ಎಲ್ಲಾ ಸಂಸದರ ಸಂಬಳ, ಭತ್ಯೆ, ಪಿಂಚಣಿ ಹೆಚ್ಚಳ; ಜನಸಾಮಾನ್ಯರು ಸಂಕಷ್ಟದಲ್ಲಿರುವಾಗ ಕೇಂದ್ರದ ಈ ನಿರ್ಧಾರ ಸರಿಯೇ?

ಭಾರತದಲ್ಲಿ ಸಂಸದರ ಸಂಬಳ ಹೆಚ್ಚಳವು ವಿವಾದಕ್ಕೆ ಕಾರಣವಾಗಿದೆ. ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಸಾಮಾನ್ಯ ಜನರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ.

India MP salary Hike 2025 Centre notifies 24 per cent hike in salaries rav

ದೆಹಲಿ (ಮಾ.28): ಭಾರತದಲ್ಲಿ ಇತ್ತೀಚೆಗೆ ಸಂಸದರ ಸಂಬಳ, ಭತ್ಯೆ ಮತ್ತು ಪಿಂಚಣಿಯಲ್ಲಿ ಗಣನೀಯ ಹೆಚ್ಚಳವನ್ನು ಘೋಷಿಸಲಾಗಿದೆ. ಈ ನಿರ್ಧಾರವು ಹಣದುಬ್ಬರಕ್ಕೆ ಅನುಗುಣವಾಗಿ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಈ ಹೆಚ್ಚಳದ ಸುದ್ದಿಯು ಸಾಮಾನ್ಯ ಜನರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ, ಏಕೆಂದರೆ ದೇಶದಲ್ಲಿ ಆರ್ಥಿಕ ಅಸಮಾನತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಸದರ ಸೌಲಭ್ಯಗಳು ಹೆಚ್ಚುತ್ತಿರುವಾಗ, ಸಾಮಾನ್ಯ ಕಾರ್ಮಿಕರು ಮತ್ತು ದುಡಿಯುವ ಜನರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

 ಆಶ್ಚರ್ಯಕರ ಸಂಗತಿಯೆಂದರೆ, ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಯಾವುದೇ ಪಕ್ಷವು ಈ ಸಂಬಳ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿಲ್ಲ. ಇದು ರಾಜಕೀಯ ವರ್ಗದ ಒಮ್ಮತದ ಸ್ವಾರ್ಥವನ್ನು ತೋರಿಸುತ್ತದೆ.

Latest Videos

ಬೆಲೆ ಏರಿಕೆ ಸಂಕಷ್ಟದಲ್ಲಿ ಸಾಮಾನ್ಯಜನರು!

 ಒಂದೆಡೆ ಸಂಸದರ ಸಂಬಳ ಮತ್ತು ಸೌಲಭ್ಯಗಳು ಹೆಚ್ಚುತ್ತಿರುವಾಗ, ಸಾಮಾನ್ಯ ಕಾರ್ಮಿಕರು ಮತ್ತು ಕಷ್ಟಪಟ್ಟು ದುಡಿಯುವ ಜನರ ಆದಾಯವು ಹೆಚ್ಚಳವಾಗುತ್ತಿಲ್ಲ. ಕಾರ್ಮಿಕರ ಕನಿಷ್ಠ ವೇತನದಲ್ಲೂ ಗಣನೀಯ ಏರಿಕೆಯಾಗಿಲ್ಲ. ಗೌರವ ಧನ ಹೆಚ್ಚಿಸಲು ಆಶಾ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತರು ಒಂದೆಡೆ ಗೌರವಧನ ಹೆಚ್ಚಳಕ್ಕೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ರೀತಿ ಹೆಚ್ಚಳ ಮಾಡಲಾಗಿಲ್ಲ. ಇಂದಿನ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ದೈನಂದಿನ ಅಗತ್ಯಗಳನ್ನು ಪೂರೈಸಲು ಹೋರಾಡುತ್ತಿದ್ದಾರೆ. ಹಣದುಬ್ಬರ ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಮೂಲಭೂತ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಸಾಮಾನ್ಯ ಜನರಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದೆ, ಆದರೆ ಇಂಥ ಪರಿಸ್ಥಿತಿಯಲ್ಲಿ ಸಂಸದರ ಸಂಬಳ ಹೆಚ್ಚಳವು ಈ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯವಹಿಸಿದಂತೆ ಕಾಣುತ್ತಿದೆ.

