LIVE NOW
Published : May 03, 2026, 07:29 AM ISTUpdated : May 03, 2026, 10:01 AM IST

National News Live: ಮದುವೆಗೆ ತೆರಳುತ್ತಿದ್ದ ವರನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್, ಹುಡುಗಿ ಕುಟುಂಬಸ್ಥರ ಕೈವಾಡ

ಸಾರಾಂಶ

ನಾಲ್ಕು ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಅತ್ಯಾ**ರ ಎಸಗಿ ಕೊಲೆಗೈದ ಘಟನೆ ಪುಣೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ 65ರ ವೃದ್ಧನನ್ನು ಅರೆಸ್ಟ್ ಮಾಡಲಾಗಿದೆ. ಇತ್ತ ಕುಟುಂಬಸ್ಥರು, ಸ್ಥಳೀಯರು ಪುಣೆ ಹೆದ್ದಾರಿ ಬಂದ್ ಮಾಡಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇತ್ತ ಪಂಚ ರಾಜ್ಯಗಳ ಫಲಿತಾಂಶಕ್ಕೆ ಇಡೀ ದೇಶವೇ ಕಾಯುತ್ತಿದೆ. ಪಶ್ಚಿಮ ಬಂಗಾಳ, ತಮಿಳುನಾಡು ತೀವ್ರ ಕುತೂಹಲ ಕೆರಳಿಸಿದೆ. ಇಂದಿನ ಕ್ಷಣ ಕ್ಷಣದ ಸುದ್ದಿ ಅಪ್‌ಡೇಟ್ ಇಲ್ಲಿದೆ.

UP Wedding tragedy

10:01 AM (IST) May 03

ಮದುವೆಗೆ ತೆರಳುತ್ತಿದ್ದ ವರನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್, ಹುಡುಗಿ ಕುಟುಂಬಸ್ಥರ ಕೈವಾಡ

ಮದುವೆಗೆ ತೆರಳುತ್ತಿದ್ದ ವರನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್, ಹುಡುಗಿ ಕುಟುಂಬಸ್ಥರ ಕೈವಾಡ, ಆಸ್ಪತ್ರೆ ದಾಖಲಾಗಿದ್ದ ವರನ ದುರಂತ ಅಂತ್ಯ ಕಂಡರೆ, ಇತ್ತ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

 

Read Full Story

09:44 AM (IST) May 03

ಆರೆಂಜ್ ಕ್ಯಾಪ್ ರೇಸ್ - ಟಾಪ್-10 ಪಟ್ಟಿಯೊಳಗೆ ಎಂಟ್ರಿಕೊಟ್ಟ ಸಂಜು ಸ್ಯಾಮ್ಸನ್!

ಕನ್ನಡಿಗ ಕೆ.ಎಲ್. ರಾಹುಲ್ ಸದ್ಯ ಐಪಿಎಲ್ ಆರೆಂಜ್ ಕ್ಯಾಪ್ ಉಳಿಸಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದು, ವಿರಾಟ್ ಕೊಹ್ಲಿ ಕೂಡ ಟಾಪ್ 5ರಲ್ಲಿದ್ದಾರೆ. ಈ ಲೇಖನವು ಆರೆಂಜ್ ಮತ್ತು ಪರ್ಪಲ್ ಕ್ಯಾಪ್‌ಗಾಗಿ ನಡೆಯುತ್ತಿರುವ ಪೈಪೋಟಿಯ ಸಂಪೂರ್ಣ ವಿವರಗಳನ್ನು ನೀಡುತ್ತದೆ.
Read Full Story

09:03 AM (IST) May 03

IPL 2026 - ನಿನ್ನೆ ನಡೆದ ಮುಂಬೈ ಇಂಡಿಯನ್ಸ್ - ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಮುಂಬೈ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, ಋತುರಾಜ್ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮಾ ಅವರ ಅರ್ಧಶತಕಗಳ ನೆರವಿನಿಂದ ಚೆನ್ನೈ 6ನೇ ಸ್ಥಾನಕ್ಕೇರಿದೆ.
Read Full Story

08:01 AM (IST) May 03

TMC - ಪಶ್ಚಿಮ ಬಂಗಾಳ ಮತಎಣಿಕೆಗೆ ಕೇಂದ್ರ ನೌಕರರ ನೇಮಕ ಪ್ರಶ್ನಿಸಿದ್ದ ಮಮತಾ ಅರ್ಜಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ, ಕೋರ್ಟ್ ಹೇಳಿದ್ದೇನು?

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಮತಎಣಿಕೆಗೆ ಕೇಂದ್ರ ಸರ್ಕಾರಿ ನೌಕರರನ್ನು ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಈ ಕುರಿತು ಟಿಎಂಸಿ ಸರ್ಕಾರದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಸಿಬ್ಬಂದಿ ನಿಯೋಜನೆ ಆಯೋಗದ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.

Read Full Story

07:53 AM (IST) May 03

ಮನೆಯ ಬಾತ್‌ರೂಂನಲ್ಲಿ ಯುವ ಜಡ್ಜ್ ಶವ ಪತ್ತೆ, ಅನುಮಾನ ಮೂಡಿಸಿದ ಪ್ರಕರಣ

ಮನೆಯ ಬಾತ್‌ರೂಂನಲ್ಲಿ ಯುವ ಜಡ್ಜ್ ಶವ ಪತ್ತೆ, ಅನುಮಾನ ಮೂಡಿಸಿದ ಪ್ರಕರಣ, ದೆಹಲಿಯ ಮನೆಯಲ್ಲೇ ಘಟನೆ ನಡೆದಿದೆ. ಪೊಲೀಸರು ಕೆಲ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ.

 

Read Full Story

07:30 AM (IST) May 03

ಸಿಸಿಟಿವಿಯಲ್ಲಿ ವೃದ್ಧನ ಕೃತ್ಯ ಸೆರೆ

ನಾಲ್ಕು ವರ್ಷದ ಬಾಲಕಿಯನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಸ್ಥಾನದ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಕೃತ್ಯ ಎಸಗಲಾಗಿದೆ. ಬಾಲಕಿ ಕಾಣೆಯಾಗಿದ್ದ ಕಾರಣ ತೀವ್ರ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು.


More Trending News