ಚೀನಾ ಸೆಡ್ಡು ಹೊಡೆಯಲು ಮಯನ್ಮಾರ್ ಜೊತೆ ತೈಲ ಸಂಸ್ಕರಣಗಾರ ಒಪ್ಪಂದ!

Published : Oct 06, 2020, 06:37 PM IST
ಚೀನಾ ಸೆಡ್ಡು ಹೊಡೆಯಲು ಮಯನ್ಮಾರ್ ಜೊತೆ ತೈಲ ಸಂಸ್ಕರಣಗಾರ ಒಪ್ಪಂದ!

ಸಾರಾಂಶ

ಪದೇ ಪದೇ ಕಿರಿಕ್ ಮಾಡುತ್ತಿರುವ ಚೀನಾಗೆ ಹಂತ ಹಂತವಾಗಿ ಭಾರತ ತಿರುಗೇಟು ನೀಡುತ್ತಿದೆ. ಚೀನಾ ಆ್ಯಪ್ ಬ್ಯಾನ್ ಸೇರಿದಂತೆ ಹಲವು ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಇದೀಗ ತೈಲ ಸಂಸ್ಕರಣಗಾರದಲ್ಲೂ ಚೀನಾಗೆ ಹೊಡೆತ ನೀಡಿದೆ. ಮಯನ್ಮಾರ್ ಜೊತೆ ಒಪ್ಪಂದ ಮಾಡಿಕೊಳ್ಳಲು ಪ್ರಸ್ತಾಪ ಮುಂದಿಟ್ಟಿದೆ.

ಮಯನ್ಮಾರ್(ಅ.06): ಭಾರತ ಹೊರತು ಪಡಿಸಿ ಇತರ ನೆರೆಯ ರಾಷ್ಟ್ರಗಳ ಜೊತೆ ಚೀನಾ ಹಲವು ಮಹತ್ವದ ಒಪ್ಪಂದ ಮಾಡಿಕೊಳ್ಳುತ್ತಿದೆ. ಇದರಲ್ಲಿ ಪ್ರಮುಖವಾಗಿ ಎನರ್ಜಿ ಸೆಕ್ಟರ್‌ನಲ್ಲಿ ಮಯನ್ಮಾರ್ ಜೊತೆ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಲ್ಲಿ ತೈಲ ಶೇಖರಣೆ ಹಾಗೂ ವಿತರಣೆ ಕೂಡ ಪ್ರಮುಖವಾಗಿದೆ. ಇದೀಗ ಚೀನಾಗೆ ಸೆಡ್ಡು ಹೊಡೆಯಲು ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ.

ದೇಶಕ್ಕೆ ಸಹಸ್ರಾರು ಕೋಟಿ ಉಳಿಸಿದ ಮಂಗಳೂರು!..

ಮಯನ್ಮಾನ್ ಪ್ರವಾಸದಲ್ಲಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲ ಹಾಗೂ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ ನರವಾನೆ ತೈಲ ಸಂಸ್ಕರಣಗಾರ ಪ್ರಸ್ತಾಪ ಮುಂದಿಟ್ಟಿದ್ದಾರೆ. ಮಯನ್ಮಾರ್‌ನ ಯಂಗಾನ್‌ನ ತಾನ್‌ಲಿನ್ ಪ್ರಾಂತ್ಯದಲ್ಲಿ ಬರೋಬ್ಬರಿ 6 ಬಿಲಿಯನ್ ಡಾಲರ್ ಮೊತ್ತದಲ್ಲಿ ತೈಲ ಸಂಸ್ಕರಣಗಾರ ನಿರ್ಮಿಸಲು ಭಾರತ ಮುಂದಾಗಿದೆ. 

ಭಾರತದ ತೈಲ ಸಂಸ್ಕರಣಾಗಾರದಿಂದ ಉಭಯದೇಶಗಳಲ್ಲಿ ಅತ್ಯಂತ ಲಾಭವಾಗಲಿದೆ. ಇತ್ತ ಚೀನಾ ಶೇಕಡಾ 70 ವಿದೇಶಿ ಬಂಡವಾಳ ಹೂಡಿಯನ್ನುಎನರ್ಜಿ ಸೆಕ್ಟರ್‌ನಲ್ಲಿ ಮಾಡುತ್ತಿದೆ. ಇದೀಗ ಭಾರತ ಕೂಡ ಆಯಿಲ್ ರಿಫಿನರಿ ಯೋಜನೆ ಕೈಗೆತ್ತಿಕೊಂಡಿದ್ದು, ಚೀನಾಗೆ ಸೆಡ್ಡು ಹೊಡೆಯಲು ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್