Published : Aug 04, 2025, 07:35 AM ISTUpdated : Aug 04, 2025, 06:13 PM IST

India News Live: ಡೆಂಟಿಸ್ಟ್‌ ತುಂಬಾ ಕಾಸ್ಟ್ಲಿ - ಗೆಳೆಯನ ಹಲ್ಲಿನ ಓರೆಕೋರೆ ಸರಿಪಡಿಸಲು ಟೈಲ್ಸ್ ಪಾಲಿಶಿಂಗ್ ಮೆಷಿನ್ ಬಳಸಿದ ಸ್ನೇಹಿತ

ಸಾರಾಂಶ

ನವದೆಹಲಿ: ಜೂ.28ರಂದು ಕಾಶ್ಮೀರದಲ್ಲಿ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ಮೂವರು ಪಹಲ್ಗಾಂ ದಾಳಿಕೋರರಲ್ಲಿ ಒಬ್ಬನಾದ ಲಷ್ಕರ್ ಹಬೀಬ್ ಅಲಿಯಾಸ್ ಜಿಬ್ರಾನ್‌ನ ಸಾಂಕೇತಿಕ ಶವಸಂಸ್ಕಾರ ಹಾಗೂ ಶ್ರದ್ಧಾಂಜಲಿ ಸಭೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆತನ ತವರೂರಲ್ಲಿ ನಡೆಸಲಾಗಿದೆ. ಇದರಲ್ಲಿ ಹಲವು ಲಷ್ಕರ್ ಉಗ್ರರು ಭಾಗಿಯಾಗಿದ್ದರು. ಇದರಿಂದಾಗಿ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎನ್ನುತ್ತಿರುವ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿದೆ. ಇತ್ತ ಭಾರತ-ಪಾಕ್ ಸಮರ ನಿಲ್ಲಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 31ನೇ ಸಲ ಹೇಳಿದ್ದಾರೆ. 'ನಾನೇನು ಮಾಡಿದೆ ಎಂದು ದೇವರಿಗೆ ಗೊತ್ತಿಲ್ಲ. ಕಾಂಗೋ-ರುವಾಂಡಾ, ಭಾರತ-ಪಾಕ್, ಇರಾನ್ -ಇಸ್ರೇಲ್ - ಹೀಗೆ 5 ಸಮರ ನಿಲ್ಲಿಸಿದ್ದೇನೆ ಎಂದು ದೇವರಿಗೆ ತಿಳಿದಿಲ್ಲ' ಎಂದು ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

 

06:13 PM (IST) Aug 04

ಡೆಂಟಿಸ್ಟ್‌ ತುಂಬಾ ಕಾಸ್ಟ್ಲಿ - ಗೆಳೆಯನ ಹಲ್ಲಿನ ಓರೆಕೋರೆ ಸರಿಪಡಿಸಲು ಟೈಲ್ಸ್ ಪಾಲಿಶಿಂಗ್ ಮೆಷಿನ್ ಬಳಸಿದ ಸ್ನೇಹಿತ

ಟೈಲ್ಸ್ ಪಾಲಿಶ್ ಮಾಡುವ ಯಂತ್ರ ಬಳಸಿ ಗೆಳೆಯನ ಹಲ್ಲನ್ನು ನೇರವಾಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

05:01 PM (IST) Aug 04

ನಿಮ್ಮ ಪ್ರೀತಿಯ ಮಾಧುರಿ ಹೀಗಿದ್ದಾಳೆ ನೋಡಿ - ಕೊಲ್ಹಾಪುರ ಜನರಿಗೆ ವೀಡಿಯೋ ಸಂದೇಶ ಕಳುಹಿಸಿದ ವಂತಾರಾ

ಕೊಲ್ಹಾಪುರದಿಂದ ವನತಾರಕ್ಕೆ(ವಂತಾರಾ) ಸ್ಥಳಾಂತರಗೊಂಡ ಮಾಧುರಿ ಆನೆಯ ಹೊಸ ಜೀವನದ ಹೇಗಿದೆ ಎಂಬ ಬಗ್ಗೆ ವಂತಾರವೂ ಕೋಲ್ಹಾಪುರ ಜನರಿಗೆ ವೀಡಿಯೋ ಸಂದೇಶ ಕಳುಹಿಸಿದ್ದು, ವೀಡಿಯೋ ವೈರಲ್ ಆಗಿದೆ.

