ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ಹಸ್ತಾಂತರ!

By Kannadaprabha NewsFirst Published Aug 4, 2020, 1:02 PM IST
Highlights

ರಾಮ ಮಂದಿರ ಶಂಕು ಸ್ಥಾಪನೆಗೆ ಎರಡು ದಿನ ಬಾಕಿ| ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ಹಸ್ತಾಂತರ!| ಭೂಮಿಯ ದಾಖಲೆಗಳನ್ನು ಹಸ್ತಾಂತರಿಸಿದ ಅಯೋಧ್ಯೆ ಜಿಲ್ಲಾಧಿಕಾರಿ

ಅಯೋಧ್ಯೆ(ಆ.04): ರಾಮ ಮಂದಿರ ಶಂಕು ಸ್ಥಾಪನೆಗೆ ಎರಡು ದಿನ ಬಾಕಿ ಇರುವಾಗಲೇ, ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ಪಕ್ಷಕ್ಕೆ ಐದು ಎಕರೆ ಭೂಮಿ ಹಸ್ತಾಂತರಿಸಲಾಗಿದೆ. ಅಯೋಧ್ಯೆ ಜಿಲ್ಲಾಧಿಕಾರಿ ಅನುಜ್‌ ಕುಮಾರ್‌ ಝಾ ಅವರು ಸೋಮವಾರ ಭೂಮಿಯ ದಾಖಲೆಗಳನ್ನು ಸುನ್ನೀ ವಖ್‌್ಫ ಬೋರ್ಡ್‌ಗೆ ಹಸ್ತಾಂತರಿಸಿದರು.

ವಖ್‌್ಫ ಬೋರ್ಡ್‌ ಅಧ್ಯಕ್ಷ ಝುಫರ್‌ ಫಾರೂಖಿ ಹಾಗೂ ಸಿಒಒ ಸಯ್ಯದ್‌ ಮೊಹಮ್ಮದ್‌ ಶುಐಬ್‌ ನೇತೃತ್ವದಲ್ಲಿ, ಮಸೀದಿ ನಿರ್ಮಾಣಕ್ಕೆ ರಚಿಸಲಾಗಿರುವ ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಶನ್‌ನ ನಿಯೋಗ ಜಿಲ್ಲಾಧಿಕಾರಿಗಳಿಂದ ಭೂ ದಾಖಲೆಗಳನ್ನು ಪಡೆದುಕೊಂಡಿದೆ. ರಾಮ ಮಂದಿರದಿಂದ 25 ಕಿ.ಮಿ ದೂರದ ಫೈಜಾಬಾದ್‌ನ ಧನ್ನೀಪುರ ಎಂಬಲ್ಲಿ ಸ್ಥಳ ನೀಡಲಾಗಿದೆ.

2019 ನ.9 ತೀರ್ಪಿನ ವೇಳೆ ಸುನ್ನೀ ವಖ್‌್ಫ ಮಂಡಳಿಗೆ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಬೇಕು ಎಂದು ಸವೋಚ್ಛ ನ್ಯಾಯಾಲಯ ತೀರ್ಪು ನೀಡಿತ್ತು.

click me!