ಪಾಕ್‌ಗೆ ಭಾರತ ಕೊಟ್ಟ ತಿರುಗೇಟಿಗೆ ಶಾಕ್ ಆಗಿತ್ತು ಅಮೆರಿಕಾ? ಮಧ್ಯಸ್ಥಿಕೆಗೆ ಬಂದ ಹಿಂದಿನ ಕಾರಣ ಇಲ್ಲಿದೆ

Published : May 11, 2025, 08:25 PM IST
ಪಾಕ್‌ಗೆ ಭಾರತ ಕೊಟ್ಟ ತಿರುಗೇಟಿಗೆ ಶಾಕ್ ಆಗಿತ್ತು ಅಮೆರಿಕಾ? ಮಧ್ಯಸ್ಥಿಕೆಗೆ ಬಂದ ಹಿಂದಿನ ಕಾರಣ ಇಲ್ಲಿದೆ

ಸಾರಾಂಶ

ಭಾರತವು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ನಂತರ, ಅಮೆರಿಕ ತಕ್ಷಣವೇ ಮಧ್ಯಸ್ಥಿಕೆ ವಹಿಸಲು ಪ್ರಾರಂಭಿಸಿತು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಮಿಲಿಟರಿ ಮುಖಾಮುಖಿಯಲ್ಲಿ ಅತ್ಯಂತ ನಿರ್ಣಾಯಕ ತಿರುವು ಬಂದಿದ್ದು ಭಾರತವು ರಾವಲ್ಪಿಂಡಿ ಮೂಲದ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದಾಗ. ಈ ದಾಳಿ ಎಷ್ಟು ನಾಟಕೀಯವಾಗಿತ್ತೆಂದರೆ, ಇಲ್ಲಿಯವರೆಗೆ ಪರಿಸ್ಥಿತಿಯಿಂದ ದೂರ ಉಳಿದಿದ್ದ ಅಮೆರಿಕ, ತಕ್ಷಣವೇ ಮಧ್ಯಸ್ಥಿಕೆ ಪ್ರಯತ್ನಗಳನ್ನು ಪ್ರಾರಂಭಿಸಬೇಕಾಯಿತು. ಅಮೆರಿಕದ ಈ ನಡೆಯ ಹಿಂದಿನ ಕಾರಣ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. 

ವರದಿಗಳ ಪ್ರಕಾರ, ಮೂರು ವಾಯುನೆಲೆಗಳಲ್ಲಿ ಪ್ರಮುಖವಾದ ದಾಳಿ ನೂರ್ ಖಾನ್ ವಾಯುನೆಲೆಯ ಮೇಲೆ ನಡೆದಿತ್ತು. ಇದು ಪಾಕಿಸ್ತಾನದ ಮಿಲಿಟರಿ ಲಾಜಿಸ್ಟಿಕ್ಸ್‌ನ ಪ್ರಮುಖ ಕೇಂದ್ರವಾಗಿದೆ. ಈ ನೆಲೆಯು ಇಸ್ಲಾಮಾಬಾದ್‌ನಿಂದ ಕೇವಲ 10 ಕಿಲೋಮೀಟರ್ ದೂರ, ಪಾಕಿಸ್ತಾನ ಮಿಲಿಟರಿ ಪ್ರಧಾನ ಕಚೇರಿಯ ಪಕ್ಕದಲ್ಲಿದೆ. ಬೆನಜೀರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಷ್ಟ್ರೀಯ ಏರೋಸ್ಪೇಸ್ ಕೇಂದ್ರ ಕೂಡ ಈ ವಾಯುನೆಲೆಯ ಪಕ್ಕದಲ್ಲಿವೆ.

ದಲು ದೊಡ್ಡ ಸ್ಫೋಟ ಸಂಭವಿಸಿತು, ನಂತರ ಸ್ವಲ್ಪ ಸಮಯದ ನಂತರ ಎರಡನೆಯದು. ಜ್ವಾಲೆಗಳು ಕಾಣಿಸಿಕೊಂಡು ದಟ್ಟವಾದ ಹೊಗೆ ಕಾಣಿಸಿಕೊಳ್ಳಲು ಶುರುವಾಯ್ತು. ಇಡೀ ಪ್ರದೇಶವನ್ನು ಸೈನ್ಯವು ಸುತ್ತುವರೆದಿತ್ತು. ಮಾಧ್ಯಮದವರು ಮತ್ತು ಸಾಮಾನ್ಯ ಜನರು ಹತ್ತಿರ ಹೋಗಲು ಸಹ ಅವಕಾಶವಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಬಿಬಿಸಿ ಉರ್ದುಗೆ ಹೇಳಿದ್ದಾರೆ.

