
ನವದೆಹಲಿ(ಜೂ.15): 2030ರ ಒಳಗಾಗಿ ಫಲವತ್ತತೆ ಕಳೆದುಕೊಂಡಿರುವ 2.6 ಕೋಟಿ ಹೆಕ್ಟೇರ್ ಬಂಜರು ಪ್ರದೇಶವನ್ನು ಪುನಃ ಫಲವತ್ತತೆಯ ಭೂಮಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಭಾರತ ಕಾರ್ಯ ನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಜೊತೆಗೆ ಕಳೆದ 10 ವರ್ಷಗಳಲ್ಲಿ 30 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ವೃದ್ಧಿಸಲಾಗಿದೆ ಎಂದಿದ್ದಾರೆ.
12 ವರ್ಷಗಳ ಬಳಿಕ ಹೊಸ ಸರ್ಕಾರ; ಮೋದಿ ಜೊತೆ ಕೆಲಸ ಮಾಡಲು ಉತ್ಸುಕ ಎಂದ ಇಸ್ರೇಲ್ ನೂತನ ಪ್ರಧಾನಿ!
ಮರುಭೂಮಿ, ಭೂಮಿಯ ಉತ್ಕೃಷ್ಟತೆಯ ವಿನಾಶ ಮತ್ತು ಬರದ ಕುರಿತಾಗಿ ವಿಶ್ವಸಂಸ್ಥೆಯ ಉನ್ನತ ಹಂತದ ಸಭೆಯನ್ನುದ್ದೇಶಿಸಿ ಸೋಮವಾರ ಮಾತನಾಡಿದ ಮೋದಿ ಅವರು, ಅಭಿವೃದ್ಧಿಪಥದಲ್ಲಿರುವ ರಾಷ್ಟ್ರಗಳಿಗೆ ಭೂಮಿಯ ಫಲವತ್ತತೆ ಪುನಃಸ್ಥಾಪಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ನೆರವು ನೀಡಲಾಗುತ್ತದೆ ಎಂದರು.
ಮೋದಿ, ಶಾ ಕೋಟೆಗೆ ಕೇಜ್ರೀ ಲಗ್ಗೆ: ಮಹತ್ವದ ಘೋಷಣೆ ಮಾಡಿದ AAP!
ವಿಶ್ವದಲ್ಲಿ ಇಂದು ಒಟ್ಟಾರೆ 3ನೇ ಎರಡರಷ್ಟುಭೂಮಿ ಫಲವತ್ತತೆ ಕುಂದಿದೆ. ಹೀಗಾಗಿ ಭೂಮಿಯ ಸವಕಳಿಯನ್ನು ನಿಯಂತ್ರಿಸದೇ ಹೋದಲ್ಲಿ ನಮ್ಮ ಸಮಾಜಗಳು, ಆರ್ಥಿಕತೆ, ಆಹಾರ ಭದ್ರತೆ, ಆರೋಗ್ಯ, ಸುರಕ್ಷತೆ ಮತ್ತು ಜೀವನದ ಉತ್ಕೃಷ್ಟತೆಯನ್ನು ನಾಶಪಡಿಸಲಿದೆ. ಹೀಗಾಗಿ ಭೂಮಿ ಮತ್ತು ಅದರ ಸಂಪನ್ಮೂಲಗಳ ಮೇಲಿನ ಒತ್ತಡ ಮತ್ತು ಅವಲನಂಬನೆ ತಗ್ಗಿಸಬೇಕು. ಇದಕ್ಕಾಗಿ ನಾವು ಹೆಚ್ಚಿನ ಶ್ರಮ ಪಡಬೇಕಿದೆ. ನಾವೆಲ್ಲಾ ಒಂದಾದರೆ ಭೂಮಿಯ ಉತ್ಕೃಷ್ಟತೆಯನ್ನು ಕಾಪಾಡಬಹುದು ಎಂದು ಅವರು ಪ್ರತಿಪಾದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