
ದೆಹಲಿ(ಆ.17): ಚೀನಾದ ಹವಾಲ ಹಣ ಬಳಸಿಕೊಂಡು ಭಾರತದಲ್ಲಿ ಬೇಹುಗಾರಿಕೆ ಕೆಲಸ ಮಾಡುತ್ತಿದ್ದ ಆರೋಪಿ ಚೀನಾದ ಚಾರ್ಲಿ ಪೆಂಗ್ ಅಕಾ ಲುವೋ ಸಾಂಗ್‌ನ್ನು ದೆಹಲಿ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಯ ಟಿಬಿಟಿಯನ್ ನಿರಾಶ್ರಿತ ಕೇಂದ್ರದಲ್ಲಿನ ಕೆಲವು ಲಾಮಾಗಳಿಗೆ 2 ರಿಂದ 3 ಲಕ್ಷ ರೂಪಾಯಿ ನೀಡಿ ದಲೈ ಲಾಮಾ ಹಾಗೂ ಅವರ ಸಹಚರರ ಮೇಲೆ ಬೇಹುಗಾರಿ ನಡೆಸುತ್ತಿದ್ದ ಚಾರ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಚೀನಾ ಗಡಿಗೆ ಎಚ್‌ಎಎಲ್‌ನ 2 ಲಘು ಕಾಪ್ಟರ್ ನಿಯೋಜನೆ!
ಹವಾಲ ಹಣದ ವರ್ಗಾವಣೆ ಸೇರಿದಂತೆ ಸುಮಾರು 300 ಕೋಟಿ ರೂಪಾಯಿ ಹಣ ವ್ಯವಹಾರ ನಡೆಯುತ್ತಿರುವುದು ಐಟಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಕಾರ್ಯಪ್ರವೃತ್ತರಾದ ಅಧಿಕಾರಿಗಳು ಚಾರ್ಲಿ ಪೆಂಗ್‌ನನ್ನು ಬಂಧಿಸಿದಾಗ ಸ್ಫೋಟಕ ಮಾಹಿತಿಗಳು ಹೊರಬಿದ್ದಿದೆ.
ಚೀನಿ ಲ್ಯಾಪ್‌ಟಾಪ್, ಕ್ಯಾಮೆರಾ ಆಮದಿಗೆ ಬ್ರೇಕ್?
ಚಾರ್ಲಿ ಪೆಂಗ್ ತನ್ನ ಕಚೇರಿಯ ಹುಡುಗನ ಮೂಲಕ ಹಣದ ಪ್ಯಾಕೆಟ್‌ಗಳನ್ನು ಟಿಬೆಟಿಯನ್ ನಿರಾಶ್ರಿತ ಕೇಂದ್ರಕ್ಕೆ ಸಾಗಿಸಲಾಗುತಿತ್ತು. ಚೀನಾದ ಮೊಬೈಲ್ ಆ್ಯಪ್ ವಿಚಾಟ್ ಮೂಲಕ ಸಂವಹನ ನಡೆಯುತ್ತಿತ್ತು. ನಿರಾಶ್ರಿತ ಕೇಂದ್ರದಲ್ಲಿನ ಕೆಲ ಲಾಮಾಗಳಿಗೆ ಹಣ ಹಂಚಲಾಗಿದೆ. ಬಳಿಕ ಇವರಿಂದ ಮಾಹಿತಿ ಪಡೆದು ಬೇಹುಗಾರಿಕೆ ನಡೆಸುತ್ತಿದ್ದ. ಈತನ ಸಂವಹನಗಳೆಲ್ಲಾ ಚೀನಾ ಮೂಲಕ ವಿಚಾಟ್ ಆ್ಯಪ್ ಮೂಲಕ ನಡೆಯುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಚಾರ್ಲಿ ಪೆಂಗ್ ಲೀ ಹವಾಲ ಹಣ ವ್ಯವಹಾರಕ್ಕೆ ಸ್ಥಳೀಯ ಚಾರ್ಟೆಂಡ್ ಅಕೌಂಟ್(CA) ನೆರವು ನೀಡಿದ್ದಾನೆ. CA ತನ್ನ 40 ಬ್ಯಾಂಕ್ ಅಕೌಂಟ್ ಮೂಲಕ ವ್ಯವಹಾರ ನಡೆಸಿದ್ದಾನೆ. ಬರೋಬ್ಬರಿ 300 ಕೋಟಿ ರೂಪಾಯಿಗಳ ವ್ಯವಹಾರ ಐಟಿ ಅಧಿಕಾರಿಗಳಿಗೆ ಸುಳಿವು ನೀಡಿದೆ. ಚೀನಾ ಕಂಪನಿಗಳಿಗೆ ಹಾಗೂ ಹಾಂಕ್ ಕಾಂಗ್ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