
ಚೆನ್ನೈ(ಜೂ.05): ತಮಿಳುನಾಡಿನ ವಂದಲೂರು ಪಟ್ಟಣದಲ್ಲಿರುವ ಆರಿಗನಾರ್ ಅಣ್ಣಾ ಪ್ರಾಣಿಶಾಸ್ತ್ರದ ಮೃಗಾಲಯದಲ್ಲಿ ಕೋವಿಡ್ ಸೋಂಕಿನಿಂದ ಸಿಂಹವೊಂದು ಸಾವಿಗೀಡಾಗಿದೆ. ಇದು ಕೋವಿಡ್ ಸೋಂಕಿಗೆ ದೇಶದಲ್ಲಿ ಬಲಿಯಾದ ಮೊದಲ ಪ್ರಾಣಿ ಎನ್ನಿಸಿಕೊಂಡಿದೆ.
ಮೊದಲ ಪರೀಕ್ಷೆಯಲ್ಲಿ ಇದಕ್ಕೆ ಕೋವಿಡ್ ದೃಢಪಟ್ಟಿದೆ. ಆದಾಗ್ಯೂ, ಮೃಗಾಲಯದ ಅಧಿಕಾರಿಗಳು ‘ನೀಲಾ’ ಎಂಬ ಈ ಸಿಂಹ ನಿಜಕ್ಕೂ ಕೋವಿಡ್‌ಗೇ ಬಲಿಯಾಗಿದೆಯೇ ಅಥವಾ ಪೂರ್ವರೋಗಗಳು ಅಥವಾ ಇನ್ನಾವುದೋ ವೈರಸ್‌ಗೆ ಬಲಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೈದರಾಬಾದ್ ಹಾಗೂ ಉತ್ತರ ಪ್ರದೇಶದ ಬರೇಲಿಯ ಉನ್ನತ ಪ್ರಯೋಗಾಲಯಕ್ಕೆ ಸಿಂಹಗಳ ಸ್ಯಾಂಪಲ್ ಕಳಿಸಿಕೊಡಲು ನಿರ್ಧರಿಸಿದ್ದಾರೆ.
ಉದ್ಯಾನದಲ್ಲಿ ಒಟ್ಟಾರೆ 11 ಸಿಂಹಗಳಿದ್ದು, ಅವುಗಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ಪ್ರಕಾರ, ಮೊದಲಿನ ಪರೀಕ್ಷೆಯಲ್ಲಿ 9 ಸಿಂಹಗಳಲ್ಲಿ ಕೋವಿಡ್ ವೈರಾಣು ಪತ್ತೆಯಾಗಿದೆ. ಇದರಲ್ಲಿ ನೀಲಾ ಎಂಬ ಸಿಂಹಿಣಿ ಮೃತಪಟ್ಟಿದೆ. ಉಳಿದ 8 ಸಿಂಹಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಝೂ ಪ್ರಕಟಣೆ ತಿಳಿಸಿದೆ.
ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಉದ್ಯಾನವನವನ್ನು ಸಹ ಕಳೆದೊಂದು ತಿಂಗಳಿಂದ ಮುಚ್ಚಲಾಗಿದೆ. ಆದಾಗ್ಯೂ, ಸಿಂಹಗಳಿಗೆ ಸೋಂಕು ಹೇಗೆ ಹಬ್ಬಿತು ಎಂಬುದು ಸಿಬ್ಬಂದಿಯ ತಲೆಬಿಸಿಯಾಗಿದೆ.
ಇತ್ತೀಚೆಗಷ್ಟೇ ಹೈದರಾಬಾದ್ನ ನೆಹರೂ ಪ್ರಾಣಿಗಳ ಉದ್ಯಾನವನದಲ್ಲಿ 8 ಸಿಂಹಗಳು ಕೋವಿಡ್‌ಗೆ ಸಿಲುಕಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