
ನವದೆಹಲಿ(ಜೂ.05): ಕೊರೋನಾ ವೈರಸ್ನ ಮೂಲ ಪತ್ತೆಯ ತನಿಖೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಾಯದ ಬೆನ್ನಲ್ಲೇ, ವೈರಸ್ ಮೂಲದ ವಿರುದ್ಧ ಕ್ರಿಮಿನಲ್ ತನಿಖೆ ನಡೆಸಲು ಭಾರತ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತ ಎಫ್ಐಆರ್ಗಾಗಿ ಕರಡು ಪ್ರಸ್ತಾವನೆ ಸಿದ್ಧವಾಗಿದ್ದು, ಈ ಪ್ರಸ್ತಾವನೆ ಅನುಮೋದನೆಗೊಂಡಲ್ಲಿ, ‘ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ ಕಾಯ್ದೆ-2005’ ಹಾಗೂ ಇತರ ಕಾಯ್ದೆಯಡಿ ಕೇಸ್ ದಾಖಲಾಗಬಹುದು. ಕೊರೋನಾ ಮೂಲ ಪತ್ತೆಯಾಗಿದ್ದು ಚೀನಾದ ವುಹಾನ್‌ನಲ್ಲಿ. ಇದನ್ನು ಜೈವಿಕ ಯುದ್ಧಕ್ಕೆ ಚೀನಾ ಬಳಸಿಕೊಂಡಿದೆ ಎಂಬ ದೂರು ದಾಖಲಿಸಿಕೊಂಡು ಎನ್‌ಐಎ ಇದರ ತನಿಖೆ ಆರಂಭಿಸಬಹುದು. ಪ್ರಕರಣದ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷದಿಂದ ಗರಿಷ್ಠ ಜೀವಾವಧಿವರೆಗೆ ಶಿಕ್ಷೆ ಆಗಲಿದೆ. ಆದರೆ ಇದನ್ನೂ ಚಿಂತನಾ ಹಂತದಲ್ಲಿದ್ದು ಅಂತಿಮ ನಿರ್ಧಾರ ಆಗಿಲ್ಲ ಎಂದು ತಿಳಿದುಬಂದಿದೆ.
ಆದರೂ ಈ ಕೇಸ್ ಕೇವಲ ಸಾಂಕೇತಿಕವಾಗಿರಬಹುದು. ಭಾರತವು ಯಾವುದೇ ಕಾರಣಕ್ಕೂ ಜೈವಿಕ ಯುದ್ಧವನ್ನು ಸಹಿಸುವುದಿಲ್ಲ ಎಂಬ ಸಂದೇಶವನನ್ನು ವಿಶ್ವಕ್ಕೆ ಸಾರಲು ಮುಂದಾಗಿದೆ ಎಂದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