ಸಂಭಾವ್ಯ ಪರಮಾಣು ಬೆದರಿಕೆಯ ಎಚ್ಚರಿಕೆ
ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ ವಾಯು ಇಂಧನ ತುಂಬುವ ಸಾಮರ್ಥ್ಯ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ನೋಡಿಕೊಳ್ಳುವ ಕಾರ್ಯತಂತ್ರದ ಯೋಜನೆ ವಿಭಾಗಕ್ಕೆ ಬಹಳ ಹತ್ತಿರದಲ್ಲಿದೆ. ಇದೇ ಕಾರಣಕ್ಕೆ ಅಮೆರಿಕ ಭಾರತದ ಈ ಶಸ್ತ್ರಚಿಕಿತ್ಸಾ ಕ್ರಮವನ್ನು ಸಂಭಾವ್ಯ ಪರಮಾಣು ಬೆದರಿಕೆಯ ಎಚ್ಚರಿಕೆಯಾಗಿ ನೋಡಿತು (ನ್ಯೂಕ್ಲಿಯರ್ ಡೆಕಾಪಿಟೇಶನ್ ವಾರ್ನಿಂಗ್). ಪಾಕಿಸ್ತಾನದ ಪರಮಾಣು ಕಮಾಂಡ್ ರಚನೆಯು ನಾಶವಾಗಬಹುದು ಎಂಬುದು ಅದರ ದೊಡ್ಡ ಕಳವಳವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದನ್ನು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ.

ಇದನ್ನೂ ಓದಿ: ಪಾಕಿಸ್ತಾನ ಸೇನೆ ಸರ್ಕಾರದ ಮಾತು ಕೇಳಲ್ಲ, ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ; ಸಚಿವ ಜೋಶಿ

ದಾಳಿಯ ನಂತರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ (ಎನ್‌ಸಿಎ) ಸಭೆಯನ್ನು ಕರೆದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಸಭೆಯು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಆದರೆ, ಪಾಕಿಸ್ತಾನ ಸರ್ಕಾರ ಈ ಹೇಳಿಕೆಯನ್ನು ನಿರಾಕರಿಸಿದೆ.

ಭಾರತದ ಪ್ರತಿದಾಳಿ ಕಂಡು ಅಮೆರಿಕ ಶಾಕ್
ನೂರ್ ಖಾನ್ ವಾಯುನೆಲೆಯ ದಾಳಿಯಿಂದ ಮುಂದಾಗುವ ಅಪಾಯಗಳ ಬಗ್ಗೆ ಎಚ್ಚೆತ್ತ ಅಮೆರಿಕ ಮಧ್ಯಸ್ಥಿಕೆಗೆ ಮುಂದಾಯ್ತು ಎಂದು ವರದಿಯಾಗಿದೆ. ಭಾರತದ ಆಕ್ರಮಣಶೀಲತೆಯನ್ನು ಕಂಡು ಬೆಕ್ಕಸಬೆರಗೊಳಗಾದ ಅಮೆರಿಕ, ಮುಂದೆ ಪಾಕಿಸ್ತಾನದ ಸುರಕ್ಷಿತ ನೆಲೆಗಳ ಮೇಲೆಯೂ ದಾಳಿ ನಡೆಸಬಹುದು ಎಂದು ಅಂದಾಜಿಸಿತ್ತು. ಈ ವೇಳೆಗಾಗಲೇ ಪಾಕಿಸ್ತಾನ ಸಹ ಅಮೆರಿಕದ ಮುಂದೆ ಹೋಗಿತ್ತು. ಹಾಗಾಗಿ ಅಮೆರಿಕ ಮಧ್ಯಸ್ಥಿಕೆಗೆ ಮುಂದಾಯ್ತು ಎಂದು ವರದಿಗಳು ಬಂದಿವೆ. ಇದು ಪಾಕಿಸ್ತಾನದ ಮಿಲಿಟರಿ ಸನ್ನದ್ಧತೆಗೆ ಒಂದು ಹೊಡೆತ ಮಾತ್ರವಲ್ಲದೆ, ಈ ಸಂಘರ್ಷ ನಿಯಂತ್ರಣ ತಪ್ಪಿದರೆ, ಅದು ಜಾಗತಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯೂ ಆಗಿತ್ತು.

ಇದನ್ನೂ ಓದಿ: 'ಬದುಕಿ, ಬದುಕಲು ಬಿಡಿ' ಕದನ ವಿರಾಮ ಬಗ್ಗೆ ಉತ್ತರ ಪ್ರದೇಶದ ಮೌಲನಾ ಹೇಳಿದ್ದು ಪಾಕಿಸ್ತಾನಕ್ಕಾ? ಭಾರತಕ್ಕಾ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್