ಚಿಕಾಗೋ ಭಾಷಣ, ವಿನೋಬಾ ಭಾವೆ ಜನ್ಮದಿನ, ಚೇತನಳಿಗೆ ಮೋದಿ ನಮನ

By Suvarna NewsFirst Published Sep 11, 2020, 5:28 PM IST
Highlights

ಮಹಾನ್ ಚೇತನಗಳನ್ನು ನೆನೆದ ಪ್ರಧಾನಿ/ ಸ್ವಾಮಿ ವಿವೇಕಾನಂದರು ಮತ್ತು ಆಚಾರ್ಯ ವಿನೋಬಾ ಭಾವೆ ಸ್ಮರಣೆ/ ಸೆ. 11 ಎರಡು ಕಾರಣಕ್ಕೆ ಮಹತ್ವದ್ದು/ ಐತಿಹಾಸಿಕ ಚಿಕಾಗೋ ಭಾಷಣ

ನವದೆಹಲಿ(ಸೆ.11) ಪ್ರಧಾನಿ ನರೇಂದ್ರ  ಮೋದಿ ಸ್ವಾಮಿ ವಿವೇಕಾನಂದರು ಮತ್ತು ಆಚಾರ್ಯ ವಿನೋಬಾ ಭಾವೆ ಅವರ ಸ್ಮರಣೆ ಮಾಡಿದ್ದಾರೆ.

ಸೆ. 11  ಭಾರತದ ಪಾಲಿಗೆ ಎರಡು ಮಹತ್ವದ ಸಂಗತಿಗಳನ್ನು ಒಳಗೊಂಡಿದೆ. ವಿನೋಬಾ ಭಾವೆ ಅವರ ಜಯಂತಿ, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣದ ದಿನ. ಇಬ್ಬರು ಮಹಾನ್ ಚೇತನಗಳಿಂದ ಮಾನವ ಸಮುದಾಯ ಕಲಿಯಬೇಕಾದದ್ದು ಬಹಳ ಇದೆ ಎಂದು ಹೇಳಿದ್ದಾರೆ.

ವಿವೇಕಾನಂದರು ಯೂತ್ ಐಕಾನ್ ಆಗಿದ್ದು ಹೇಗೆ?

ಭೂದಾನ ಚಳವಳಿ ಮೂಲಕ ಎಲ್ಲರ ಮನಸ್ಸಿನಲ್ಲೂ ನೆಲೆ ನಿಂತ ಭಾವೆ ಒಂದು ಕಡೆಯಾದರೆ 1893ರಲ್ಲಿ ಐತಿಹಾಸಿಕ ಭಾಷಣ ಮಾಡಿದ್ದ ವಿವೇಕಾನಂದರು ಇನ್ನೊಂದು ಕಡೆ. 

ಮಹಾತ್ಮ ಗಾಂಧಿ  ಭಾವೆ ಬಗ್ಗೆ ಒಂದು ಮಾತು ಹೇಳಿದ್ದರು. ಯಾವ ಪದಗಳಿಂದ ನಿಮ್ಮನ್ನು ವರ್ಣನೆ ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ನಿಮ್ಮ ಮೌಲ್ಯ ಮತ್ತು ಆದರ್ಶ ತುಲನೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಮಾಹಾತ್ಮ ಹೇಳಿದ್ದರು ಎಂಬುದನ್ನು ಮೋದಿ ಉಲ್ಲೇಖಿಸಿದ್ದಾರೆ.

ಭಾರತದ ಸಂಸ್ಕೃತಿ, ಪರಂಪರೆ, ನೀತಿ-ತತ್ವಗಳನ್ನು ಜಗತ್ತಿಗೆ ಸಾರಿದ್ದು ಸ್ವಾಮಿ ವಿವೇಕಾನಂದರ ಭಾಷಣ. ಹಾಗಾಗಿ ಈ ದಿನ ಎಲ್ಲರಿಗೂ ಮಹತ್ವದ್ದಾಗಿ ನಿಲ್ಲುತ್ತದೆ ಎಂದು ಬಣ್ಣಿಸಿದ್ದಾರೆ. 

click me!