ಬಾರಾಮುಲ್ಲಾದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಮೂವರು ಯೋಧರು ಹುತಾತ್ಮ!

By Suvarna NewsFirst Published Aug 17, 2020, 5:29 PM IST
Highlights

ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತೀಯ ಸೇನೆ ಪ್ರತಿ ದಿನ ಕಾರ್ಯಚರಣೆ ನಡೆಸುತ್ತಿದೆ. ಸೇನೆ ವಿರುದ್ಧ ಪ್ರತಿಕಾರ ತೀರಿಸಲು ಕಾಯುತ್ತಿದ್ದ ಭಯೋತ್ಪಾದಕರ ತಂಡವೊಂದು CRPF ಜವಾನರ ಮೇಲೆರಗಿದೆ. ಈ ಭೀಕರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಶ್ರೀನಗರ(ಆ.17):  ಜಮ್ಮ ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಭಾರತದ ಭದ್ರತಾ ಪಡೆಗಳು ಅವಿರತ ಶ್ರಮ ವಹಿಸುತ್ತಿದೆ. ಸರ್ಚ್ ಆಪರೇಶನ್, ಕೂಬಿಂಗ್ ಮೂಲಕ ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ಮಾಡಿ ಉಗ್ರರ ಸದೆಬಡಿಯುತ್ತಿದೆ. ಆದರೆ ಬಾರಾಮುಲ್ಲಾದಲ್ಲಿ ಭಯೋತ್ಪಾದಕರ ಗುಂಪು ಇಬ್ಬರು CRPF ಜವಾನರು ಹಾಗೂ ಒರ್ವ ಪೊಲೀಸ್ ಮೇಲೆ ಗುಂಡಿನ ದಾಳಿ ಮಾಡಿದೆ. ಇದಿರಿಂದ ಮೂವರು ಹುತಾತ್ಮರಾಗಿದ್ದಾರೆ.

14 ಸಾವಿರ ಅಡಿ ಎತ್ತರದ ಲಡಾಖ್ ಗಡಿಯಲ್ಲಿ ಮೊಳಗಿದ ಜೈ ಹಿಂದ್ ಘೋಷಣೆ!...

ಉತ್ತರ ಕಾಶ್ಮೀದ ಬಾರಮುಲ್ಲಾದ ಕ್ರೀರಿ ವಲಯದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇಬ್ಬರು  CRPF ಜವಾನರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಮೇಲೆ ಭಯೋತ್ಪಾದಕರು ಗಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಿ ದಾಳಿ ನಡೆಸಲಾಗಿದ್ದು, ಓರ್ವ ಭಯೋತ್ವಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಹೇಳಿದ್ದಾರೆ.

ಭಾರತದ ನೆತ್ತಿಯ ಮೇಲೆ ಯುದ್ಧದ ಕಾರ್ಮೋಡ?: ಕಮಾಂಡರ್‌ಗಳಿಗೆ ಸೂಚನೆ!

ಮುಂಜಾನೆ ಈ ಘಟನೆ ನಡೆದಿದೆ. ಹೀಗಾಗಿ ಕ್ರೀರಿ ವಲಯದಲ್ಲಿ ಭಯೋತ್ಪಾದಕರು ಅಡಗಿರುವ ಶಂಕೆ ಇದೆ. ಇಷ್ಟೇ ಅಲ್ಲ ವ್ಯವಸ್ಥಿತಿ ತಂಡ ಕಾರ್ಯನಿರ್ವಹಿಸುತ್ತಿರುವ ಮಾಹಿತಿಯನ್ನು ಸೇನೆ ಪಡೆದುಕೊಂಡಿದೆ. ಇದೀಗ ಬಾರಾಮುಲ್ಲದ ಕ್ರೀರಿ ವಲಯದಲ್ಲಿ ಸರ್ಚ್ ಆಪರೇಶನ್ ನಡೆಸಲು ಸೇನೆ ನಿರ್ಧರಿಸಿದೆ
 

click me!