
ನವದೆಹಲಿ(ಆ.17): ಭಾರತ ಹಾಗೂ ನೇಪಾಳ ಗಡಿ ವಿವಾದದ ಬಳಿಕ ಇದೆ ಮೊದಲ ಬಾರಿಗೆ ಉಭಯ ದೇಶದ ನಡುವೆ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. 2016ರಲ್ಲಿ ಆರಂಭಿಸಿದ ಜಂಟಿ ಮೆಲ್ವಿಚಾರಣೆ ಕಾರ್ಯವಿಧಾನ ಸಭೆ ಇದಾಗಿದೆ. ಆದರೆ ಗಡಿ ಖ್ಯಾತೆ ಬಳಿಕ ನಡೆಯತ್ತಿರುವ ಸಭೆ ಆಗಿರುವ ಕಾರಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ನೇಪಾಳ ಹಾಗೂ ಭಾರತದ ಗಡಿ ಭಾಗದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳು ಕುರಿತು ಚರ್ಚೆ ನಡೆಯಲಿದೆ.
ನೇಪಾಳದಲ್ಲೂ ರಾಮಮಂದಿರ, ಶೀಘ್ರ ಭೂಮಿಪೂಜೆ!
ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರ ಹಾಗೂ ನೇಪಾಳ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಗಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ನೇಪಾಳದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾತ್ರ ಚರ್ಚಿಸಲು ನಿರ್ಧರಿಸಲಾಗಿದೆ.
ವಿಶ್ವಸಂಸ್ಥೆಗೂ ಹೊಸ ನಕ್ಷೆ ಕಳುಹಿಸಲು ನೇಪಾಳ ನಿರ್ಧಾರ!
2016 ರಿಂದ ಇಲ್ಲೀವರೆಗೆ 7 ಬಾರಿ ಭಾರತ ಹಾಗೂ ನೇಪಾಳದ ಜಂಟಿ ಮೇಲ್ವಿಚಾರಣ ಸಭೆ ನಡೆದಿದೆ. ಕೊನೆಯದಾಗಿ 2019 ಜುಲೈ ತಿಂಗಳಲ್ಲಿ ನಡೆದ ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ರೈಲು ಸಂಚಾರ, ಪೆಟ್ರೋಲಿಯಂ ಪೈಪ್‌ಲೈನ್, ರಸ್ತೆ, ಸೇತುವೆ, ಬಾರ್ಡರ್ ಚೆಕ್ ಪೋಸ್ಟ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಗಿತ್ತು. ಇಷ್ಟೇ ಅಲ್ಲ ಇದಕ್ಕಾಗಿ ಭಾರತ ಹಣ ಬಿಡುಗಡೆ ಮಾಡಿದೆ.
2019ರಲ್ಲಿ ಭಾರತದ ಅಭಿವೃದ್ಧಿ ಕಾಮಾಗಾರಿಯಲ್ಲಿ ಕಾಲಾಪಾನಿ ಪ್ರದೇಶವನ್ನು ಒಳಪಡಿಸಿತ್ತು. ಇದು ನೇಪಾಳದ ಆಕ್ರೋಶಕ್ಕೆ ಕಾರಣವಾಗಿತ್ತು. ನೇಪಾಳದ ಪ್ರಕಾರ ಕಾಲಾಪಾನಿ ನೇಪಾಳದ ಭೂಭಾಗ ಎಂದು ವಾದಿಸುತ್ತಿದೆ. ಇಷ್ಟೇ ಅಲ್ಲ ನೂತನವಾಗಿ ನಕ್ಷೆ ಬಿಡುಗಡೆ ಮಾಡಿರುವ ನೇಪಾಳ ಕಾಲಾಪಾನಿಯನ್ನು ನೇಪಾಳಕ್ಕೆ ಸೇರಿಸಿದೆ. ಜೂನ್ ತಿಂಗಳಲ್ಲಿ ನೇಪಾಳ ಸಂಸತ್ತು ನೂತನ ನಕ್ಷಗೆ ಅನುಮೋದನೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