ಯುದ್ಧದಂತ ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲಿರ್ಲಿ ಈ ಗ್ಯಾಜೆಟ್

Published : May 09, 2025, 12:36 PM ISTUpdated : May 09, 2025, 12:39 PM IST
ಯುದ್ಧದಂತ ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲಿರ್ಲಿ ಈ ಗ್ಯಾಜೆಟ್

ಸಾರಾಂಶ

ಭಾರತ-ಪಾಕ್ ಉದ್ವಿಗ್ನ ಪರಿಸ್ಥಿತಿಯಲ್ಲಿ ನಾಗರಿಕರ ಜಾಗರೂಕತೆ ಅಗತ್ಯ. ಸರ್ಕಾರ, ಸೇನೆಗೆ ಸಹಕರಿಸಿ, ನಿಯಮ ಪಾಲಿಸಿ. ತುರ್ತು ಪರಿಸ್ಥಿತಿಗೆ ಎಲ್‌ಇಡಿ ದೀಪ, ಸೋಲಾರ್ ಪವರ್ ಬ್ಯಾಂಕ್, ಬ್ಯಾಟರಿ ರೇಡಿಯೋ, ಫೋನ್ ಚಾರ್ಜರ್, ನೀರು ಶುದ್ಧೀಕಾರಕ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಆಹಾರ ಸಂಗ್ರಹಿಸಿ. ಅಧಿಕೃತ ಸುದ್ದಿಗಳನ್ನು ಮಾತ್ರ ನಂಬಿ, ಶಾಂತಚಿತ್ತರಾಗಿರಿ.

ಭಾರತ (India) – ಪಾಕ್ ಮಧ್ಯೆ ಪರಿಸ್ಥಿತಿ ಉಲ್ಬಣಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ನಾಗರಿಕನು ಜಾಗರೂಕರಾಗಿರುವುದು ಬಹಳ ಮುಖ್ಯ. ಪಾಕಿಸ್ತಾನ, ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸ್ತಿದೆ.  ಭಾರತೀಯರನ್ನು ರಕ್ಷಿಸೋದು ಸರ್ಕಾರ (Government), ಸೇನೆಯ ಮೊದಲ ಗುರಿಯಾಗಿದೆ. ಭಾರತದಲ್ಲಿರುವ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ, ಸುರಕ್ಷಿತವಾಗಿರ್ತೇವೆ. ಆದ್ರೆ ಈ ಸಂದರ್ಭದಲ್ಲಿ ಸರ್ಕಾರಕ್ಕೆ ತಲೆನೋವಾಗುವ ಕೆಲಸ ಮಾಡುವ ಬದಲು ನಾಗರೀಕರು ಸರ್ಕಾರ, ಸೇನೆಗೆ ಸಹಕರಿಸುವುದು ಮುಖ್ಯ. ಸರ್ಕಾರ ಅರ್ಲಟ್ ಮಾಡಿರುವ ಜಾಗಗಳಿಗೆ ತೆರಳದೆ, ಸರ್ಕಾರ ಹೇಳಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾವು ಜವಾಬ್ದಾರಿಯಿಂದ ವರ್ತಿಸಬೇಕು. ಆಪತ್ಕಾಲದಲ್ಲಿ ಅಗತ್ಯವಿರುವ ಕೆಲ ಗ್ಯಾಜೆಟ್ ನಿಮ್ಮ ಮನೆಯಲ್ಲಿ ಇರುವಂತೆ ನೋಡ್ಕೊಳ್ಳಿ. ನಾವಿಂದು ಯುದ್ಧ ಇರಲಿ ಇಲ್ಲ ತುರ್ತು ಪರಿಸ್ಥಿತಿ ಇರಲಿ ಮನೆಯಲ್ಲಿ ಯಾವೆಲ್ಲ ಗ್ಯಾಜೆಟ್ ಇರ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ. 

ಮನೆಯಲ್ಲಿರಲಿ ಈ ಗ್ಯಾಜೆಟ್ (Gadget) : 

ಎಲ್ ಇಡಿ ಎಮರ್ಜೆನ್ಸಿ ಲೈಟ್ : ಯುದ್ಧದಂತ ಸಮಯದಲ್ಲಿ ಬ್ಲಾಕ್ ಔಟ್ ಜಾರಿಗೆ ಬರುತ್ತದೆ. ಈ ಸಮಯದಲ್ಲಿ ನಿಮ್ಮ ಬಳಿ ಎಲ್ ಇಡಿ ಎಮರ್ಜೆನ್ಸಿ ಲೈಟ್ ಇದ್ರೆ ಸಮಸ್ಯೆಯಾಗೋದಿಲ್ಲ. ಎಲ್ ಇಡಿ ಲೈಟ್ ಹಾಗೂ ಚಾರ್ಜ್ ಮಾಡಬಲ್ಲ ಲೈಟ್ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. 200 ರೂಪಾಯಿ ಬೆಲೆಗೆ ನೀವು ಇದನ್ನು ಖರೀದಿ ಮಾಡ್ಬಹುದು. 