Read Full Story

03:49 PM (IST) Aug 04

ಹಲವು ವರ್ಷ ಬಳಸದೇ ಇಟ್ಟಿದ್ದ ಕಾರಿನಿಂದ ಬರ್ತಿತ್ತು ವಿಚಿತ್ರ ಸದ್ದು - ಡಿಕ್ಕಿ ತೆರೆದ ಮಾಲೀಕನಿಗೆ ಶಾಕ್

ಬಹಳ ದಿನಗಳಿಂದ ಮೂಲೆ ಸೇರಿದ್ದ ಕಾರಿನ ಡಿಕ್ಕಿಯಿಂದ ವಿಚಿತ್ರ ಸದ್ದು ಕೇಳಿಬಂದಾಗ ಮಾಲೀಕರು ತಪಾಸಣೆ ಮಾಡಲು ಕಾರನ್ನು ಹೊರಗೆ ತೆಗೆದಿದ್ದು, ಕಾರಿನ ಒಳಗಿದ್ದ ಸಂಸಾರವನ್ನು ನೋಡಿ ಅಚ್ಚರಿಯಾಗಿದ್ದಾರೆ.

Read Full Story

02:28 PM (IST) Aug 04

ರಕ್ತಸಂಬಂಧಗಳ ಮೀರಿದ ಬಂಧವಿದು - ಒಂದೇ ಮನೆಯಲ್ಲಿ ಕುಟುಂಬದೊಂದಿಗೆ ವಾಸ ಮಾಡ್ತಿದ್ದಾರೆ ಇಬ್ಬರು ಸ್ನೇಹಿತರು

ಅಣ್ಣತಮ್ಮಂದಿರು ಬಾಲ್ಯ ಕಳೆದು ಯೌವ್ವನ ತಲುಪುತ್ತಿದ್ದಂತೆ ದಾಯಾದಿಗಳಾಗುವ ಕಾಲದಲ್ಲಿ ಇಂತಹ ಯಾವುದೇ ಸಂಬಂಧವಿಲ್ಲದ ಸ್ನೇಹವೊಂದು ಕುಟುಂಬವಾಗಿ ಬದಲಾಗಿ ಮಕ್ಕಳ ಕಾಲಕ್ಕೂ ಮುಂದುವರೆದಿದ್ದು, ಸ್ನೇಹಿತರಾಗಿ ಅಣ್ಣತಮ್ಮನಂತೆ ಒಂದೇ ಮನೆಯಲ್ಲಿ ಬದುಕುತ್ತಿರುವಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ಸೂರತ್‌ ನಗರಿ.

Read Full Story

01:58 PM (IST) Aug 04

ವೇಗ vs ಸ್ಟೆಲ್ತ್ - ಬ್ರಹ್ಮೋಸ್ 2 ಮತ್ತು ಬಿ-2 ಬಾಂಬರ್‌ಗಳ ನಡುವೆ ಸಲ್ಲದ ಹೋಲಿಕೆ

ಬ್ರಹ್ಮೋಸ್ 2 ಕ್ಷಿಪಣಿ ಮತ್ತು ಬಿ-2 ಬಾಂಬರ್ ಎರಡೂ ಶಕ್ತಿಶಾಲಿ ಆಯುಧಗಳಾಗಿದ್ದು, ವಿಭಿನ್ನ ಕಾರ್ಯತಂತ್ರಗಳನ್ನು ಹೊಂದಿವೆ. ಒಂದು ವೇಗದ ದಾಳಿಗೆ ಸೂಕ್ತವಾದರೆ, ಇನ್ನೊಂದು ರಹಸ್ಯ ಕಾರ್ಯಾಚರಣೆಗಳಿಗೆ ಪರಿಣಾಮಕಾರಿ. ಈ ಲೇಖನದಲ್ಲಿ, ಈ ಎರಡು ಆಯುಧಗಳ ವೆಚ್ಚ, ಉದ್ದೇಶ ಮತ್ತು  ಪಾತ್ರಗಳನ್ನು ಹೋಲಿಸಲಾಗಿದೆ.

Read Full Story

12:47 PM (IST) Aug 04

ಅತ್ಯಾ*ಚಾರಗೈದು ಮಗಳನ್ನೇ ಮದುವೆಯಾಗಿದ್ದ ದುಷ್ಟ ತಂದೆಗೆ ಜೀವಾವಧಿ ಶಿಕ್ಷೆ ಪ್ರಕಟ

12 ವರ್ಷದ ಮಗಳ ಮೇಲೆ ಅತ್ಯಾ*ಚಾರ ಎಸಗಿ, ಬಳಿಕ ಆಕೆಯನ್ನೇ ವಿವಾಹವಾಗಿದ್ದ ತಂದೆಯೊಬ್ಬನಿಗೆ ಉತ್ತರ ಪ್ರದೇಶದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

Read Full Story

12:46 PM (IST) Aug 04

ನೀವು ನಿಜವಾದ ಭಾರತೀಯರೇನ್ರೀ...? Rahul Gandhiಗೆ ಸುಪ್ರೀಂಕೋರ್ಟ್​ ಛೀಮಾರಿ

ಚೀನಾದ ವಿಷಯದಲ್ಲಿ ಭಾರತೀಯ ಸೇನೆಯ ವಿರುದ್ಧ ಟೀಕೆ ಮಾಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಸುಪ್ರೀಂಕೋರ್ಟ್​ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳು ಹೇಳಿದ್ದೇನು ನೋಡಿ...

