ಲಸಿಕೆ ಅಭಿಯಾನ: ಅಮೆರಿಕಾ ಹಿಂದಿಕ್ಕಿದ ಭಾರತ, 32 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

By Suvarna NewsFirst Published Jun 28, 2021, 3:32 PM IST
Highlights

* ವಿಶ್ವಾದ್ಯಂತ ನಡೆಯುತ್ತಿದೆ ಕೊರೋನಾ ಲಸಿಕಾ ಅಭಿಯಾನ

* ವಿಶ್ವದ ಇತರ ಟಾಪ್‌ ದೇಶಗಳನ್ನು ಹಿಂದಿಕ್ಕಿದ ಭಾರತ

* ಭಾರತದಲ್ಲಿ ಈವರೆಗೆ 32ಕ ಕೋಟಿಗೂ ಅಧಿಕ ಜನರಿಗೆ ಲಸಿಕೆ 

ನವದೆಹಲಿ(ಜೂ.,28): ಭಾರತ ಕೊರೋನಾ ಲಸಿಕಾ ಅಭಿಯಾನದಲ್ಲಿ ವಿಶ್ವದ ಇತರ ಟಾಪ್‌ ದೇಶಗಳನ್ನು ಹಿಂದಿಕ್ಕಿದೆ. ಭಾರತದಲ್ಲಿ ಈವರೆಗೆ 32ಕ ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಲಾಗಿದೆ. ಭಾರತದಲ್ಲಿ ಈವರೆಗೆ 32,36,63,297 ಮಂದಿಗೆ ಕೊರೋನಾ ಲಸಿಕೆ ಹಾಕಕಲಾಗಿದ್ದು, ಇದು ವಿಶ್ವದಲ್ಲೇ ಅತೀ ಹೆಚ್ಚು.

ಜನವರಿ 16 ರಿಂದ ಆರಮಭವಾದ ಲಸಿಕೆ ಅಭಿಯಾನ

ಭಾರತದಲ್ಲಿ ಕೊರೋನಾ ವಿರುದ್ಧ ಲಸಿಕಾ ಅಭಿಯಾನ 2021ರ ಜನವರಿ 16ರಂದು ಆರಂಭಗೊಂಡಿದೆ. ಯುಕೆಯಲ್ಲಿ 2020ರ ಡಿಸೆಂಬರ್ 8, ಅಮೆರಿಕಾದಲ್ಲಿ ಡಿಸೆಂಬರ್ 14, ಇಟಲಿ, ಜರ್ಮನಿ ಹಾಗೂ ಫ್ರಾನ್ಸ್‌ನಲ್ಲಿ ಡಿಸೆಂಬರ್ 27ರಂದು ಲಸಿಕಾ ಅಭಿಯಾನ ಆರಂಭವಾಗಿತ್ತು.

ಯಾವ ದೇಶದಲ್ಲಿ ಎಷ್ಟು ಡೋಸ್?

ಅಮೆರಿಕದಲ್ಲಿ 32,33,27,328 ಮಂದಿಗೆ ಲಸಿಕೆ ನೀಡಲಾಗಿದ್ದು, ಯುಕೆಯಲ್ಲಿ 7,67,74,990 ಮಂದಿಗೆ ಲಸಿಕೆ ನೀಡಲಾಗಿದೆ. ಜರ್ಮನಿಯಲ್ಲಿ 7,14,37,514, ಫ್ರಾನ್ಸ್‌ನಲ್ಲಿ 5,24,57,288 ಮಂದಿಗೆ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಎಷ್ಟು ಪ್ರಕರಣ?

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 46,498 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. 58,540 ಮಂದಿ ಗುಣಮುಖರಾಗಿದ್ದಾರೆ. 978 ಮಂದಿ ಮೃತಪಟ್ಟಿದ್ದಾರೆ. 

click me!