ಸಹೋದರಿಯರ ಹಠಕ್ಕೆ ಮಣಿದ ಭಾರತ, ನೇಪಾಳ: ಕೆಲ ಸಮಯ ಗಡಿ ಓಪನ್!

By Suvarna News  |  First Published Aug 4, 2020, 1:48 PM IST

ಅಣ್ಣ- ತಂಗಿಯ ಬಾಂಧವ್ಯದೆದುರು ಸೋತ ಉಭಯ ರಾಷ್ಟ್ರಗಳು| ಕೆಲ ಸಮಯಕ್ಕೆ ಗಡಿ ಓಪನ್| ಭದ್ರತೆ ಇದ್ದರೂ ರಾಖಿ ಕಟ್ಟದೇ ಹೋಗಲ್ಲ ಎಂದು ಹಠಕ್ಕೆ ಬಿದ್ದ ತಂಗಿಯರು


ನವದೆಹಲಿ(ಆ.04):  ಭಾರತ ಹಾಗೂ ನೇಪಾಳ ನಡುವೆ ಇರುವ ರೋಟಿ-ಭೇಟಿ ಎಂಬ ಸಂಬಂಧ ನಿಜಕ್ಕೂ ಇದೆ ಎಂಬುವುದು ಸೋಮವಾರ ಸಂಭವಿಸಿದ ಭಾವನಾತ್ಮಕ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ರಕ್ಷಾ ಬಂಧನ ಸಂದರ್ಭದಲ್ಲಿ ರೂಪಯಿ ಡೀಹಾ ಗಡಿಯ ಎರಡೂ ಬದಿಯಲ್ಲಿದ್ದ ನೂರಾರು ಸಹೋದರಿಯರು ಗಡಿಯಾಚೆ ಇದ್ದ ತಮ್ಮ ಸಹೋದರರಿಗೆ ರಾಖಿ ಕಟ್ಟಲು ಹಠ ಹಿಡಿದಿದ್ದು, ಎರಡೂ ರಾಷ್ಟ್ರಗಳು ಈ ಸಂಬಂಧದೆದುರು ಮಂಡಿಯೂರಿವೆ. ಈ ಅಣ್ಣ- ತಂಗಿಯರ ಬಾಂಧವ್ಯದ ಮಧ್ಯೆ ಕೊರೋನಾ ವೈರಸ್, ಹೈ ಅಲರ್ಟ್, ಉಭಯ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯ ಹಾಗೂ ಲಾಕ್‌ಡೌನ್‌ನ ನಿಯಮಗಳೆಲ್ಲರೂ ಮೂಲೆ ಸೇರಿವೆ. ಹೀಗಾಗಿ ರಕ್ಷಾ ಬಂಧನದ ಸಂದರ್ಭದಲ್ಲಿ ಅರ್ನಣ-ತಂಗಿಯರಿಗಾಗಿ ಎರಡೂ ದೇಶಗಳು ಇವರ ಬಾಂಧವ್ಯಕ್ಕೆ  ಸೋತು ಕೆಲ ಸಮಯ ಗಡಿತೆರೆಯಲೇಬೇಕಾಯಿತು.

ಹಸುವಿನ ಸಗಣಿಯ 'ಕೊರೋನಾ ರಾಖಿ' ಇದು ಒಳ್ಳೆಯದು!

Latest Videos

undefined

ಸಶಸ್ತ್ರ ಮೀಸಲು ಪಡಯ 42ನೇ ಬೆಟಾಲಿಯನ್ ಕಮಾಂಡೆಂಟ್ ಪ್ರವೀಣ್ ಕುಮಾರ್ ಮಂಗಳವಾರ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಕೊರೋನಾ ಮಹಾಮಾರಿ ಹಾಗೂ ಅಯೋಧ್ಯೆ ಶಿಲಾನ್ಯಾಸ ಗಮನದಲ್ಲಿಟ್ಟುಕೊಂಡು ಗಡಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಹೀಗಿದ್ದರೂ ಸೋಮವಾರ ರಕ್ಷಾ ಬಂಧನದ ದಿನ ಬೆಳಗ್ಗಿನಿಂದಲೇ ಭಾರತ ಹಾಗೂ ನೇಪಾಳದ ರೂಪಯಿ ಡೀಹಾ ಗಡಿಯಲ್ಲಿ ಎರಡೂ ದೇಶದ ಸಹೋದರಿಯರು ಕೈಯ್ಯಲ್ಲಿ ರಾಖಿ, ಸಿಹಿತಿಂಡಿ, ದೀಪ, ಅಕ್ಷತೆ ಹಾಗೂ ಆರತಿ ತಟ್ಟೆ ಹಿಡಿದು ತಮ್ಮ ಸಹೋದರರಿಗೆ ರಾಖಿ ಕಟ್ಟಲು ತುದಿಗಾಲಿನಲ್ಲಿ ಕಾದು ನಿಂತಿದ್ದರು. ಮತ್ತೊಂದೆಡೆ ಸಹೋದರರು ತಮ್ಮ ಮುದ್ದಿನ ತಂಗಿಯರಿಗಾಗಿ ಕಣ್ಣು ಮಿಟುಕಿಸದೆ ಕಾಯುತ್ತಿದ್ದರು.

ಮಾನಸಿಕ ಒತ್ತಡ ನಿವಾರಣೆ, ಬುದ್ದಿಶಕ್ತಿ ಚೇತರಿಕೆಗೆ ಅಗ್ನಿಹೋತ್ರ ಬಹಳ ಒಳ್ಳೆಯದು..!

ಇವರಲ್ಲಿ ಕೆಲವರು ಲಕ್ನೋ, ದೆವರಿಯಾ, ಗೊಂಡ, ಬಲರಾಮಪುರ ಹಾಗೂ ಶ್ರಾವಸ್ತಿಯಿಂದ ಆಗಮಿಸಿದ್ದರು. ಇದನ್ನು ಗಮನಿಸಿ ಅನೇಕ ಪ್ರಯತ್ನಗಳ ಬಳಿಕ ನೇಪಾಳದ ಅಧಿಕಾರಿಗಳನ್ನು ಸಂಪರ್ಕಿಸಿ ಕೆಲ ಸಮಯ ಗಡಿ ತೆರೆಯುವಂತೆ ಓಲೈಸಲು ಯಶಸ್ವಿಯಾದೆವು ಎಂದಿದ್ದಾರೆ.

click me!