 

Read Full Story

12:10 PM (IST) Aug 04

ಐದು ಕೋಟಿ ಗಳಿಸಬೇಕಾ? ಹಾಗಿದ್ರೆ ಮಾಡಬೇಕಿರುವುದೇನು? ಇಲ್ಲಿದೆ ಸ್ಟೆಪ್​ ಬೈ ಸ್ಟೆಪ್​ ಮಾಹಿತಿ...

ಕೋಟ್ಯಧಿಪತಿಗಳಾಗುವುದು ಬಹುತೇಕ ಮಂದಿಗೆ ಸುಲಭದ ಮಾತಲ್ಲ. ಆದರೆ ಕೆಲವು ವರ್ಷ ತಾಳ್ಮೆಯಿಂದ ಹೂಡಿಕೆ ಮಾಡಿದರೆ 20 ವರ್ಷಗಳಲ್ಲಿ ಐದು ಕೋಟಿ ರೂ.ವರೆಗೆ ಗಳಿಸಲು ಸಾಧ್ಯ. ಅದರ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ...

 

Read Full Story

12:10 PM (IST) Aug 04

ಟಿಪನ್ ಬಾಕ್ಸ್ ಒಡೆದಿದ್ದಕ್ಕೆ ಮುರಿದು ಬಿದ್ದ ಸ್ನೇಹ - 15 ವರ್ಷಗಳ ನಂತರ ದ್ವೇಷಿಸುತ್ತಿದ್ದವನೇ ಪತಿಯಾಗಿ ಬಂದ

ಮದ್ವೆ ಎಂಬುದು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತೆ ಅನ್ನೋದು ಅನೇಕರ ಮಾತು. ಅದಕ್ಕೆ ಪುಷ್ಠಿ ನೀಡುವಂತೆ ಕೆಲವು ಘಟನೆಗಳು ನಡೆಯುತ್ತವೆ. ಅದೇ ರೀತಿ ಶಾಲೆಯಲ್ಲಿ ದ್ವೇಷಿಸುತ್ತಿದ್ದ ಇಬ್ಬರು ಸತಿಪತಿಗಳಾಗಿದ್ದಾರೆ. ಅವರ ಸ್ಟೋರಿ ಇಲ್ಲಿದೆ.

Read Full Story

11:02 AM (IST) Aug 04

2 ರೂಪಾಯಿಗೆ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಖ್ಯಾತ ವೈದ್ಯ ಡಾ. ಎ.ಕೆ. ರೈರು ಗೋಪಾಲ್ ಇನ್ನಿಲ್ಲ

ಜನರಿಂದ ಕೇವಲ 2 ರೂಪಾಯಿ ಪಡೆದು ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡುತ್ತಿದ್ದ ಕೇರಳದ ಖ್ಯಾತ ವೈದ್ಯ ಡಾ. ಎ.ಕೆ. ರೈರು ಗೋಪಾಲ್ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

Read Full Story

10:47 AM (IST) Aug 04

Jharkhand Ex-Chief Minister Shibu Soren - ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೆನ್ ಇನ್ನಿಲ್ಲ

ಮಾಜಿ ಕೇಂದ್ರ ಸಚಿವರು, ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾದ ಸ್ಥಾಪಕರಲ್ಲಿ ಒಬ್ಬರಾದ ಶಿಬು ಸೊರೆನ್ ಇಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

Read Full Story

10:26 AM (IST) Aug 04

ಭಾರತಕ್ಕೆ ಪ್ರತಿದಿನ ಎಷ್ಟು ಲೀಟರ್ ಇಂಧನ ಬೇಕು? ತಿಳಿದ್ರೆ ಶಾಕ್ ಆಗ್ತೀರಿ!

ಅಮೆರಿಕದ ಸುಂಕದ ಬೆದರಿಕೆಯ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಆಮದು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದೆ. ಭಾರತದ ದೈನಂದಿನ ಇಂಧನ ಬಳಕೆ ಮತ್ತು ತೆರಿಗೆಗಳ ವಿವರಗಳನ್ನು ಒಳಗೊಂಡ ಈ ಲೇಖನವು, ಈ ನಿರ್ಧಾರದ ಹಿಂದಿನ ಭೌಗೋಳಿಕ ರಾಜಕೀಯ ಪರಿಣಾಮಗಳನ್ನು ಚರ್ಚಿಸುತ್ತದೆ.
Read Full Story

More Trending News