ಕಳೆದ 24 ಗಂಟೆಯಲ್ಲಿ 60 ಸಾವಿರ ಕೊರೋನಾ ಕೇಸ್; 74 ದಿನಗಳ ಬಳಿಕ ಕನಿಷ್ಠ ಸಕ್ರೀಯ ಕೇಸ್!

By Suvarna NewsFirst Published Jun 19, 2021, 9:02 PM IST
Highlights
  • 12 ದಿನಗಳಿಂದ ಸತತವಾಗಿ 1 ಲಕ್ಷಕ್ಕಿಂತ ಕಡಿಮೆ  ಹೊಸ ಕೇಸ್
  • ಕಳೆದ 24 ಗಂಟೆಯಲ್ಲಿ 60,753 ಹೊಸ ಪ್ರಕರಣಗಳು ದಾಖಲು

ನವದೆಹಲಿ(ಜೂ.19):  ಭಾರತದಲ್ಲಿ ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದೆ.  ಹೀಗಾಗಿ ಬಹುತೇಕ ರಾಜ್ಯಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಕೂಡ ಆರಂಭಗೊಂಡಿದೆ.  ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಕುಸಿತ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 60,753 ಹೊಸ ಪ್ರಕರಣಗಳು ದಾಖಲಾಗಿದೆ.  ಕಳೆದ 12 ದಿನಗಳಿಂದ ಸತತವಾಗಿ 1 ಲಕ್ಷಕ್ಕಿಂತ ಕಡಿಮೆ  ಹೊಸ ಕೇಸ್ ಪತ್ತೆಯಾಗಿವೆ.  

ರಾಜ್ಯದಲ್ಲಿ ಮತ್ತಷ್ಟು ಲಾಕ್‌ಡೌನ್‌ ಸಡಿಲಿಕೆ, ಬಸ್ ಓಡಾಡುತ್ತಿವೆ, ಕಂಡೀಷನ್ಸ್ ಅಪ್ಲೈ

ಭಾರತವು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 7,60,019 ರಷ್ಟಿದೆ. ಕಳೆದ 74 ದಿನಗಳ ನಂತರ ಸಕ್ರಿಯ ಪ್ರಕರಣಗಳಲ್ಲಿ ಅತ್ಯಂತ ಕನಿಷ್ಠ ಮಟ್ಟವೆನಿಸಿದೆ. ಕಳೆದ 24 ಗಂಟೆಗಳಲ್ಲಿ 38,637  ಪ್ರಕರಣಗಳ ಕುಸಿತ ಕಂಡು ಬಂದಿದೆ.  ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು ಪ್ರಮಾಣ ಕೇವಲ 2.55% ರಷ್ಟು ಮಾತ್ರ.

ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವುದರಿಂದ, ಭಾರತದ ದೈನಂದಿನ ಚೇತರಿಕೆಗಳು ಈಗ ಸತತ 37 ದಿನಗಳಿಂದ ಹೊಸ ಪ್ರಕರಣಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.  ಕಳೆದ 24 ಗಂಟೆಗಳಲ್ಲಿ 97,743  ಚೇತರಿಕೆಗಳು ದಾಖಲಾಗಿವೆ. ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಸುಮಾರು 37 ಸಾವಿರ (36,990)  ಚೇತರಿಕೆಗಳು ವರದಿಯಾಗಿವೆ.

ಭಾರತಕ್ಕೆ ಕೊರೋನಾ 3ನೇ ಅಲೆ ಅಪಾಯವಿದೆಯಾ? AIIMS ನಿರ್ದೇಶಕರ ಉತ್ತರ!.

ಸಾಂಕ್ರಾಮಿಕದ ಆರಂಭದಿಂದ ಕೋವಿಡ್‌-19 ಸೋಂಕಿಗೆ ಒಳಗಾದವರ ಪೈಕಿ ಈಗಾಗಲೇ 2,86,78,390 ಜನರು ಚೇತರಿಸಿಕೊಂಡಿದ್ದಾರೆ  ಮತ್ತು ಕಳೆದ 24 ಗಂಟೆಗಳಲ್ಲಿ 97,743  ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 96.16% ಚೇತರಿಕೆ ದರವನ್ನು ಸೂಚಿಸುತ್ತದೆ ಮತ್ತು ಈ ಪ್ರಮಾಣದಲ್ಲಿ ನಿರಂತರ ಹೆಚ್ಚಳ ಪ್ರವೃತ್ತಿ ಕಂಡು ಬಂದಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,02,009 ಪರೀಕ್ಷೆಗಳನ್ನು ನಡೆಸಲಾಯಿತು. ಒಟ್ಟಾರೆಯಾಗಿ, ಭಾರತವು ಇಲ್ಲಿಯವರೆಗೆ 38.92 ಕೋಟಿಗೂ ಅಧಿಕ (38,92,07,637) ಪರೀಕ್ಷೆಗಳನ್ನು ನಡೆಸಿದೆ.

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸಿದ್ಧತೆ.

ಒಂದು ಕಡೆ ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಿದ್ದರೂ, ಸಾಪ್ತಾಹಿಕವಾಗಿ ಪ್ರಕರಣಗಳ ಪಾಸಿಟಿವಿಟಿಯಲ್ಲಿ(ಕಳೆದ  7 ದಿನಗಳ ಸರಾಸರಿ)  ನಿರಂತರ ಕುಸಿತ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 3.58%  ರಷ್ಟಿದ್ದರೆ,  ದೈನಂದಿನ ಪಾಸಿಟಿವಿಟಿ ದರವು ಇಂದು 2.98% ರಷ್ಟಿದೆ. ಇದು ಈಗ ಸತತ 12 ದಿನಗಳಿಂದ 5% ಗಿಂತಲೂ ಕಡಿಮೆ ಮಟ್ಟದಲ್ಲೇ ಉಳಿದಿದೆ.

ಭಾರತದ ಒಟ್ಟಾರೆ ಲಸಿಕೆ ವ್ಯಾಪ್ತಿ ಇಂದು 27.23 ಕೋಟಿ ಮೀರಿದೆ. ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ 37,48,147 ಸೆಷನ್‌ಗಳ ಮೂಲಕ ಒಟ್ಟು 27,23,88,783 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 33,00,085 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.  

click me!