ಕುಂಭಮೇಳದಲ್ಲಿ ಜನಸಾಗರ; ಕೊರೋನಾ ಪ್ರಕರಣದಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತ!

By Suvarna NewsFirst Published Apr 12, 2021, 8:49 PM IST
Highlights

ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದರೂ, ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಚುನಾವಣ ಪ್ರಚಾರ, ಮಾರುಕಟ್ಟೆ, ಹಬ್ಬಗಳಲ್ಲಿ ಕೊರೋನಾ ನಿಯಮ ಪಾಲನೆ ಮಾಡುತ್ತಿಲ್ಲ. ಇದೀಗ ಭಾರತ ಬ್ರಿಜಿಲ್ ಹಿಂದಿಕ್ಕ ಅತೀ ಹೆಚ್ಚು ಕೊರೋನಾ ಪ್ರಕರಣ ಸಂಖ್ಯೆ ಹೊಂದಿರುವ ವಿಶ್ವದ 2ನೇ ದೇಶ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ.  ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ನವದಹೆಲಿ(ಏ.12): ಕೊರೋನಾ ಹೆಚ್ಚಾಗುತ್ತಿರುವ ಕಾರಣ ಹಲವು ನಿರ್ಭಂಧಗಳನ್ನು ಹೇರಲಾಗಿದೆ. ಆದರೆ ಜನರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಇದೀಗ ಹರಿದ್ವಾರದಲ್ಲಿ ನಡೆಯುತ್ತಿರುವ ಕಂಭ ಮೇಳದಲ್ಲಿ ಜನಸಾಗರವೇ ಹರಿದು ಬಂದಿದೆ. ಭಕ್ತರು ಪವಿತ್ರ ನದಿಯಲ್ಲಿ ಸ್ನಾ ಮಾಡೋ ಮೂಲಕ ಪಾಪಗಳನ್ನು ತೊಳೆಯುತ್ತಿದ್ದಾರೆ. ಆದರೆ ಈ ಕುಂಭಮೇಳದಿಂದ ಉತ್ತರಖಂಡದಲ್ಲಿ ಕೊರೋನಾ ದಿಡೀರ್ ಏರಿಕೆಯಾಗಿದೆ.

ಆರೋಗ್ಯ, ಸುರಕ್ಷಿತ ಬದುಕು ಎಲ್ಲರ ಹಕ್ಕು, ಎಲ್ಲರಿಗೂ ಲಸಿಕೆ ಅಭಿಯಾನ ಆರಂಭಿಸಿದ ಕಾಂಗ್ರೆಸ್!.

ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವುದರಿಂದ ಕೊರೋನಾ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಈ ಕುರಿತು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರ ಹೆಣಗಾಡುತ್ತಿದೆ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳ ಹಿಂದೂ ಹಬ್ಬಗಳಲ್ಲಿ ಅತ್ಯಂತ ಪವಿತ್ರ ಹಬ್ಬ ಹಾಗೂ ಆಚರಣೆಯಾಗಿದೆ. 

ಜನರು ಕೊರೋನಾ ಮಾರ್ಗಸೂಚಿಗಳನ್ನು ನಿರ್ಲಕ್ಷ್ಯಿಸುತ್ತಿರುವ ಕಾರಣ ಭಾರತದಲ್ಲಿ ಕಳೆದೊಂದು ವಾರದಿಂದ ಪ್ರತಿ ದಿನ 1 ಲಕ್ಷ ಕ್ಕೂ ಹೆಚ್ಚು ಹೊಸ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ.  168,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಸೋಮವಾರ ದಾಖಲಾಗಿದೆ.   ಬ್ರೆಜಿಲ್ ಅನ್ನು ಹಿಂದಿಕ್ಕಿ ಜಾಗತಿಕವಾಗಿ ಎರಡನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ದೇಶ ಅನ್ನೋ ಕುಖ್ಯಾತಿಗೆ ಭಾರತ ಗುರಿಯಾಗಿದೆ.

ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಸಿಎಂ ಬಿಎಸ್‌ವೈಗೆ ಮಹತ್ವದ ಸಲಹೆ ನೀಡಿದ ಸಿದ್ದರಾಮಯ್ಯ

ಇದೀಗ ಭಾರತದಲ್ಲಿ 13.5 ಮಿಲಿಯನ್ ಕೊರೋನಾ ಪ್ರಕರಣ ಹೊಂದಿದ್ದರೆ, ಬ್ರೆಜಿಲ್ 13.4 ಮಿಲಿಯನ್ ಪ್ರಕರಣಗಳೊಂದಿಗೆ 3ನೇ ಸ್ಥಾನ ಹೊಂದಿದೆ.  ಮೊದಲ ಸ್ಥಾನದಲ್ಲಿರು ಅಮೇರಿಕ 31 ಮಿಲಿಯನ್ ಕೊರೋನಾ ಪ್ರಕರಣ ಹೊಂದಿದೆ.

click me!