ಇದನ್ನೂ ಓದಿ: 8ನೇ ವೇತನ ಆಯೋಗ ಜಾರಿಯಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ 19,000 ದಷ್ಟು ಏರಿಕೆ

ನಿರುದ್ಯೋಗ ಸಮಸ್ಯೆ: ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ, ವಿಶೇಷವಾಗಿ ಯುವಕರಲ್ಲಿ. ಉದ್ಯೋಗ ಸೃಷ್ಟಿಗೆ ಸರ್ಕಾರದಿಂದ ಪರಿಣಾಮಕಾರಿ ಕ್ರಮಗಳು ಕಂಡುಬರುತ್ತಿಲ್ಲ, ಆದರೆ ಸಂಸದರ ಸೌಲಭ್ಯಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ದೇಶದಲ್ಲಿ ಸಾಮಾನ್ಯ ಜನರ ಜೀವನಮಟ್ಟ ಕುಸಿದಿರುವಾಗ ಸಂಸದ ವೇತನ ಹೆಚ್ಚಳ ಅಗತ್ಯವೇ? ಎಂದು ಯಾವ ಪ್ರತಿಪಕ್ಷಗಳು ಪ್ರತಿಭಟನೆ ನಡೆಸದಿರುವುದು ಆಶ್ಚರ್ಯಕರ ಸಂಗತಿ ಎಂದು ದೇಶವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಅಸಮಾನತೆ:

ಅಂತರ ಹೆಚ್ಚಳ: ಸಂಸದರ ಸಂಬಳ ಮತ್ತು ಸೌಲಭ್ಯಗಳ ಹೆಚ್ಚಳವು ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಶ್ರೀಮಂತರು ಮತ್ತು ರಾಜಕಾರಣಿಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಿದ್ದಾರೆ, ಆದರೆ ಸಾಮಾನ್ಯ ಜನರ ಆರ್ಥಿಕ ಸ್ಥಿತಿ ದಿನೇದಿನೆ ಹದಗೆಡುತ್ತಿದೆ. ಸಂಸದ ವೇತನ ಹೆಚ್ಚಳ ನಿರ್ಧಾರವು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಜನರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, 'ಸಂಸದರ ಸಂಬಳ ಹೆಚ್ಚುತ್ತಿದೆ, ಆದರೆ ಸಾಮಾನ್ಯ ಜನರ ಆದಾಯ ಕಡಿಮೆಯಾಗುತ್ತಿದೆ' ಎಂದು ಆರೋಪಿಸುತ್ತಿದ್ದಾರೆ.

 ಸರ್ಕಾರದ ಈ ನಿರ್ಧಾರವು ಆರ್ಥಿಕ ನೀತಿಯ ಆದ್ಯತೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸುವ ಬದಲು, ರಾಜಕಾರಣಿಗಳ ಸೌಲಭ್ಯಗಳಿಗೆ ಆದ್ಯತೆ ನೀಡುವುದು ಸರಿಯೇ ಎಂಬ ಚರ್ಚೆ ಆರಂಭವಾಗಿದೆ.

8ನೇ ವೇತನ ಆಯೋಗ: ಸಂಬಳದ ಬಗ್ಗೆ ದೊಡ್ಡ ಅನೌನ್ಸ್‌ಮೆಂಟ್! ಲೆಕ್ಕಾಚಾರ ತಿಳ್ಕೊಳ್ಳಿ..

ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. 'ದೇಶದ ಜಿಡಿಪಿ ಸಂಸದರ ಜೇಬಿನಲ್ಲಿ ಬೆಳೆಯುತ್ತಿದೆಯೇ?' ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಸಂಸದರ ಸಂಬಳ, ಭತ್ಯೆ ಮತ್ತು ಪಿಂಚಣಿ ಹೆಚ್ಚಳದ ಈ ನಿರ್ಧಾರವು ಭಾರತದಲ್ಲಿ ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ಸಾಮಾನ್ಯ ಜನರು ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವಾಗ, ರಾಜಕಾರಣಿಗಳ ಸೌಲಭ್ಯಗಳಿಗೆ ಆದ್ಯತೆ ನೀಡುವುದು ಎಷ್ಟು ಸರಿ? ಈ ಸಂದರ್ಭದಲ್ಲಿ, ಸರ್ಕಾರವು ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸುವತ್ತ ಗಮನ ಹರಿಸುವುದು ಅಗತ್ಯವಾಗಿದೆ. 

vuukle one pixel image
click me!