ಭಾರತದಲ್ಲಿ 3ನೇ ಕೊರೋನಾ ಅಲೆ ಆತಂಕ, ಬಿಜೆಪಿ ಜೆಡಿಎಸ್ ಮೈತ್ರಿ ಮಾತು: ಡಿ.5ರ ಟಾಪ್ 10 ಸುದ್ದಿ!

Published : Dec 05, 2021, 04:38 PM ISTUpdated : Dec 05, 2021, 04:39 PM IST
ಭಾರತದಲ್ಲಿ 3ನೇ ಕೊರೋನಾ ಅಲೆ ಆತಂಕ, ಬಿಜೆಪಿ ಜೆಡಿಎಸ್ ಮೈತ್ರಿ ಮಾತು: ಡಿ.5ರ ಟಾಪ್ 10 ಸುದ್ದಿ!

ಸಾರಾಂಶ

ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ 3ನೇ ಅಲೆ ಮಾತುಗಳು ಕೇಳಿಬರುತ್ತಿದೆ. ಮುಂಬೈ ಟೆಸ್ಟ್ ಗೆಲುವಿಗೆ 540 ರನ್‌ಗಳ ಗುರಿ ನೀಡಲಾಗಿದೆ. ಇತ್ತ ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಬಹುತೇಕ ಪಕ್ಕಾ ಆಗಿದೆ. ನೀರಜ್ ಕೊಂಡಾಡಿದ ಮೋದಿ, ಮತ್ತೆ ಸದ್ದು ಮಾಡುತ್ತಿದ್ದಾರೆ ರಮ್ಯಾ ಸೇರಿದಂತೆ ಡಿಸೆಂಬರ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Omicron Case:ಭಾರತದಲ್ಲಿ ಐದಕ್ಕೇರಿದ ಓಮಿಕ್ರಾನ್ ಕೇಸ್, ಫೆಬ್ರವರಿಯಲ್ಲಿ 3ನೇ ಕೋವಿಡ್ ಅಲೆ ಎಚ್ಚರಿಕೆ!

ಭಾರತದಲ್ಲಿ(India) ಹೊಸ ರೂಪಾಂತರಿ ವೈರಸ್ ಪ್ರಕರಣಗಳ(Mutation Virus) ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ಪ್ರಕರಣ(Omicron variant) ಪತ್ತೆಯಾಗಿದೆ. ತಾಂಜಾನಿಯಾದಿಂದ ದೆಹಲಿಗೆ(Delhi) ಆಗಮಿಸಿದ ವ್ಯಕ್ತಿಗೆ ಓಮಿಕ್ರಾನ್ ವೈರಸ್ ತುಗುಲಿರುವುದು ದೃಢಪಟ್ಟಿದೆ. 

Trade with Pak: ಪಂಜಾಬ್‌ ಅಭಿವೃದ್ಧಿಗೆ ಪಾಕ್‌ ಜೊತೆ ಸ್ನೇಹ ಬೆಳೆಸಿ ಎಂದ ಸಿಧು

 ಭಾರತವೂ  ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧದ ಜೊತೆ ವ್ಯಾಪಾರ ವಹಿವಾಟು ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪಂಜಾಬ್ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಸಲಹೆ ನೀಡಿದ್ದಾರೆ.  ಅವರು ವ್ಯಾಪಾರ ವಸ್ತು ಪ್ರದರ್ಶನ ಪಿಟೆಕ್ಸ್‌(PITEX)ಮಳಿಗೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

Council Election Karnataka : ಯಡಿಯೂರಪ್ಪ ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ

 ಬಿಜೆಪಿ (BJP) ನಾಯಕರಾದ ಯಡಿಯೂರಪ್ಪ (Yediyurappa) ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ. ಈ ವರೆಗೆ ಯಡಿಯೂರಪ್ಪ  ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಸಿಎಂ ಬೊಮ್ಮಾಯಿ (BasavarajaBommai) ಕೂಡ ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ ಎಂದು  ವಿಧಾನ ಪರಿಷತ್ ಚುನಾವಣೆ (MLC Election) ಮೈತ್ರಿ ವಿಚಾರದ ಸಂಬಂಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟನೆ ನೀಡಿದರು. 

Fuel Price: ವಾಹನ ಸವಾರರಿಗೆ ಕೊಂಚ ನೆಮ್ಮದಿ ಕೊಟ್ಟ ಪೆಟ್ರೋಲ್, ಡೀಸೆಲ್ ದರ!

