ಚೀನಾ ನಮ್ಮ ಮೇಲೆ ನುಗ್ಗಿಬರಲು ಅಸಲಿ ಕಾರಣ ಹೇಳಿದ ರಾಹುಲ್!

By Suvarna News  |  First Published Oct 6, 2020, 4:18 PM IST

ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ಮೇಲೆ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ /ಮೋದಿ ತಮ್ಮ ಇಮೇಜ್ ಕಾಪಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ/ ಚೀನಾ ಅತಿಕ್ರಮಣ ಮಾಡಿಕೊಂಡ ಪ್ರದೇಶ ವಾಪಸ್ ಪಡೆಯುವ ಯಾವ ಕೆಲಸವನ್ನು ಮಾಡಿಲ್ಲ


ನವದೆಹಲಿ(ಅ. 06)   ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ  ಕೇಂದ್ರ ಸರ್ಕಾರದ ವಿರುದ್ಧ , ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಳಿ ಮಾಡಿದ್ದಾರೆ . ಪ್ರಧಾನಿ ಮೋದಿ  ದೇಶ ಕಳೆದುಕೊಂಡ ಭೂಪ್ರದೇಶವನ್ನು ವಾಪಸ್ ಪಡೆದುಕೊಳ್ಳಲು ಯತ್ನ ಮಾಡುವುದಿಲ್ಲ ಎಂಬುದನ್ನು ಅರಿತುಕೊಂಡೆ ಚೀನಾ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್‌ನ ಪಟಿಯಾಲದಲ್ಲಿ ಕೃಷಿ ವಿರೋಧಿ  ಕಾಯಿದೆ ನೀತಿ ವಿರೋಧಿಸಿ ಮಾತನಾಡಿದ ಗಾಂಧಿ, ಚೀನಾ ನಮ್ಮ  ದೇಶದ 1,200 ಚದರ ಕಿ.ಮೀ ಭೂಮಿಯನ್ನು ಪಡೆದುಕೊಂಡಿದ್ದು ಹೇಗೇ?  ಮೋದಿ ತಮ್ಮ ಇಮೇಜ್ ಕಾಪಾಡಿಕೊಳ್ಳಲು ಮಾತ್ರ ಯತ್ನ ಮಾಡುತ್ತಾರೆ ಎಂಬುದು ಚೀನಾಕ್ಕೆ ಗೊತ್ತಿದ್ದೆ ಇಂಥ ಕೆಲಸ ಮಾಡಿತು ಎಂದಿದ್ದಾರೆ. ಯಾವುದೆ ಅಧಿಕಾರಿಯನ್ನು ಕೇಳಿ ನೋಡಿ ನಿಮಗೆ ಈ ಉತ್ತರವೇ ಸಿಗುತ್ತದೆ ಎಂದಿದ್ದಾರೆ.

Latest Videos

undefined

ಹತ್ರಾಸ್ ಸಂತ್ರಸ್ತ ಕುಟುಂಬ ಭೇಟಿ ಮಾಡಲು  ಬಂದಿದ್ದ ರಾಹುಲ್‌ ಗೆ ಸಂಕಟ

ಮಾಧ್ಯಮಗಳು ದೇಶ ಭೂ ಭಾಗ ಕಳೆದುಕೊಂಡ ಬಗ್ಗೆ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಬೇಕು. ಮುಕ್ತವಾಗಿ ಉತ್ತರಿಸುವಂತೆ ಸವಾಲು ಹಾಕಬೇಕೆಂದು ಅವರು ಮಾಧ್ಯಮಗಳನ್ನು ಒತ್ತಾಯಿಸಿದರು. ಚೀನಾ ಮತ್ತು ಮಾಧ್ಯಮಗಳನ್ನು ಎದುರಿಸಲು ಪ್ರಧಾನಿ ಮೋದಿ ಭಯಭೀತರಾಗಿದ್ದಾರೆ ಎಂದಿದ್ದಾರೆ.

ಅಕ್ಟೋಬರ್ 3 ರಂದು ಹಿಮಾಚಲ ಪ್ರದೇಶದ ಅಟಲ್ ಸುರಂಗದ ಉದ್ಘಾಟನೆಯ ಸಂದರ್ಭದಲ್ಲಿ ಗಾಂಧಿ ಪಿಎಂ ಮೋದಿ ತೆಗೆಸಿಕೊಂಡ ಪೋಟೋಗಳ ಬಗ್ಗೆಯೂ ರಾಹುಲ್ ಮಾತನಾಡಿದರು. 

ಭಾರತ-ಚೀನಾ ಗಡಿ ಘರ್ಷಣೆ ಕುರಿತು ಪ್ರಸ್ತಾಪಿಸಿದರು. ಲಡಾಖ್ ಗಡಿಯಲ್ಲಿ ಚೀನಾ  ಪದೆ ಪದೆ ಆಕ್ರಮಣ ಮಾಡುತ್ತಿದೆ. ಪ್ರಧಾನಿ ಮೋದಿ ತಮ್ಮ  ಇಮೇಜ್ ಹೆಚ್ಚಿಸಿಕೊಳ್ಳುವಲ್ಲಿ  ನಿರತರಾಗಿದ್ದಾರೆ ಎಂಬುದು ಗೊತ್ತಿದ್ದೆ ಈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ನಮ್ಮ ಸೈನಿಕರು ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ವಿದೇಶಾಂಗ ನೀತಿ ಹಳ್ಳ ಹಿಡಿದಿರುವುದು ಎಂದು ಆರೋಪಿಸಿದರು.

ಪ್ರಧಾನಿ ಮೋದಿ ನೀತಿಗಳ ಕಾರಣಕ್ಕೆ ಉದ್ಯಮಿಗಳು ದೇಶ ಆಳುವ ಸ್ಥಿತಿ ನಿರ್ಮಾಣವಾಗಿದೆ.  ಅಂದರೆ ಮೋದಿ ಸ್ನೇಹಿತ ಉದ್ಯಮಿಗಳು  ಸರ್ಕಾರವನ್ನು ನಿಯಂತ್ರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

click me!