ಭಾರತಕ್ಕೆ ಕೊರೋನಾ 3ನೇ ಅಲೆ ಅಪಾಯವಿದೆಯಾ? AIIMS ನಿರ್ದೇಶಕರ ಉತ್ತರ!

By Suvarna NewsFirst Published Jun 19, 2021, 7:53 PM IST
Highlights
  • ಭಾರತಕ್ಕೆ 3ನೇ ಅಲೆ ಕುರಿತು ಎಚ್ಚರಿಕೆ ನೀಡಿದ ಏಮ್ಸ್ ನಿರ್ದೇಶಕ
  • 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಎಚ್ಚರಿಕೆ
  • ಮಾರ್ಗಸೂಚಿ ಪಾಲಿಸದಿದ್ದರೆ 3ನೇ ಅಲೆ ನಿಯಂತ್ರಣ ಅಸಾಧ್ಯ

ನವದೆಹಲಿ(ಜೂ.19): ಭಾರತದಲ್ಲಿ ಕೊರೋನಾ ಸಂಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. 2ನೇ ಅಲೆ ನಿಯಂತ್ರಣ ಬರುತ್ತಿದೆ ಅನ್ನುವಷ್ಟರಲ್ಲೇ 3ನೇ ಅಲೆ ಮಾತುಗಳು ಕೇಳಿ ಬರುತ್ತಿದೆ. ಇದೀಗ ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ 3ನೇ ಅಲೆ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ 7ನೇ ಡೆಲ್ಟಾ​ ಪ್ಲ​ಸ್‌ ವೈರಸ್‌ ಕೇಸ್‌ ಪತ್ತೆ!...

ಕೊರೋನಾ ವೈರಸ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿರ್ಬಂಧಗಳು, ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಸಭೆ ಸಮಾರಂಭದ ಮೇಲಿನ ನಿರ್ಭಂಧ ಮುಂದುವರಿಸಬೇಕು. ಸಣ್ಣ ಎಡವಟ್ಟಿನಿಂದ 3ನೇ ಅಲೆ ಹರಡಿದರೆ, ನಿಯಂತ್ರಣ ಅಸಾಧ್ಯವಾಗಲಿದೆ ಎಂದು ಗುಲೇರಿಯಾ ಎಚ್ಚರಿಸಿದ್ದಾರೆ.

ಕೊರೋನಾ ಸೋಂಕು ಹಾಟ್‌ಸ್ಪಾಟ್ ಕೇಂದ್ರಗಳನ್ನು ಗುರುತಿಸಿ ಲಾಕ್‌ಡೌನ್ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ನಾಗರೀಕರಾಗಿರಲಿ, ಸರ್ಕಾರವಾಗಿರಲಿ ಮುಂಜಾಗ್ರತೆ ಅಗತ್ಯ ಎಂದು ಗುಲೇರಿಯಾ ಹೇಳಿದ್ದಾರೆ.

3ನೇ ಅಲೆ ಎದುರಿಸುವ ಸಿದ್ಧತೆ: 1 ಲಕ್ಷ ಕೋವಿಡ್‌ ಯೋಧರ ಕೌಶಲ್ಯಾಭಿವೃದ್ಧಿ!...

3ನೇ ಅಲೆ ಮಕ್ಕಳಿಗೆ ತೀವ್ರ ಅಪಾಯ ತಂದೊಡ್ಡಲಿದೆ ಅನ್ನೋ ವರದಿಗೆ ಯಾವುದೇ ಪುರಾವೆ ಇಲ್ಲ ಎಂದು ಗುಲೇರಿಯಾ ಹೇಳಿದ್ದಾರೆ. ಮೊದಲ ಅಲೆ ಬಳಿಕ ವಹಿಸಿದ ನಿರ್ಲಕ್ಷ್ಯದಿಂದ 2ನೇ ಅಲೆ ಭೀಕರವಾಗಿ ಕಾಡಿದೆ. ಇದೀಗ ಮತ್ತೆ ಅದೆ ಪುನಾರವರ್ತಿಸಿದರೆ 3ನೇ ಅಲೆ ಇನ್ನೂ ಭೀಕರವಾಗಿರಲಿದೆ ಎಂದು ಗುಲೇರಿಯಾ ಹೇಳಿದ್ದಾರೆ.

click me!