 ಕೊರೋನಾ ಸಂದರ್ಭದಲ್ಲಿ ಜನರನ್ನು ತಟ್ಟಲಾರಂಭಿಸಿದ ಬೆಲೆ ಏರಿಕೆ ಬಿಸಿ ಇನ್ನೂ ನಿಂತಿಲ್ಲ. ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್, ಗ್ಯಾಸ್‌ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಿರುವುದು ಜನ ಸಾಮಾಣ್ಯರನ್ನು ಕಂಗಾಲುಗೊಳಿಸಿದೆ. 

Ind vs NZ Mumbai Test: ಮುಂಬೈ ಟೆಸ್ಟ್‌ ಗೆಲ್ಲಲು 540 ರನ್‌ಗಳ ಗುರಿ

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮುಂಬೈ ಟೆಸ್ಟ್‌ ಪಂದ್ಯ (Mumbai Test) ಗೆಲ್ಲಲು ಟೀಂ ಇಂಡಿಯಾ (Team India) ಪ್ರವಾಸಿ ನ್ಯೂಜಿಲೆಂಡ್‌ ತಂಡಕ್ಕೆ 540 ರನ್‌ಗಳ ಕಠಿಣ ಗುರಿ ನೀಡಿದೆ. ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 7 ವಿಕೆಟ್‌ ಕಳೆದುಕೊಂಡು 276 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ. ಭಾರತದಲ್ಲಿ ಚೊಚ್ಚಲ ಟೆಸ್ಟ್‌ ಸರಣಿಯನ್ನು ಗೆಲ್ಲಬೇಕಿದ್ದರೇ ನ್ಯೂಜಿಲೆಂಡ್ ತಂಡವು (New Zealand Cricket Team) ಅಸಾದಾರಣ ಪ್ರದರ್ಶನ ತೋರಬೇಕಿದೆ.

Bengaluru Airport:ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅಲ್ಲಿನ ವ್ಯವಸ್ಥೆ ಬಗ್ಗೆ ಬರೆದ ರಮ್ಯಾ!

ಕನ್ನಡ ಚಿತ್ರರಂಗದ (Sandalwood) ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೊಸ ಕಲಾವಿದರ ತಂಡ, ಹೊಸ ಸಿನಿಮಾ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಮ್ಯಾ (Ramya) ಆಗಾಗ ರಾಜಕೀಯ (Politics) ಮತ್ತು ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಹ್ಯಾಪನಿಂಗ್ ವಿಚಾರಗಳ ಬಗ್ಗೆ ಬರೆದುಕೊಳ್ಳುತ್ತಾರೆ. ಇದೀಗ ಬೆಂಗಳೂರು ವಿಮಾನ ನಿಲ್ದಾಣದ (Bengaluru Aiport) ಬಗ್ಗೆ ಬರೆದುಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. 

Amazon Offers: iPhone 12 Pro ಖರೀದಿ ಮೇಲೆ ಭರ್ಜರಿ ರಿಯಾಯಿತಿ! ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

 ಪ್ರತಿಷ್ಟಿತ ಮೊಬೈಲ್‌ ಬ್ರ್ಯಾಂಡ್‌  ಆ್ಯಪಲ್‌ನ (Apple) ಐ-ಫೋನ್‌ 12 ಸಿರೀಸ್‌ ಮೊಬೈಲ್ ಭರ್ಜರಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ನೀವು iPhone 12 Pro ಖರೀದಿಸಲು ಯೋಚಿಸುತ್ತಿದ್ದರೆ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ಲ್ಲಿರುವ (Amazon) ಈ ಆಫರ್‌ ಮಿಸ್‌ ಮಾಡ್ಕೋಬೇಡಿ. 

shine on field: ಚಿನ್ನದ ಹುಡುಗನ ಮತ್ತೆ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

ಶಾಲಾ ಮಕ್ಕಳನ್ನು ಮೈದಾನದಲ್ಲಿ ಮಿಂಚುವಂತೆ ಪ್ರೇರೇಪಿಸಿದ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ(Neeraj Chopra) ಅವರು  ಗುಜರಾತ್‌ನ ಅಹ್ಮದಾಬಾದ್‌(Ahmedabad)ನಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು.

Bigg Boss Kannada: ಸೀಸನ್ 9 ಓಟಿಟಿಯಲ್ಲಿ ಬರಲ್ಲ ಎಂದ ವಾಹಿನಿ ಮುಖ್ಯಸ್ಥರು!

ಬಿಗ್ ಬಾಸ್ ಹೊಸ ಸೀಸನ್ ಓಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹರಿದಾಡುತ್ತಿರುವ ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ ವಾಹಿನಿ ಮುಖ್ಯಸ್ಥರು. ಕಿಚ್ಚನ ಟಿವಿಯಲ್ಲಿ ನೋಡಿ.... 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು