ಟಪ್‌ಗಳಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಮವಾಗಿ ಮೂರು ಮತ್ತು ಎರಡನೇ ಸ್ಥಾನದಲ್ಲಿದ್ದು, ಸೆಮಿಕಂಡಕ್ಟರ್‌ ಸೇರ್ಪಡೆಯಿಂದ ಮತ್ತಷ್ಟು ಪ್ರಗತಿ ಕಾಣಲಿದೆ’ ಎಂದು ತಿಳಿಸಿದರು.

ಮೂರು ಕಾರ್ಖಾನೆಗಳು

ಸೆಮಿಕಂಡಕ್ಟರ್‌ ಫ್ಯಾಬ್ರಿಕೇಷನ್‌ ಘಟಕ-ಧೋಲೇರಾ, ಔಟ್‌ಸೋರ್ಸ್ಡ್‌ ಸೆಮಿಕಂಡಕ್ಟರ್‌ ಅಸೆಂಬ್ಲಿ  ಟೆಸ್ಟ್‌ ಘಟಕ (ಒಎಸ್‌ಎಟಿ)- ಅಸ್ಸಾಂನ ಮೋರಿಗಾಂವ್‌ ಮತ್ತು ಗುಜರಾತ್‌ನ ಸಾನಂದ್‌
ದೇಶದಲ್ಲಿ ಮೂರು ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ಗೆ ಒಪ್ಪಿಗೆ ನೀಡಿದ ಕೇಂದ್ರ ಸಂಪುಟ!

 

click me!