ಪಾಕ್ ಧರ್ಮನಿಂದನೆ ಕಾನೂನು ಮೂಲಕ ಅಲ್ಪಸಂಖ್ಯಾತರ ದಮನ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Published : Sep 11, 2020, 05:39 PM IST
ಪಾಕ್ ಧರ್ಮನಿಂದನೆ ಕಾನೂನು ಮೂಲಕ ಅಲ್ಪಸಂಖ್ಯಾತರ ದಮನ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

ಸಾರಾಂಶ

ವಿಶ್ವ ಸಂಸ್ಥೆ ಮಹತ್ವದ ವೇದಿಕೆಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಗುಡುಗಿದೆ. ಹೆಜ್ಜೆ ಹೆಜ್ಜೆಗೂ ದ್ವೇಷ ಕಾರುವ ಪಾಕಿಸ್ತಾನದ ನರಿ ಬುದ್ದಿಯನ್ನು ವಿಶ್ವದ ಮುಂದೆ ಬೆತ್ತಲು ಮಾಡಿದೆ. ಪ್ರಮುಖವಾಗಿ ಧರ್ಮನಿಂದನೆ ಕಾನೂನಿನ ಆಡಿ ಅಲ್ಪಸಂಖ್ಯಾತರನ್ನು ಹೇಗೆ ದಮನ ಮಾಡಲಾಗುತ್ತಿದೆ ಅನ್ನೋ ಕುರಿತು ಭಾರತ ಮಾಹಿತಿ ನೀಡಿದೆ. 

ಜಿನೆವಾ(ಸೆ.11): ಜಾಗತಿಕ ಮಟ್ಟದಲ್ಲಿ ಸಿಕ್ಕ ಅವಕಾಶಗಳನ್ನು ಪಾಕಿಸ್ತಾನ, ಭಾರತ ವಿರುದ್ಧ ದ್ವೇಷ ಕಾರಲು ಬಳಸುತ್ತಿದೆ.  ಇದೀಗ ವಿಶ್ವಸಂಸ್ಥೆಯ  ಸಂಸ್ಕೃತಿ ಹಾಗೂ ಶಾಂತಿ ಕುರಿತ ಉನ್ನತ ಮಟ್ಟದ ವೇದಿಕೆಯಲ್ಲಿ ಪಾಕಿಸ್ತಾನದ ಕುತಂತ್ರಿ ಬುದ್ದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಭಾರತದ ವಿರುದ್ಧ ದ್ವೇಷ ಭಾಷಣ ಮಾಡಲು ವಿಶ್ವ ಸಂಸ್ಥೆಯ ವೇದಿಕೆ ಬಳಿಸಿಕೊಂಡ ಪಾಕಿಸ್ತಾನವನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಉಗ್ರ ಚಟುವಟಿಕೆ ವಿರುದ್ಧ ಕ್ರಮ ಅಗತ್ಯ; ಭಾರತ-ಅಮೆರಿಕ ಜಂಟಿಯಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ!.

ಭಾರತದ ಕುರಿತು ಬೊಟ್ಟು ಮಾಡುವಾಗ ನಿಮ್ಮ ದೇಶದಲ್ಲಿ ಏನಾಗುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತರ ಸದ್ದಡಗಿಸುವ ಪ್ರಯತ್ನಗಳ ಕುರಿತು ಆಲೋಚಿಸಿ. ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ದಮನ ಮಾಡಲು ಪಾಕಿಸ್ತಾನ ಧರ್ಮನಿಂದನೆ ಕಾನೂನು ಬಳಕೆ ಮಾಡುತ್ತಿದೆ ಎಂದು ಭಾರತ ವಿಶ್ವ ಸಂಸ್ಥೆಯಲ್ಲಿ ಹೇಳಿದೆ.

ಗಡಿ ಸಮಸ್ಯೆ ಲಾಭ ಪಡೆಯಲು ಮುಂದಾದರೆ ತಕ್ಕ ಶಾಸ್ತಿ; ಪಾಕ್‌ಗೆ ಬಿಪಿನ್ ರಾವತ್ ಎಚ್ಚರಿಕೆ!..

ಯುಎನ್‌ನ ಸಂಸ್ಕೃತಿ ಮತ್ತು ಶಾಂತಿ ಕುರಿತ ಉನ್ನತ ಮಟ್ಟದ ವೇದಿಕೆಯಲ್ಲಿ ಮಾತನಾಡಿದ ಭಾರತೀಯ ಕೌನ್ಸೆಲರ್ ಪೌಲೋಮಿ ತ್ರಿಪಾಠಿ, ಭಾರತದ ವಿರುದ್ಧ ದ್ವೇಷ ಭಾಷಣ ಮಾಡಲು ವಿಶ್ವ ಸಂಸ್ಥೆ ವೇದಿಕೆಯನ್ನು ಪಾಕಿಸ್ತಾನ ನಿಯೋಗ ಬಳಸಿಕಿಕೊಂಡಿದೆ. ಇದಕ್ಕೆ ಭಾರತ ಸಾಕ್ಷಿಯಾಗಿದೆ.  ಪಾಕಿಸ್ತಾನದಲ್ಲಿ ಹಾಗೂ ಗಡಿಯುದ್ಧಕ್ಕೂ ಹಿಂಸಾಚಾರದ ಸಂಸ್ಕೃತಿ ದಾರಿ ಹಿಡಿದಿದೆ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಮಹಿಳೆಯರು ಹಾಗೂ ಹುಡುಗಿಯರ ಮೇಲೆ ಅತ್ಯಾಚಾರವಾಗುತ್ತಿದೆ, ಅಪರಹರಣ ಮಾಡಲಾಗುತ್ತಿದೆ , ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಮೇಲೆ ಆರೋಪ ಮಾಡುವ ಮುನ್ನ ಪರಿಶೀಲಿಸುವುದು ಅಗತ್ಯ. ದ್ವೇಷ ಕಾರಲೇಬೇಕು ಎಂಬ ಹಠಕ್ಕೆ ಬಿದ್ದು ಮಾತನಾಡಬೇಡಿ ಎಂದು ಪೊಲೋಮಿ ತ್ರಿಪಾಠಿ ತಿರುಗೇಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೈದ್ರಾಬಾದ್‌ ರಸ್ತೆಗಳಿಗೆ ಟ್ರಂಪ್, ಗೂಗಲ್‌ ಹೆಸರು
ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!