UP ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ PM ಮೋದಿ ಆಪ್ತ, ಮಾಜಿ IAS ಅಧಿಕಾರಿ ಆಯ್ಕೆ!

By Suvarna NewsFirst Published Jun 19, 2021, 5:39 PM IST
Highlights
  • ಬಿಜೆಪಿ ಉಪಾಧ್ಯಕ್ಷನಾಗಿ ಎಕೆ ಶರ್ಮಾ ಅಧೀಕೃತ ಆಯ್ಕೆ 
  • ಪ್ರಧಾನಿ ಮೋದಿ ಆಪ್ತ, ಮಾಜಿ ಐಎಎಸ್ ಅಧಿಕಾರಿಗೆ ಉಪಾಧ್ಯಕ್ಷ ಸ್ಥಾನ

ನವದೆಹಲಿ(ಜೂ.18): ಉತ್ತರ ಪ್ರದೇಶ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ, ಬಿಜೆಪಿ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಹೆಸರುಗಳು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಪ್ರಧಾನಿ ಮೋದಿ ಆಪ್ತ, ಮಾಜಿ ಐಎಎಸ್ ಅಧಿಕಾರಿ ಎಕೆ ಶರ್ಮಾ, ಉತ್ತರ ಪ್ರದೇಶ ಬಿಜೆಪಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಕೋರ್ ಕಮಿಟಿ ಸಭೆ; ಅರುಣ್ ಸಿಂಗ್ ಸಮ್ಮುಖದಲ್ಲಿ BSY ಕೆಂಡಾಮಂಡಲ!

ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ನಂಬಿಕಸ್ಥ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಎಕೆ ಶರ್ಮಾ, ಕಳೆದ ಜನವರಿಯಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಉತ್ತರ ಪ್ರದೇಶ ಸಂಪುಟ ವಿಸ್ತರಣೆಯಲ್ಲಿ ಎಕೆ ಶರ್ಮಾಗೆ ಸ್ಥಾನ ನೀಡುವ ಕುರಿತು ಭಾರಿ ಚರ್ಚೆ ನಡೆದಿತ್ತು. ಇದೀಗ ಎಕೆ ಶರ್ಮಾ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಇಂದು(ಜೂ.19) ಎಕೆ ಶರ್ಮಾ ಆಯ್ಕೆಯನ್ನು ಖಚಿತಪಡಿಸಿದರು. ಕಳೆದ ವರ್ಷ ಗುಜರಾತ್ ಕೇಡರ್ ಐಎಎಸ್‌ ಅಧಿಕಾರಿ ಶರ್ಮಾ  ನಿವೃತ್ತಿಯಾಗಿದ್ದರು.  ಬಳಿಕ ಉತ್ತರ ಪ್ರದೇಶ ಬಿಜೆಪಿ ಸೇರಿಕೊಂಡಿದ್ದರು.  ಉತ್ತರ ಪ್ರದೇಶದ ಮೌ ಜಿಲ್ಲೆಯ 1988 ರ ಬ್ಯಾಚ್ ಅಧಿಕಾರಿಯಾಗಿದ್ದ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಆಪ್ತರಾಗಿದ್ದರು. 

ಕಾಂಗ್ರೆಸ್ ತೊರೆದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ರುಪ್‌ಜ್ಯೋತಿ BJP ಸೇರಲು ರೆಡಿ!

ಇದರ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಸ್ ಸಂತೋಷ್ ಜೂನ್ 21 ಹಾಗೂ 22 ರಂದು ಲಖನೌಗೆ ಭೇಟಿ ನೀಡಲಿದ್ದಾರೆ. ಈ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಹೇಳಿದೆ.  ಬಿಎಸ್ ಸಂತೋಷ್ ಪ್ರಮುಖವಾಗಿ 2022 ರ ಚುನಾವಣೆಯ ಕಾರ್ಯತಂತ್ರವನ್ನು ಸರ್ಕಾರದ ಮಂತ್ರಿಗಳು ಮತ್ತು ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಯುಪಿ ಬಿಜೆಪಿ ಹೇಳಿದೆ.

click me!