ಸೋಲಾರ್ ಪವರ್ ಬ್ಯಾಂಕ್ : ಆಪತ್ಕಾಲ ಅಥವಾ ಯುದ್ಧದ ಸಮಯದಲ್ಲಿ ಸೋಲಾರ್ ಪವರ್ ಬ್ಯಾಂಕ್ ಇದ್ರೆ ಉತ್ತಮ. ಯಾವುದೇ ಸಮಸ್ಯೆ ಇಲ್ಲದೆ ನೀವು ನಿಮ್ಮ ಮೊಬೈಲ್ ಚಾರ್ಜ್ ಮಾಡ್ಬಹುದು. 

ಬ್ಯಾಟರಿಯಿಂದ ನಡೆಯುವ ರೆಡಿಯೋ : ಆಪತ್ಕಾಲದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಯೋದು ಮುಖ್ಯ. ಮೊಬೈಲ್ ಚಾರ್ಜ್ ಸಂಪೂರ್ಣ ಖಾಲಿಯಾಗಿದ್ದು, ಯಾವುದೇ ವಿಷ್ಯ ನಿಮಗೆ ತಿಳಿಯುತ್ತಿಲ್ಲ ಎಂದಾಗ ನೀವು ಈ ರೆಡಿಯೋ ಬಳಕೆ ಮಾಡಬಹುದು. 

ಹ್ಯಾಂಡ್ ಕ್ರ್ಯಾಂಕ್ ಫೋನ್ ಚಾರ್ಜರ್ : ಮೊಬೈಲ್ ಗಳನ್ನು ಚಾರ್ಜ್ ಮಾಡಲು ನೀವು ಹ್ಯಾಂಡ್ ಕ್ರಾಂಕ್ ಫೋನ್ ಚಾರ್ಜರ್ ಬಳಕೆ ಮಾಡಬಹುದು. ಆನ್ಲೈನ್ ನಲ್ಲಿ ಇದಕ್ಕೆ ಸಾಕಷ್ಟು ಆಯ್ಕೆ ಇದೆ. ಒಂದು ಸಾವಿರ ರೂಪಾಯಿಗೆ ಇವು ಲಭ್ಯವಿದೆ. ಇದನ್ನು ಬಳಸುವುದು ಕೂಡ ಬಹಳ ಸುಲಭ. 

ಪೋರ್ಟೆಬಲ್ ವಾಟರ್ ಫಿಲ್ಟರ್ : ಕರೆಂಟ್ ಇಲ್ಲದೆ ಪೋರ್ಟೆಬಲ್ ವಾಟರ್ ಫಿಲ್ಟರ್ ಕೆಲಸ ಮಾಡುತ್ತದೆ. ಇದನ್ನು ಕೂಡ ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು. 

ಈ ಬಗ್ಗೆ ಗಮನ ಇರಲಿ :  
• ಗ್ಯಾಜೆಟ್ ಹೊರತುಪಡಿಸಿ ನೀವು ಮನೆಯಲ್ಲಿ ಕೆಲವೊಂದು ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಮನೆಯಲ್ಲಿ ಕನಿಷ್ಠ ಎರಡು ಪ್ರಥಮ ಚಿಕಿತ್ಸಾ ಕಿಟ್ಗಳು,  ಮೇಣದಬತ್ತಿಗಳು, ನೀರು ಮತ್ತು ಕೆಲವು ದಿನಗಳವರೆಗೆ ಹೊಟ್ಟೆ ತುಂಬಿಸಬಲ್ಲ, ಒಣ ಹಣ್ಣು, ಜ್ಯೂಸ್, ಹಣ್ಣುಗಳನ್ನು ಇಟ್ಟುಕೊಳ್ಳಿ. 
• ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಎಲ್ಲ ವಿಷ್ಯಗಳನ್ನು ನಂಬುವುದು ಹಾಗೆ ಅದನ್ನು ಬೇರೆಯವರ ಜೊತೆ ಹಂಚಿಕೊಳ್ಳುವ ಮೂರ್ಖತನ ಮಾಡಬೇಡಿ. ಅಧಿಕೃತ ಮೂಲದಿಂದ ಬಂದ ಸುದ್ದಿಯನ್ನು ಮಾತ್ರ ಹಂಚಿಕೊಳ್ಳಿ. 
• ಈ ಸಮಯದಲ್ಲಿ ದೇಶಕ್ಕೆ ಪ್ರೀತಿ, ಗೌರವ ಮತ್ತು ಬೆಂಬಲ ತೋರಿಸುವುದು ಮುಖ್ಯ. ಆದ್ರೆ ಮಾತುಗಳ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ. ನಿಮ್ಮ ಮಾತುಗಳು ಯಾವುದೇ ಸಮುದಾಯ ಅಥವಾ ವ್ಯಕ್ತಿಯ ಭಾವನೆಗಳಿಗೆ ನೋವುಂಟು ಮಾಡದಂತೆ ಕಾಳಜಿ ವಹಿಸಬೇಕಾಗುತ್ತದೆ. 
• ಈ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಡುವುದು ಬಹಳ ಮುಖ್ಯ. ನಿಮ್ಮ ಮನಸ್ಸು ಹಾಳು ಮಾಡುವಂತ ಸುದ್ದಿಯಿಂದ ದೂರವಿರಿ. ಮನಸ್ಸಿನ ಶಾಂತಿಗೆ ವ್ಯಾಯಾಮ, ಯೋಗ, ಧ್ಯಾನದ ಮೊರೆ ಹೋಗಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..